7th Pay Commission: ಲೋಕಸಭೆ ಚುನಾವಣೆ 2024ರ ಅಧಿಸೂಚನೆ ಹೊರಡುವ ಮುನ್ನವೇ ಕೇಂದ್ರ ಸರ್ಕಾರ ತನ್ನ ಲಕ್ಷಾಂತರ ನೌಕರರ ತುಟ್ಟಿಭತ್ಯೆಯನ್ನು (DA) ಶೇ.50ಕ್ಕೆ ಹೆಚ್ಚಿಸಿದೆ. ಮಾರ್ಚ್ ಮೊದಲ ವಾರದಲ್ಲಿ ಸರ್ಕಾರ ಈ ಘೋಷಣೆ ಮಾಡಿತ್ತು. ಇದನ್ನು ಜನವರಿ 1, 2024 ರಿಂದ ದೇಶಾದ್ಯಂತ ಕೇಂದ್ರ ನೌಕರರಿಗೆ ಜಾರಿಗೊಳಿಸಲಾಗಿದೆ. ನಿಯಮಗಳ ಪ್ರಕಾರ, DA 50% ತಲುಪಿದಾಗ, ಮನೆ ಬಾಡಿಗೆ ಭತ್ಯೆ (HRA) ಮತ್ತು ಇತರ ಕೆಲವು ಭತ್ಯೆಗಳಲ್ಲಿ ಬದಲಾವಣೆಯಾಗಳಿವೆ. ಡಿಎ ಹೆಚ್ಚಳದ ಬಳಿಕ ಇದೀಗ ಕೇಂದ್ರ ಸರ್ಕಾರಿ ನೌಕರರು ಇತರ ಭತ್ಯೆಗಳಲ್ಲಿ ಬದಲಾವಣೆಗಾಗಿ ಕಾಯುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಎಚ್‌ಆರ್‌ಎ ಕುರಿತು ಇನ್ನೂ ಯಾವುದೇ ಆದೇಶ ಬಂದಿಲ್ಲ
ಭತ್ಯೆಗಳ ಪಟ್ಟಿಯನ್ನು ಈಗಾಗಲೇ ಡಿಒಪಿಟಿ ಬಿಡುಗಡೆ ಮಾಡಿದೆ. ಈ ತಿಂಗಳ ಡಿಎ ಹೆಚ್ಚಳದ ನಂತರ ಅದನ್ನು ಪರಿಷ್ಕರಿಸಲಾಗುವುದು. ಆದರೆ, ಎಚ್‌ಆರ್‌ಎ ಬದಲಾವಣೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಆದೇಶ ಹೊರಬಂದಿಲ್ಲ. ಇದೀಗ  ಎಚ್ ಆರ್ ಎ ಬದಲಾವಣೆ ಬಗ್ಗೆ ಕೇಂದ್ರ ಸರ್ಕಾರ ಪ್ರತ್ಯೇಕ ಮಾಹಿತಿ ನೀಡುವುದೇ ಎಂಬ ಪ್ರಶ್ನೆ ಮೂಡಿದೆ. ಪ್ರಸ್ತುತ DA  ಶೇ.50ಕ್ಕೆ ತಲುಪಿದ ಕಾರಣ ಎಚ್ಆರ್ಎ ಹೆಚ್ಚಳ ಎಷ್ಟು? ಎಂಬ ಪ್ರಶ್ನೆ ಸರ್ಕಾರಿ ನೌಕರರ ಮನದಲ್ಲಿ ಮೂಡಿದೆ. 


DA ಶೇ.50ಕ್ಕೆ ತಲುಪಿದಾಗ HRA ಬದಲಾವಣೆ ನಿಗದಿಪಡಿಸಲಾಗುತ್ತದೆ
ಕೇಂದ್ರ ನೌಕರರ ಡಿಎ ಶೇ. 50 ರಷ್ಟು ತಲುಪಿದ ಬಳಿಕ HRA ನಲ್ಲಿ ಬದಲಾವಣೆಗಳು ಖಚಿತ ಎನ್ನಲಾಗುತ್ತದೆ. ಆದರೆ ಡಿಎ ಬದಲಾವಣೆಯು ನಗರದ ವರ್ಗಕ್ಕೆ ಅನುಗುಣವಾಗಿ ಕೇಂದ್ರ ನೌಕರರ ಎಚ್‌ಆರ್‌ಎ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ನಗರ ಅಂದರೆ ಉದ್ಯೋಗಿ ಮತ್ತು ಅವನ ಕುಟುಂಬ ವಾಸಿಸುವ ಸ್ಥಳವಾಗಿದೆ. HRA ಲೆಕ್ಕಾಚಾರಕ್ಕಾಗಿ, ಕೆಲವು ಅಂಶಗಳ ಆಧಾರದ ಮೇಲೆ ನಗರಗಳನ್ನು X, Y ಮತ್ತು Z ವರ್ಗಗಳಾಗಿ ವಿಂಗಡಿಸಲಾಗಿದೆ. 7ನೇ ವೇತನ ಆಯೋಗದ ಪ್ರಕಾರ, ಜುಲೈ 1, 2017 ರಿಂದ ಜಾರಿಗೆ ಬರುವಂತೆ, ವರ್ಗ X, Y ಮತ್ತು Z ನಗರಗಳಿಗೆ ಕ್ರಮವಾಗಿ ಮೂಲ ವೇತನದ 24%, 16% ಮತ್ತು 8% ರಷ್ಟು HRA ನೀಡಲಾಗುತ್ತಿದೆ.


ಹಳೆ ದರದಂತೆ HRA ಲೆಕ್ಕಾಚಾರ
DA 25% ತಲುಪಿದಾಗ, X, Y ಮತ್ತು Z ನಗರಗಳಲ್ಲಿನ HRA ದರಗಳನ್ನು ಕ್ರಮವಾಗಿ 27%, 18% ಮತ್ತು 9% ಮೂಲ ವೇತನಕ್ಕೆ ಬದಲಾಯಿಸಲಾಯಿತು. ಆದ್ದರಿಂದ, ಉದ್ಯೋಗಿಯ ಮೂಲ ವೇತನವು ರೂ 35,000 ಆಗಿದ್ದರೆ, ನಗರ ವರ್ಗದ ಪ್ರಕಾರ ಅವನು ಪಡೆಯುವ HRA ಈ ಕೆಳಗಿನಂತಿರುತ್ತದೆ-


1.) X ವರ್ಗದ ನಗರಗಳಿಗೆ, ರೂ 35,000 ರಲ್ಲಿ 27% ಅಂದರೆ ರೂ 9,450
2.) Y ವರ್ಗದ ನಗರಗಳಿಗೆ, ರೂ 35,000 ರಲ್ಲಿ 18% ಅಂದರೆ ರೂ 6,300
3.) Z ವರ್ಗದ ನಗರಗಳಿಗೆ, ರೂ 35,000 ರಲ್ಲಿ 9% ಅಂದರೆ ರೂ 3,150


ಈ ಮೂಲಕ ಎಕ್ಸ್ ಕೆಟಗರಿ ನಗರಕ್ಕೆ ಎಚ್ ಆರ್ ಎ 9,450 ರೂ., ವೈ ಕೆಟಗರಿ ನಗರಗಳಿಗೆ 6,300 ರೂ., ಝಡ್ ಮಾದರಿಯ ನಗರಕ್ಕೆ 3,150 ರೂ.  ನೀಡಲಾಗುತ್ತಿದೆ. ಆದರೆ ಇದೀಗ ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ, ಡಿಎ ಶೇ.50 ಕ್ಕೆ ತಲುಪಿದಾಗ, ಎಚ್‌ಆರ್‌ಎ ದರವನ್ನು ಎಕ್ಸ್, ವೈ ಮತ್ತು ಝಡ್ ವರ್ಗದ ನಗರಗಳಿಗೆ ಕ್ರಮವಾಗಿ 30%, 20% ಮತ್ತು 10% ಕ್ಕೆ ಹೆಚ್ಚಿಸಬೇಕು.


ಹೊಸ ದರದ ಪ್ರಕಾರ HRA ಲೆಕ್ಕಾಚಾರ
ಈಗ ಹೊಸ ದರದ ಪ್ರಕಾರ, ಕೇಂದ್ರ ನೌಕರರಿಗೆ 35,000 ರೂ ಮೂಲ ವೇತನದಲ್ಲಿ ಪರಿಷ್ಕೃತ ಎಚ್ಆರ್ಎ ನೀಡಲಾಗುವುದು. ಹೊಸ ದರದ ಪ್ರಕಾರ ಲೆಕ್ಕಾಚಾರ ತಿಳಿದುಕೊಳ್ಳೋಣ ಬನ್ನಿ


ಇದನ್ನೂ ಓದಿ-Fixed Deposit ವಿಶೇಷ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡ SBI


1.) X ವರ್ಗದ ನಗರಗಳಿಗೆ, ರೂ 35,000 ರಲ್ಲಿ 30% ಅಂದರೆ ರೂ 10,500
2.) Y ವರ್ಗದ ನಗರಗಳಿಗೆ, ರೂ 35,000 ರಲ್ಲಿ 20% ಅಂದರೆ ರೂ 7,000
3.) Z ವರ್ಗದ ನಗರಗಳಿಗೆ, ರೂ 35,000 ರಲ್ಲಿ 10% ಅಂದರೆ ರೂ 3,500


ಇದನ್ನೂ ಓದಿ-FD Interest Rates: ಸ್ಥಿರ ಠೇವಣಿ ಮಾಡುವವರಿಗೊಂದು ಗುಡ್ ನ್ಯೂಸ್, ಇಲ್ಲಿ ಸಿಗುತ್ತಿದೆ ನಿಮ್ಮ ಎಫ್ಡಿಗೆ ಅತಿ ಹೆಚ್ಚು ಬಡ್ಡಿ!


ವೇತನದಲ್ಲಾಗುವ ವ್ಯತ್ಯಾಸ ಎಷ್ಟು? 
ಈ ಮೂಲಕ ಎಕ್ಸ್ ವರ್ಗದ ಸಿಟಿಗೆ ಎಚ್ ಆರ್ ಎ 10,500 ರೂ.ಗೆ, ವೈ ವರ್ಗದ ಸಿಟಿಗೆ 7,000 ರೂ.ಗೆ ಮತ್ತು ಝಡ್ ವರ್ಗದ ಸಿಟಿಗೆ 3,500 ರೂ.ಗೆ  ಹೆಚ್ಆರ್ಎ ಏರಿಕೆಯಾಗಲಿದೆ. ಅಂದರೆ ಎಕ್ಸ್ ಮಾದರಿ ನಗರದಲ್ಲಿ ವಾಸಿಸುವ ಜನರಿಗೆ ತಿಂಗಳಿಗೆ 1050 ರೂ. ಅಂದರೆ ವಾರ್ಷಿಕ ಆಧಾರದಲ್ಲಿ ಇದು 12600 ರೂ. ಏರಿಕೆಯಾಗಲಿದೆ. ಅದೇ ರೀತಿ ವೈ ವರ್ಗದವರಿಗೆ 6,300 ರೂ.ನಿಂದ 7,000 ರೂ.ಗೆ ಏರಿಕೆಯಾಗಲಿದೆ. ವಾರ್ಷಿಕವಾಗಿ 8400 ರೂ.ಗಳು ಸಿಗಲಿವೆ. ಅದೇ ರೀತಿ ಝಡ್ ವರ್ಗದವರಿಗೆ 3,150 ರೂ.ನಿಂದ 3,500 ರೂ.ಗೆ ಏರಿಕೆಯಾಗಿದ್ದು, ವಾರ್ಷಿಕವಾಗಿ 4200 ರೂ.ಏರಿಕೆಯಾಗಲಿದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ