ಫ್ಲೈಟ್ ಬುಕ್ಕಿಂಗ್ ಮೇಲೆ ಭಾರೀ ರಿಯಾಯಿತಿ, ಅಗ್ಗದ ದರದಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ ತಿಳಿಯಿರಿ
ಈ ಕೊಡುಗೆಯಲ್ಲಿ ಸಶಸ್ತ್ರ ಪಡೆ, ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕ ವರ್ಗದ ಪ್ರಯಾಣಿಕರಿಗೆ ಪೇಟಿಎಂ ವಿಶೇಷ ರಿಯಾಯಿತಿ ನೀಡುತ್ತಿದೆ. ಈ ಆಫರ್ ಅಡಿಯಲ್ಲಿ ಈ ವರ್ಗದವರಿಗೆ ಟಿಕೆ ಟ್ ಬುಕ್ಕಿಂಗ್ ಮೇಲೆ ಶೇ.15-50ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ನವದೆಹಲಿ : ಈಗ ವಿಮಾನದಲ್ಲಿ ಅಗ್ಗವಾಗಿ ಪ್ರಯಾಣಿಸುವುದು ಸಾಧ್ಯವಾಗುತ್ತದೆ. ದೇಶದ ಹೆಸರಾಂತ ಕಂಪನಿ Paytm ವಿಮಾನ ಟಿಕೆಟ್ ಬುಕ್ಕಿಂಗ್ (Flight ticket booking) ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ಕಂಪನಿಯು ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. ಈ ರಿಯಾಯಿತಿ ಕೊಡುಗೆಯ ಅಡಿಯಲ್ಲಿ, ಸಶಸ್ತ್ರ ಪಡೆ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ ದರವನ್ನು ನೀಡಲಾಗುವುದು ಎಂದು Paytm ಹೇಳಿದೆ.
15-50% ವರೆಗೆ ರಿಯಾಯಿತಿ ಲಭ್ಯ :
ಈ ಕೊಡುಗೆಯಲ್ಲಿ ಸಶಸ್ತ್ರ ಪಡೆ, ವಿದ್ಯಾರ್ಥಿಗಳು (Students) ಮತ್ತು ಹಿರಿಯ ನಾಗರಿಕ (Senior citizen) ವರ್ಗದ ಪ್ರಯಾಣಿಕರಿಗೆ ಪೇಟಿಎಂ ವಿಶೇಷ ರಿಯಾಯಿತಿ (Paytm offer) ನೀಡುತ್ತಿದೆ. ಈ ಆಫರ್ ಅಡಿಯಲ್ಲಿ ಈ ವರ್ಗದವರಿಗೆ ಟಿಕೆ ಟ್ ಬುಕ್ಕಿಂಗ್ (discount on filght ticket) ಮೇಲೆ ಶೇ.15-50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಪ್ರಯಾಣಿಕರು ತಮ್ಮ ವಿವರಗಳನ್ನು ನಮೂದಿಸಿದ ನಂತರ ವಿಮಾನವನ್ನು ಸರ್ಚ್ ಮಾಡಬಹುದು. ನಂತರ ಅನ್ವಯವಾಗುವ ಕೊಡುಗೆಗಳಿಗಾಗಿ ಸರ್ಚ್ ಬೇಕಾಗುತ್ತದೆ. Indigo, Go Air, SpiceJet ಮತ್ತು AirAsia ನಲ್ಲಿ ಟಿಕೆಟ್ ಬುಕಿಂಗ್ ಮಾಡುವುದಾದರೆ ಈ ಆಫರ್ ಅನ್ವಯವಾಗುತ್ತದೆ.
ಇದನ್ನೂ ಓದಿ : 7th Pay Commission : ಹೊಸ ವರ್ಷಕ್ಕೆ ಏರಿಕೆಯಾಗಲಿದೆ ಕೇಂದ್ರ ನೌಕರರ ಸಂಬಳ : ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ ನೋಡಿ
ವಿದ್ಯಾರ್ಥಿಗಳಿಗೆ ಸಿಗಲಿದೆ ಆಫರ್ :
Paytm ನ ಈ ವಿಶೇಷ ಕೊಡುಗೆಯ ಅಡಿಯಲ್ಲಿ, ವಿದ್ಯಾರ್ಥಿಗಳು 10 ಕೆಜಿಯವರೆಗಿನ ಹೆಚ್ಚುವರಿ ಲಗೇಜ್ ಅನ್ನು ಸಾಗಿಸುವ ಪ್ರಯೋಜನವನ್ನು ಸಹ ಪಡೆಯುತ್ತಾರೆ. ಇದರೊಂದಿಗೆ, ಈ ಆಫರ್‌ನಲ್ಲಿ ಫ್ಲಾಟ್ 10 ಪ್ರತಿಶತ ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದೆ. Paytm ಮತ್ತು ಬ್ಯಾಂಕ್‌ಗಳಿಂದ ಈಗಾಗಲೇ ಲಭ್ಯವಿರುವ ಕೊಡುಗೆಗಳ ಜೊತೆಗೆ ಈ ವಿಶೇಷ ಕೊಡುಗೆಗಳನ್ನು (Special offer) ನೀಡಲಾಗುತ್ತಿದೆ. ಈ ವಿಶೇಷ ಕೊಡುಗೆಯ ಲಾಭ ಪಡೆಯಲು, ವಿದ್ಯಾರ್ಥಿಗಳು ಆನ್‌ಲೈನ್ ಪಾವತಿಯ (online payment) ಸಮಯದಲ್ಲಿ YOLO ಪ್ರೊಮೊಕೋಡ್ ಅನ್ನು ನಮೂದಿಸಬೇಕಾಗುತ್ತದೆ. Paytm ಈ ಕೊಡುಗೆಯನ್ನು 10+10 ಆಫರ್ ಎಂದು ಹೆಸರಿಸಿದೆ.
ಹಿರಿಯ ನಾಗರಿಕರಿಗೆ ಸಿಗಲಿದೆ ಪ್ರಯೋಜನ :
ಹಿರಿಯ ನಾಗರಿಕರಾಗಿದ್ದರೆ, ಅಂದರೆ, ವಯಸ್ಸು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದ್ದರೆ, Paytm ನಿಂದ ಫ್ಲಾಟ್ 300 ರೂ. ಕ್ಯಾಶ್‌ಬ್ಯಾಕ್ (cashback)ಮತ್ತು ಏರ್‌ಲೈನ್‌ನಿಂದ 10 ಪ್ರತಿಶತದವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ವಿಶೇಷ ಕೊಡುಗೆಯ ಲಾಭವನ್ನು ಪಡೆಯಲು, ಆನ್‌ಲೈನ್ ಪಾವತಿಯ ಸಮಯದಲ್ಲಿ SENIOR ಪ್ರೋಮೋಕೋಡ್ ಅನ್ನು ನಮೂದಿಸಬೇಕಾಗುತ್ತದೆ.
ಇದನ್ನೂ ಓದಿ: Driving License New Rules: ಡ್ರೈವಿಂಗ್ ಲೈಸೆನ್ಸ್ ಬಗ್ಗೆ ಸರ್ಕಾರದ ಹೊಸ ನಿಯಮವನ್ನು ತಪ್ಪದೇ ತಿಳಿಯಿರಿ
ಸಶಸ್ತ್ರ ಪಡೆಗಳಿಗೆ ರಿಯಾಯಿತಿ:
ಸಶಸ್ತ್ರ ಪಡೆಗಳ ಯಾವುದೇ ಉದ್ಯೋಗಿ-ಅಧಿಕಾರಿಗಳು Paytm ಮೂಲಕ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದರೆ, ಬುಕಿಂಗ್‌ನಲ್ಲಿ 10 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಇದಲ್ಲದೆ, ಏರ್‌ಲೈನ್‌ನಿಂದ 15 ಪ್ರತಿಶತದವರೆಗೆ ಹೆಚ್ಚುವರಿ ರಿಯಾಯಿತಿಯೂ ಲಭ್ಯವಿರುತ್ತದೆ. ಪ್ರಯಾಣಿಕರು ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಆನ್‌ಲೈನ್ ಪಾವತಿಯ ಸಮಯದಲ್ಲಿ ಜೈ ಹಿಂದ್ ಪ್ರೊಮೊಕೋಡ್ ಅನ್ನು ನಮೂದಿಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ