EPF Withdrawal Rules : ಉದ್ಯೋಗದಲ್ಲಿರುವವರು ಪ್ರತಿ ತಿಂಗಳು ತಮ್ಮ ವೇತನದ ನಿರ್ದಿಷ್ಟ ಮೊತ್ತವನ್ನು ಇಪಿಎಫ್ ಖಾತೆಗೆ ಜಮಾ ಮಾಡುತ್ತಾರೆ. ಉದ್ಯೋಗಿಯ ವೇತನದಿಂದ ಎಷ್ಟು ಮೊತ್ತವನ್ನು ಇಪಿಎಫ್ ಗಾಗಿ ಕಡಿತ ಮಾಡಲಾಗಿರುತ್ತದೆಯೋ, ಅಷ್ಟೇ ಪ್ರಮಾಣದ ಮೊತ್ತವನ್ನು ಕಂಪನಿ ಕೂಡಾ ಖಾತೆಗೆ ವರ್ಗಾವಣೆ ಮಾಡುತ್ತದೆ. ಇಪಿಎಫ್‌ನಲ್ಲಿ ಠೇವಣಿ ಇಡುವ ಮೊತ್ತ ನಿವೃತ್ತಿ ಜೀವನದಲ್ಲಿ ಸಹಾಯಕ್ಕೆ ಬರುತ್ತದೆ. ನಿವೃತ್ತಿ ಜೀವನದಲ್ಲಿ ಯಾರ ಹಂಗೂ ಇಲ್ಲದೆ ಸ್ವಾಭಿಮಾನದಿಂದ ಬದುಕಲು ಇದು ನೆರವಾಗುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) EPF ಕೊಡುಗೆಗಳನ್ನು ನಿರ್ವಹಿಸುತ್ತದೆ.


COMMERCIAL BREAK
SCROLL TO CONTINUE READING

ಇನ್ನು ಎಮರ್ಜೆನ್ಸಿ ಎನ್ನುವುದು ಯಾರನ್ನೂ ಹೇಳಿ ಕೇಳಿ ಬರುವದಿಲ್ಲ. ಹಣಕಾಸಿನ ಅಭಾವ ಯಾವಾಗ ಬೇಕಾದರೂ ಎದುರಾಗಬಹುದು. ಹೀಗೆ ಉದ್ಯೋಗಿಗಳಿಗೆ ಹಣದ ಅಗತ್ಯವಿದ್ದಾಗ ಸಾಲ ಪಡೆಯುವ ಅವಕಾಶವನ್ನು EPFO ಕಲ್ಪಿಸುತ್ತದೆ. ಕೆಲಸ ಮಾಡುತ್ತಿರುವಾಗ ಪಿಎಫ್‌ನ ಭಾಗಶಃ ಮೊತ್ತವನ್ನು ಉದ್ಯೋಗಿಗಳು ಪಡೆದುಕೊಳ್ಳಬಹುದು. ಈ ವಿಚಾರ ಹೆಚ್ಚಿನ ಉದ್ಯೊಗಿಗಳಿಗೆ ತಿಳಿದಿಲ್ಲ. ಇಪಿಎಫ್ ಖಾತೆಯಲ್ಲಿ ಪ್ರತಿ ತಿಂಗಳು ಠೇವಣಿ  ಮಾಡುವ ಮೊತ್ತ ನಿವೃತ್ತಿಯ ನಂತರವೇ ನಮ್ಮ ಕೈ ಸೇರುವುದು ಎನ್ನುವುದು ಹಲವರ ಅಭಿಪ್ರಾಯವಾಗಿರುತ್ತದೆ. ಆದರೆ, ಅದು ಹಾಗಲ್ಲ. ಮಧ್ಯದಲ್ಲಿಯೂ ಹಣವನ್ನು  ಹಿಂಪಡೆಯಬಹುದು. ಕೆಲವು ವಿಶೇಷ ಸಂದರ್ಭಗಳಲ್ಲಿ ನಿವೃತ್ತಿಯ ಮುಂಚೆಯೇ ಪಿಎಫ್ ಮೊತ್ತವನ್ನು ಹಿಂಪಡೆಯುವ ಅವಕಾಶ ಕಲ್ಪಿಸಲಾಗಿದೆ. ಆದರೆ, ನಿವೃತ್ತಿಯ ಮೊದಲು ಈ ಮೊತ್ತವನ್ನು ಹಿಂಪಡೆಯಲು ಕೆಲವು ನಿಯಮಗಳಿವೆ. ಇವುಗಳನ್ನು ಅನುಸರಿಸುವುದು ಬಹಳ ಮುಖ್ಯ. 


ಇದನ್ನೂ ಓದಿ : UDGAM Portal: ಹಳೆಯ ಕ್ಲೈಮ್ ಮಾಡದ ಠೇವಣಿಗಳಿಂದ ಹಣ ಹಿಂಪಡೆಯಲು ಆರ್‌ಬಿ‌ಐನ ಈ ಪೋರ್ಟಲ್ ಬಳಸಿ


ಪಿಎಫ್ ಹಣವನ್ನು ಈ ಕೆಳಗಿನ ವಿಧಾನಗಳಲ್ಲಿ ಹಿಂಪಡೆಯಬಹುದು:
- ಪಿಎಫ್ ಮೊತ್ತವನ್ನು ಅಗತ್ಯಕ್ಕೆ ಅನುಗುಣವಾಗಿ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಹಿಂಪಡೆಯಬಹುದು.
- ತುರ್ತು ಸಂದರ್ಭದಲ್ಲಿ ಫಾರ್ಮ್ 19 ಬಳಸಿಕೊಂಡು ಪಿಎಫ್ ಮೊತ್ತವನ್ನು ಹಿಂಪಡೆಯಬಹುದು. 
- ಇದರ ಮೂಲಕ ನೀವು ನಿಮ್ಮ ಇಪಿಎಫ್ ಖಾತೆಯಲ್ಲಿ ಉಳಿಸಿದ ಮೊತ್ತದ ಒಂದು ಭಾಗವನ್ನು ಹಿಂಪಡೆಯಬಹುದು.
- ಮೊತ್ತಕ್ಕೆ ಅರ್ಜಿ ಸಲ್ಲಿಸಿದ 20 ದಿನಗಳಲ್ಲಿ ಪಾವತಿಯನ್ನು ಸ್ವೀಕರಿಸದಿದ್ದರೆ, ಪ್ರಾದೇಶಿಕ ಪಿಎಫ್ ಆಯುಕ್ತರಿಗೆ ದೂರು ನೀಡಬಹುದು.
- ಪ್ರಾದೇಶಿಕ ಪಿಎಫ್ ಕಚೇರಿಯ ವೆಬ್‌ಸೈಟ್‌ನಲ್ಲಿಯೂ ದೂರು ದಾಖಲಿಸಬಹುದು.


ಇಪಿಎಫ್ ಮೊತ್ತಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ? :
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಎಲ್ಲಾ EPF ಸದಸ್ಯರು EPFO ​​ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು EPF ಮೊತ್ತಕ್ಕೆ ಅರ್ಜಿ ಸಲ್ಲಿಸಬಹುದು.
- UAN ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ನಮೂದಿಸುವ ಮೂಲಕ ಲಾಗ್ ಇನ್ ಮಾಡಿ. 
- ಇದರ ನಂತರ Online Services tab ವಿಭಾಗದಲ್ಲಿ ‘Claim’  ಮೇಲೆ ಕ್ಲಿಕ್ ಮಾಡಿ.
- ಈಗ ನಿಮ್ಮ ಮುಂದೆ ಟ್ಯಾಬ್ ತೆರೆಯುತ್ತದೆ. 
- ಅದರಲ್ಲಿ ನಿಮ್ಮ ಸರಿಯಾದ ಖಾತೆ ಸಂಖ್ಯೆಯನ್ನು ನಮೂದಿಸಿ Verify ಮೇಲೆ ಕ್ಲಿಕ್ ಮಾಡಿ. 
- ಪರಿಶೀಲನೆಯ ನಂತರ, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು EPFO ​​ನೀಡಿದ ನಿಯಮಗಳನ್ನು ಅನುಸರಿಸಬೇಕು. 
- ಇದರ ನಂತರ ಇಪಿಎಫ್ ಚಂದಾದಾರರು ಕ್ಲೈಮ್‌ಗಾಗಿ ಅರ್ಜಿ ಸಲ್ಲಿಸಬಹುದು.


ಇದನ್ನೂ ಓದಿ : StartUp Idea: ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಈ ಉದ್ಯಮ ಆರಂಭಿಸಿ, ತಿಂಗಳಿಗೆ ಕೈತುಂಬಾ ಹಣ ಕೊಡುತ್ತೇ!


ಯಾವ ಸಂದರ್ಭಗಳಲ್ಲಿ ನಿವೃತ್ತಿಯ ಮೊದಲು EPF ಅನ್ನು ಹಿಂಪಡೆಯಬಹುದು? :
- ಗೃಹ ಸಾಲವನ್ನು ಮರುಪಾವತಿಸಲು.
- ಮನೆ ನಿರ್ಮಿಸುವುದಕ್ಕೆ ಅಥವಾ ಖರೀದಿಸುವುದಕ್ಕೆ .
- ವೈದ್ಯಕೀಯ ವೆಚ್ಚಕ್ಕಾಗಿ 
- ಮದುವೆ ವೆಚ್ಚಕ್ಕಾಗಿ 
- ಶಿಕ್ಷಣ ವೆಚ್ಚಕ್ಕಾಗಿ 
- ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದರೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ