Gold Price 30th May : ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯಲ್ಲಿ ನಿರಂತರ ಇಳಿಕೆಯಾಗುತ್ತಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ಮತ್ತು ಬುಲಿಯನ್ ಮಾರುಕಟ್ಟೆ ಮಂಗಳವಾರವೂ ಕುಸಿತ ಕಂಡಿದೆ. ಇದಕ್ಕೂ ಮುನ್ನ ಸೋಮವಾರ ಕೂಡಾ  ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆ ದಾಖಲೆ ಮಟ್ಟದ ಬೆಲೆಗಿಂತ ಕೆಳಗಿಳಿಯುತ್ತಿದೆ. ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಬಂಗಾರ ಖರೀದಿಗೆ  ಇದೇ ಸರಿಯಾದ ಸಮಯ. ಈಗ ಚಿನ್ನಾಭರಣ ಖರೀದಿಸಿದರೆ ಕಡಿಮೆ ಹಣ ಪಾವತಿಸಿದರೆ ಸಾಕು. 


COMMERCIAL BREAK
SCROLL TO CONTINUE READING

ಮತ್ತೆ ಏರಿಕೆಯಾಗುವ ಸಾಧ್ಯತೆ  : 
ಆದರೂ ಸದ್ಯಕ್ಕೆ ಬೆಲೆ ಕುಸಿತವಾಗಿದ್ದರೂ ಮತ್ತೊಮ್ಮೆ ಬಂಗಾರದ ಬೆಲೆ ವೇಗ ಪಡೆಯುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಈ ವರ್ಷದ ದೀಪಾವಳಿ ಸಮಯದಲ್ಲಿ ಚಿನ್ನದ ಬೆಲೆ 65,000 ರೂ.ಗಳಿಗೆ ಏರಲಿದೆ. ಬೆಳ್ಳಿ ಬೆಲೆ 80,000 ರೂಪಾಯಿ ತಲುಪುವ ನಿರೀಕ್ಷೆಯಿದೆ. ಮಂಗಳವಾರ, ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ಮತ್ತು ಬುಲಿಯನ್ ಮಾರುಕಟ್ಟೆ ಎರಡರಲ್ಲೂ  ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕುಸಿತ ಕಂಡು ಬಂದಿದೆ. 


ಇದನ್ನೂ ಓದಿ : Petrol-Diesel ಬೆಲೆಯಲ್ಲಿ ಭಾರಿ ಇಳಿಕೆ, ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯೇ ಇದಕ್ಕೆ ಕಾರಣ


MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ : 
ಮಂಗಳವಾರ ಮಲ್ಟಿ-ಕಮಾಡಿಟಿ ಎಕ್ಸ್ಚೇಂಜ್ (MCX)ನಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕುಸಿತ ಕಂಡುಬಂದಿದೆ. ಮಂಗಳವಾರ, ಎಂಸಿಎಕ್ಸ್‌ನಲ್ಲಿ, ಚಿನ್ನವು 10 ಗ್ರಾಂಗೆ 138 ರೂಪಾಯಿಗಳಷ್ಟು ಕುಸಿದು 59361 ರೂಪಾಯಿಗಳಿಗೆ ಇಳಿದಿದ್ದು, ಬೆಳ್ಳಿ ಪ್ರತಿ ಕೆಜಿಗೆ 570 ರೂಪಾಯಿಗಳಿಂದ 70,555 ರೂಪಾಯಿಗಳಿಗೆ ಇಳಿದಿದೆ. ಸೋಮವಾರದಂದು, MCX ನಲ್ಲಿ ಚಿನ್ನವು 59,499 ರೂ ಮತ್ತು ಬೆಳ್ಳಿ ಕೆಜಿಗೆ 71125 ರೂ. ಆಗಿದೆ. 


ಬುಲಿಯನ್ ಮಾರುಕಟ್ಟೆಯಲ್ಲೂ ಕುಸಿತ  :
ಅಧಿಕೃತ ವೆಬ್‌ಸೈಟ್ https://ibjarates.com ಪ್ರಕಾರ ಬುಲಿಯನ್ ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯಲ್ಲಿಯೂ ಇಳಿಕೆ ಕಂಡು ಬಂದಿವೆ. ಮಂಗಳವಾರದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 31 ರೂಪಾಯಿ ಇಳಿಕೆಯಾಗಿ 59981 ರೂಪಾಯಿಗಳಿಗೆ ತಲುಪಿದೆ. ಹಾಗೂ ಬೆಳ್ಳಿ ಪ್ರತಿ ಕೆಜಿಗೆ 460 ರೂಪಾಯಿ ಇಳಿಕೆಯಾಗಿ 70323 ರೂಪಾಯಿಗಳಿಗೆ ತಲುಪಿದೆ. 


ಇದನ್ನೂ ಓದಿ RBI Alert: ಆಯ್ದ ಬ್ಯಾಂಕುಗಳಲ್ಲಿನ ಅಸ್ಥಿರತೆಯ ಕುರಿತು ಕಳವಳ ವ್ಯಕ್ತಪಡಿಸಿದ ಆರ್ಬಿಐ ಗವರ್ನರ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ