Income Tax ರೇಡಾರ್ ನಲ್ಲಿ ಮನೆ ಬಾಡಿಗೆ ಭತ್ಯೆ ಕ್ಲೇಮ್ ಮಾಡುವವರು, ಆದಾಯ ತೆರಿಗೆ ವಿಭಾಗಕ್ಕೆ ಕೋಟ್ಯಂತರ ನಷ್ಟ!
House Rent Allowance Fraud: ವ್ಯಕ್ತಿಯೊಬ್ಬರು ಸಲ್ಲಿಸಿದ 1 ಕೋಟಿ ರೂಪಾಯಿ ಮೌಲ್ಯದ ಬಾಡಿಗೆ ರಸೀದಿಗಳು ನಕಲಿ ಎಂದು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲ, ಇದಕ್ಕಾಗಿ ಅವರು ಮನೆ ಮಾಲೀಕರ ಪ್ಯಾನ್ ಕಾರ್ಡ್ ಬಳಸಿದ್ದು, ಮನೆ ಮಾಲೀಕರು ಕೂಡ ಈ ರೀತಿಯ ವಂಚನೆಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ. (Business News In Kannada)
HRA Fraud: ನೀವೂ ಕೂಡ ಪ್ರತಿ ವರ್ಷ ಆದಾಯ ತೆರಿಗೆ (Income Tax) ಪಾವತಿಸುತ್ತಿದ್ದು ಮತ್ತು ಎಚ್‌ಆರ್‌ಎ ಕ್ಲೈಮ್ (HRA Claim) ಮಾಡುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕಳೆದ ಕೆಲವು ವರ್ಷಗಳಲ್ಲಿ ಆದಾಯ ತೆರಿಗೆ ವಂಚಕರು ಆದಾಯ ತೆರಿಗೆ ಇಲಾಖೆಯ ರಾಡಾರ್‌ನಲ್ಲಿದ್ದಾರೆ. ಈಗ ಕೆಲವರು ಮನೆ ಬಾಡಿಗೆ ಭತ್ಯೆ (ITR Filing) ಮೇಲೆ ತೆರಿಗೆ ವಿನಾಯಿತಿಯನ್ನು ತಪ್ಪಾಗಿ ಪಡೆದುಕೊಳ್ಳುತ್ತಿದ್ದಾರೆ ಎಂದು ಇಲಾಖೆ ಹೇಳಿಕೊಂಡಿದೆ. ಈ ಜನರಿಂದ ಶಾಶ್ವತ ಖಾತೆ ಸಂಖ್ಯೆ (PAN Card Misuse) ದುರುಪಯೋಗವಾಗುತ್ತಿದೆ ಎಂದು ಅದು ಹೇಳಿದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಈ ಜನರು ಯಾವುದೇ ರೀತಿಯ ಬಾಡಿಗೆಯನ್ನು ಪಾವತಿಸದೆ ಬಾಡಿಗೆ ಭತ್ಯೆಯ (HRA) ಲಾಭವನ್ನು ಪಡೆಯುತ್ತಿದ್ದಾರೆ. ಇಂತಹ 8000-10000 ಪ್ರಕರಣಗಳು ಇಲಾಖೆಯ ಗಮನಕ್ಕೆ ಬಂದಿವೆ. ಈ ವ್ಯಕ್ತಿಗಳು 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಬಾಡಿಗೆಯನ್ನು ಪಡೆದಿದ್ದರು.
ವ್ಯಕ್ತಿಯೊಬ್ಬರು ತೋರಿಸಿದ 1 ಕೋಟಿ ರೂಪಾಯಿ ಮೌಲ್ಯದ ಬಾಡಿಗೆ ರಸೀದಿಗಳು ನಕಲಿ ಎಂದು ಇಲಾಖೆ ಪತ್ತೆ ಹಚ್ಚಿದಾಗ ಇಂತಹ ವಂಚನೆಯ ಪ್ರಕರಣ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬಂದಿದೆ. ಯಾರ ಪ್ಯಾನ್‌ನಲ್ಲಿ 'ಬಾಡಿಗೆ ಆದಾಯ' ತೋರಿಸಲಾಗಿದೆಯೋ ಅವರು ವಿಚಾರಣೆಯ ಸಮಯದಲ್ಲಿ ಇಂತಹ ಯಾವುದೇ ಮಾಹಿತಿಯನ್ನು ಹೊಂದಿಲ್ಲ ಎಂದು ನಿರಾಕರಿಸಿದ್ದಾರೆ. ಆ ವ್ಯಕ್ತಿ ತನ್ನ ಹೆಸರಿನಲ್ಲಿ ತೋರಿಸಿದಷ್ಟು ಬಾಡಿಗೆ ಪಡೆದಿಲ್ಲ ಎಂಬುದೂ ತನಿಖೆಯಿಂದ ತಿಳಿದುಬಂದಿದೆ. ಈ ವಿಷಯ ಬೆಳಕಿಗೆ ಬಂದ ನಂತರ ಆದಾಯ ತೆರಿಗೆ ಇಲಾಖೆ ತೀವ್ರ ತನಿಖೆ ನಡೆಸಿದೆ. ಕೆಲವು ಸಂಬಳ ಪಡೆಯುವ ವರ್ಗಗಳು ಉದ್ಯೋಗದಾತರಿಂದ ತೆರಿಗೆ ಕಡಿತವನ್ನು ಪಡೆಯಲು ಪ್ಯಾನ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಅಷ್ಟೇ ಅಲ್ಲ, ಕೆಲವು ಕಂಪನಿ ಉದ್ಯೋಗಿಗಳು ಅದೇ ಪ್ಯಾನ್ ಬಳಸಿ ತೆರಿಗೆ ಕಡಿತಗೊಳಿಸಿರುವ ಪ್ರಕರಣಗಳು ಅಧಿಕಾರಿಗಳ ಗಮನಕ್ಕೂ ಬಂದಿವೆ.
ತೆರಿಗೆ ವಿನಾಯಿತಿಯನ್ನು ತಪ್ಪಾಗಿ ಕ್ಲೈಮ್ ಮಾಡುವುದು
ತೆರಿಗೆ ವಿನಾಯಿತಿಯನ್ನು ತಪ್ಪಾಗಿ ಪಡೆದಿರುವವರ ಬಗ್ಗೆ ಇಲಾಖೆ (Income Tax Department) ತನಿಖೆ ನಡೆಸುತ್ತಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ. ಅಂಥವರನ್ನು ಪತ್ತೆ ಹಚ್ಚಿ ಅವರಿಂದ ತೆರಿಗೆ ವಸೂಲಿ ಮಾಡಲಾಗುವುದು. ಆದರೆ, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು PAN ಗೆ ಸಂಬಂಧಿಸಿದ ದುರ್ಬಳಕೆಯ ವಿಷಯವಾಗಿದೆ. ಇಂತಹ ಸಂದರ್ಭಗಳಲ್ಲಿ ಪ್ಯಾನ್ ಹೊಂದಿರುವವರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ. ಪ್ರಸ್ತುತ 50,000 ರೂ.ಗಿಂತ ಹೆಚ್ಚಿನ ಮಾಸಿಕ ಬಾಡಿಗೆ ಅಥವಾ 6 ಲಕ್ಷ ರೂ.ಗಿಂತ ಹೆಚ್ಚಿನ ವಾರ್ಷಿಕ ಪಾವತಿಗೆ ಟಿಡಿಎಸ್ ಅನ್ವಯಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ, HRA ಮೇಲೆ ತೆರಿಗೆ ಪಾವತಿಸುವುದನ್ನು ತಪ್ಪಿಸಲು ಅನೇಕ ಉದ್ಯೋಗಿಗಳು ತಪ್ಪಾದ PAN ಅನ್ನು ಬಳಸುತ್ತಿದ್ದಾರೆ.
ದಂಡದೊಂದಿಗೆ ಕಾನೂನು ಕ್ರಮ ಕೈಗೊಳ್ಳಬಹುದು
ಈ ಕುರಿತು ಮಾಹಿತಿ ನೀಡಿರುವ ಚಾರ್ಟರ್ಡ್ ಅಕೌಂಟೆಂಟ್ ಆಶಿಶ್ ಮಿಶ್ರಾ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಹಿವಾಟುಗಳು ಪ್ಯಾನ್‌ಗೆ ಲಿಂಕ್ ಆಗಿವೆ. ತಂತ್ರಜ್ಞಾನ, ಸ್ವಯಂಚಾಲಿತ ಪ್ರಕ್ರಿಯೆಗಳು ಮತ್ತು ಡೇಟಾ ವಿಶ್ಲೇಷಣೆಯ ಮೂಲಕ, ನಕಲಿ ಹಕ್ಕುಗಳನ್ನು ಪತ್ತೆಹಚ್ಚಲು ತೆರಿಗೆ ಪ್ರಾಧಿಕಾರಕ್ಕೆ ಸುಲಭವಾಗಿದೆ. ಇದನ್ನು ಮಾಡುವ ವ್ಯಕ್ತಿಯು ತೆರಿಗೆ ಪಾವತಿಯೊಂದಿಗೆ ದಂಡ ಮತ್ತು ಬಡ್ಡಿಯನ್ನು ಪಾವತಿಸಬೇಕಾಗಲಿದೆ. ಅಷ್ಟೇ ಅಲ್ಲ, ಕೆಲವು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಬಹುದು. ನೀವು ನಿಮ್ಮ ಪೋಷಕರಿಗೆ ಬಾಡಿಗೆ ಪಾವತಿಸಿದರೆ, ವಹಿವಾಟನ್ನು ದೃಢೀಕರಿಸಲು ಬಾಡಿಗೆಯನ್ನು ಚೆಕ್ ಅಥವಾ ಎಲೆಕ್ಟ್ರಾನಿಕ್ ವರ್ಗಾವಣೆ (ನಗದು ಅಲ್ಲ) ಮೂಲಕ ಪಾವತಿಸಬೇಕು ಎಂದು ಅವರು ಹೇಳಿದ್ದಾರೆ. ಅಲ್ಲದೆ, ಪೋಷಕರು ತಮ್ಮ ಆದಾಯದಲ್ಲಿ ಬಾಡಿಗೆ ಆದಾಯವನ್ನು ವರದಿ ಮಾಡಬೇಕಾಗುತ್ತದೆ.
ಇದನ್ನೂ ಓದಿ-Holi 2024 Gift: ಎರಡು ಕೋಟಿ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್, ಯಾವ ಸ್ಕೀಮ್, ಯಾರಿಗೆ ಲಾಭ?
ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಹೇಳುವ ಪ್ರಕಾರ, ಅಂತಹ ವಂಚನೆ (Income Tax Fraud) ಮಾಡುವ ಸಂಪೂರ್ಣ ಜವಾಬ್ದಾರಿ ಉದ್ಯೋಗಿಯ ಮೇಲಿರುತ್ತದೆ. ಇದಕ್ಕೆ ಉದ್ಯೋಗದಾತರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ. ಅನೇಕ ಜನರು ಬಾಡಿಗೆ ಪಾವತಿಗಾಗಿ ಒಂದೇ ಪ್ಯಾನ್ ಅನ್ನು ಬಳಸುತ್ತಿದ್ದರೂ ಸಹ. ಅಂತಹ ಸಂದರ್ಭದಲ್ಲಿ, ಉದ್ಯೋಗಿಯ ಕಡೆಯಿಂದ ತನಿಖೆ ನಡೆಸಬೇಕು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ