ಚಿನ್ನ ಬೆಳ್ಳಿ ಎರಡರ ಬೆಲೆಯಲ್ಲಿಯೂ ಭರ್ಜರಿ ಏರಿಕೆ ! ಇನ್ನು ಕನಸಾಗಿಯೇ ಉಳಿಯಲಿದೆ ಬಂಗಾರದ ಖರೀದಿ
Gold Price 4 May 2023: ಚಿನ್ನ ಬೆಳ್ಳಿ ಎರಡೂ ಪ್ರಮುಖ ಲೋಹಗಳ ಬೆಲೆಯಲ್ಲಿ ಭಾರೀ ಏರಿಕೆ ಕಾಣುತ್ತಿದೆ. ಚಿನ್ನ ಬೆಳ್ಳಿ ದರಗಳು ದಾಖಲೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
Gold Price Today, 4 May 2023 : ಚಿನ್ನ ಖರೀದಿಸುವವರಿಗೆ ಪ್ರಮುಖ ಸುದ್ದಿ ಇದೆ. ಚಿನ್ನ ಖರೀದಿಗೆ ತೆರಳುವ ಮುನ್ನ ಬಂಗಾರದ ಬೆಲೆಯನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ. ಬಂಗಾರದ ಬೆಲೆ ಇಂದು ವಿಪರೀತ ಏರಿಕೆ ಕಾಣುತ್ತಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಇಂದು 10 ಗ್ರಾಂಗೆ 61,400 ರೂ. ನಲ್ಲಿ ವ್ಯವಹಾರ ನಡೆಸುತ್ತಿದೆ. ಚಿನ್ನ ಮಾತ್ರವಲ್ಲ ಬೆಳ್ಳಿ ಬೆಲೆಯಲ್ಲಿ ಕೂಡಾ ಏರಿಕೆ ಕಂಡು ಬಂದಿದೆ. ಇಂದು ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 670 ರೂ. ಮತ್ತು ಬೆಳ್ಳಿಯ ಬೆಲೆ 1150 ರೂಪಾಯಿಯಷ್ಟು ಏರಿಕೆಯಾಗಿದೆ.
MCX ನಲ್ಲಿ ಚಿನ್ನ ಮತ್ತು ಬೆಳ್ಳಿ ದುಬಾರಿ :
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಶೇ.0.73 ರಷ್ಟು ಏರಿಕೆಯೊಂದಿಗೆ 61,411 ರೂ. ವಹಿವಾಟು ನಡೆಸುತ್ತಿದೆ. ಇನ್ನು ಬೆಳ್ಳಿಯ ಬೆಲೆಯಲ್ಲಿ ಕೂಡಾ ಶೇಕಡಾ 1.12 ರಷ್ಟು ಏರಿಕೆಯಾಗಿದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ 77,442 ರೂ.ಯಷ್ಟಾಗಿದೆ.
ಇದನ್ನೂ ಓದಿ : ವಿಸ್ತಾರ ಮತ್ತು ಏರ್ ಇಂಡಿಯಾ ಮಧ್ಯೆ ಒಪ್ಪಂದ ! ಯಾತ್ರಿಗಳಿಗೆ ಆಗುವುದು ಭಾರೀ ಲಾಭ
ಫೆಡ್ ಬಡ್ಡಿದರಗಳಲ್ಲಿ ಯಾವುದೇ ಏರಿಕೆ ಇಲ್ಲ :
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಹೊಸ ದಾಖಲೆ ತಲುಪಿವೆ. ಅಂದರೆ ಗುರುವಾರ ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಸೂಚಿಸಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕೂಡಾ ಚಿನ್ನವು ಗರಿಷ್ಠ ವಹಿವಾಟು ನಡೆಸುತ್ತಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ :
ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 2,072.19 ಡಾಲರ್ ನಷ್ತಾಗಿದ್ದು ದಾಖಲೆಯ ಮಟ್ಟವನ್ನು ತಲುಪಿದೆ. US ಗೋಲ್ಡ್ ಫ್ಯೂಚರ್ಸ್ 2,085.40 ನಷ್ಟು ಏರಿದೆ. ಆದರೆ, ಆಗಸ್ಟ್ 2020 ರಲ್ಲಿ, ಇದು 2,089.2 ರ ಗರಿಷ್ಠ ಮಟ್ಟವನ್ನು ತಲುಪಿತ್ತು.
ಇದನ್ನೂ ಓದಿ : ಇಂಜಿನ್ ಸಮಸ್ಯೆಗಳ ಕಾರಣದಿಂದ ದಿವಾಳಿಯಾಗುವ ಹಾದಿಯಲ್ಲಿ ಉದ್ಯಮಿ ವಾಡಿಯಾ ಮಾಲಕತ್ವದ ವಿಮಾನಯಾನ ಸಂಸ್ಥೆ
ಚಿನ್ನ ಖರೀದಿಸುವ ಮುನ್ನ ಈ ಅಂಶ ಗಮನದಲ್ಲಿರಲಿ :
ನೀವು ಕೂಡ ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್‌ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಸರ್ಕಾರಿ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. 'ಬಿಐಎಸ್ ಕೇರ್ ಆ್ಯಪ್' ಮೂಲಕ ಚಿನ್ನದ ಶುದ್ಧತೆಯನ್ನು ಕಂಡುಕೊಳ್ಳಬಹುದು. ಇದಲ್ಲದೇ ಈ ಆಪ್ ಮೂಲಕ ದೂರು ಕೂಡಾ ನೀಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.