Gold Price today : ಹೊಸ ವರ್ಷದ ಆರಂಭಕ್ಕೆ ಇನ್ನು ಎರಡೇ ದಿನಗಳು ಬಾಕಿ ಇವೆ. ಅದಕ್ಕೂ ಮುನ್ನ ಬುಲಿಯನ್ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ವಿದೇಶಿ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕುಸಿತ ದಾಖಲಾಗಿದೆ. 


COMMERCIAL BREAK
SCROLL TO CONTINUE READING

ಬುಲಿಯನ್ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ 380 ರೂಪಾಯಿ ಇಳಿಕೆ ಕಂಡಿದೆ. ಈ ಇಳಿಕೆಯೊಂದಿಗೆ 10 ಗ್ರಾಂ ಚಿನ್ನದ ಬೆಲೆ 63,870 ರೂಪಾಯಿಗೆ ತಲುಪಿದೆ.   


ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ :
ದೇಶಿಯ ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯಲ್ಲಿ ಭಾರಿ ಕುಸಿತ ದಾಖಲಾಗುತ್ತಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ 114 ರೂಪಾಯಿಗಳಷ್ಟು ಕುಸಿತ ದಾಖಲಿಸಿದೆ. ಇಲ್ಲಿ 10 ಗ್ರಾಂ ಚಿನ್ನದ ದರ 63275 ರೂ.ಗೆ ಇಳಿದಿದೆ. ಅದೇ ರೀತಿ ಬೆಳ್ಳಿಯ ಬೆಲೆ ಕೂಡಾ 684 ರೂಪಾಯಿ ಕುಸಿದು ಪ್ರತಿ ಕೆಜಿಗೆ 74275 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ. 


ಇದನ್ನೂ ಓದಿ : ಸರ್ಕಾರಿ ನೌಕರರ ಮೂಲ ವೇತನದಲ್ಲಿ ಬಂಪರ್ ಹೆಚ್ಚಳ ! ಈ ಬಾರಿ ಅವಧಿಗೂ ಮುನ್ನವೇ ನಿರ್ಧಾರ ಪ್ರಕಟ


ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ : 
ಅಂತಾರಾಷ್ಟ್ರೀಯ ಸ್ಪಾಟ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 3 ವಾರಗಳ ಗರಿಷ್ಠ ಮಟ್ಟದಿಂದ ಕುಸಿದಿದೆ. US ಬಾಂಡ್ ಯೀಲ್ಡ್ ನಲ್ಲಿನ ಏರಿಕೆಯಿಂದಾಗಿ, COMEX ನಲ್ಲಿ ಚಿನ್ನವು 2080 ಡಾಲರ್ ಗಿಂತ  ಕೆಳಗಿಳಿದಿದೆ. ಬೆಳ್ಳಿಯೂ ಸಹ ಪ್ರತಿ ಔನ್ಸ್ ಗೆ 24 ಡಾಲರ್ ನಲ್ಲಿ ವಹಿವಾಟು ನಡೆಸಿದೆ. ಆರ್ಥಿಕ ದೃಷ್ಟಿಕೋನದಿಂದಾಗಿ ಹೂಡಿಕೆದಾರರ ಒಲವು ಬಾಂಡ್‌ಗಳತ್ತ ಹೆಚ್ಚಾಗಿದೆ. 10 ವರ್ಷಗಳ ಬಾಂಡ್  ಯೀಲ್ದ್ 3.84%ಕ್ಕೆ  ತಲುಪಿದೆ.


22 ಕ್ಯಾರೆಟ್ ಚಿನ್ನದ ಬೆಲೆ  (10 ಗ್ರಾಂ) :
ಬೆಂಗಳೂರು : 58,550ರೂ. 
ದೆಹಲಿ: 58,700ರೂ. 
ಹೈದರಾಬಾದ್ : 58,550ರೂ.
ಕೇರಳ : 58,550ರೂ.
ತಮಿಳುನಾಡು : 59,100  ರೂ.
ಮುಂಬಯಿ  : 58,550ರೂ. 
ಕೋಲ್ಕತಾ  : 58,550ರೂ. 


ಇದನ್ನೂ ಓದಿ : UPI Enabled QR ಬಳಸಿ ಎನ್‌ಪಿ‌ಎಸ್ ಪೇಮೆಂಟ್ ಮಾಡುವುದರಿಂದ ಸಿಗುವ ಐದು ಪ್ರಮುಖ ಪ್ರಯೋಜನಗಳಿವು


ನಿಮ್ಮ ನಗರದಲ್ಲಿನ ದರಗಳನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.