ಸರ್ಕಾರಿ ನೌಕರರ ಮೂಲ ವೇತನದಲ್ಲಿ ಹೆಚ್ಚಳ !ಏರಿಕೆ ಬಳಿಕ ಎಷ್ಟಾಗಲಿದೆ ಸ್ಯಾಲರಿ ? ಇಲ್ಲಿದೆ ಲೆಕ್ಕಾಚಾರ !
ಕೇಂದ್ರ ಉದ್ಯೋಗಿಗಳ ತುಟ್ಟಿಭತ್ಯೆ ಜೊತೆಗೆ ಪಿಂಚಣಿದಾರರ ತುಟ್ಟಿಭತ್ಯೆಯನ್ನೂ ಸರ್ಕಾರ ಹೆಚ್ಚಿಸುತ್ತದೆ. ಡಿಎ ಮತ್ತು ಡಿಆರ್ ಹೆಚ್ಚಳವು ನೌಕರರ ವೇತನ ಮತ್ತು ಪಿಂಚಣಿದಾರರ ಮಾಸಿಕ ಪಿಂಚಣಿ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಬೆಂಗಳೂರು : ಹೊಸ ವರ್ಷದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಹೆಚ್ಚಳದ ಉಡುಗೊರೆಯನ್ನು ನೀಡಬಹುದು. ಸರ್ಕಾರವು ಜನವರಿ ಮತ್ತು ಜುಲೈ ಹೀಗೆ ವರ್ಷಕ್ಕೆ ಎರಡು ಬಾರಿ ಡಿಎಯನ್ನು ಹೆಚ್ಚಿಸುತ್ತದೆ.
AICPI ಅಂಕಿಅಂಶಗಳ ಪ್ರಕಾರ, ಸರ್ಕಾರವು 7 ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಕೆಲವೊಮ್ಮೆ ನೌಕರರ ಡಿಎ ಮೂರು ಪ್ರತಿಶತ ಮತ್ತು ಕೆಲವೊಮ್ಮೆ ನಾಲ್ಕು ಪ್ರತಿಶತದಷ್ಟು ಹೆಚ್ಚಾಗುತ್ತದೆ.
ಇದನ್ನೂ ಓದಿ : ಭಾರತದಲ್ಲಿ ಚಿನ್ನದ ದರದಲ್ಲಿ ಏರಿಕೆ: ಇಂದಿನ ನಿಮ್ಮ ನಗರ ಬೆಲೆಯನ್ನು ಪರಿಶೀಲಿಸಿ!
ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದರೆ, ತುಟ್ಟಿಭತ್ಯೆ ಎಷ್ಟಾಗುತ್ತದೆ ? :
ಕೇಂದ್ರ ಉದ್ಯೋಗಿಗಳ ತುಟ್ಟಿಭತ್ಯೆ ಜೊತೆಗೆ ಪಿಂಚಣಿದಾರರ ತುಟ್ಟಿಭತ್ಯೆಯನ್ನೂ ಸರ್ಕಾರ ಹೆಚ್ಚಿಸುತ್ತದೆ. ಡಿಎ ಮತ್ತು ಡಿಆರ್ ಹೆಚ್ಚಳವು ನೌಕರರ ವೇತನ ಮತ್ತು ಪಿಂಚಣಿದಾರರ ಮಾಸಿಕ ಪಿಂಚಣಿ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಪ್ರಸ್ತುತ 7ನೇ ವೇತನ ಆಯೋಗದಡಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ.46 ಡಿಎ ಮತ್ತು ಡಿಆರ್ ನೀಡಲಾಗುತ್ತಿದೆ. ಸರಕಾರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿದರೆ, ಅದು ಶೇ.46ರಿಂದ ಶೇ.50ಕ್ಕೆ ಏರಿಕೆಯಾಗಲಿದೆ.
ನೌಕರರ ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ? :
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯಲ್ಲಿ ಶೇ 4ರಷ್ಟು ಹೆಚ್ಚಳವನ್ನು ಪಡೆಯುವ ನಿರೀಕ್ಷೆಯಿದೆ. ಹಾಗಾದಾಗ ಡಿಎ ಮತ್ತು ಡಿಆರ್ ಶೇಕಡಾ 50 ಕ್ಕೆ ಏರಿದರೆ, ನೌಕರರ ವೇತನ ಮತ್ತು ಪಿಂಚಣಿದಾರರ ಪಿಂಚಣಿಯಲ್ಲಿ ಹೆಚ್ಚಳವಾಗುತ್ತದೆ. ಈ ಹೆಚ್ಚಳದ ನಂತರ, ನೌಕರರ ಕನಿಷ್ಠ ವೇತನವು 9000 ರೂ. ವರೆಗೆ ಏರಿಕೆಯಾಗುತ್ತದೆ.
ಇದನ್ನೂ ಓದಿ : ಮಾರ್ಚ್ ವೇಳೆಗೆ ಬದಲಾಗಲಿದೆ ಟೋಲ್-ಟ್ಯಾಕ್ಸ್ ಸಂಗ್ರಹ ವಿಧಾನ: ಈ ಬಗ್ಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?
50 ಶೇ. ಕ್ಕೆ ಏರಿದ ನಂತರ ಶೂನ್ಯವಾಗುತ್ತದೆ ಡಿಎ :
ಸರ್ಕಾರ 2016 ರಲ್ಲಿ 7 ನೇ ವೇತನ ಆಯೋಗವನ್ನು ಜಾರಿಗೊಳಿಸಿದಾಗ ತುಟ್ಟಿಭತ್ಯೆಯನ್ನು ಶೂನ್ಯಗೊಳಿಸಲಾಯಿತು. ನಿಯಮಗಳ ಪ್ರಕಾರ, ತುಟ್ಟಿಭತ್ಯೆ 50 ಪ್ರತಿಶತ ತಲುಪಿದ ತಕ್ಷಣ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ.
ಇದರೊಂದಿಗೆ ಶೇ 50ರ ಆಧಾರದಲ್ಲಿ ಪಡೆಯುವ ಡಿಎಯನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಅದರಂತೆ ನೌಕರರ ಮೂಲ ವೇತನವೂ ಹೆಚ್ಚಾಗಲಿದೆ. ಅಂದರೆ ಉದ್ಯೋಗಿಯ ಮೂಲ ವೇತನ 18 ಸಾವಿರ ಆಗಿದ್ದರೆ ತುಟ್ಟಿಭತ್ಯೆ ಹೆಚ್ಚಳದ ನಂತರ 9000 ರೂ. ಯನ್ನು ವೇತನಕ್ಕೆ ಸೇರಿಸಲಾಗುತ್ತದೆ.
ಈ ನೌಕರರಿಗೆ ಈಗಾಗಲೇ ಹೆಚ್ಚಾಗಿದೆ ತುಟ್ಟಿ ಭತ್ಯೆ :
ಕೇಂದ್ರ ಸರ್ಕಾರವು ಇತ್ತೀಚೆಗೆ ಆರನೇ ವೇತನ ಆಯೋಗ ಮತ್ತು ಐದನೇ ವೇತನ ಆಯೋಗದ ಅಡಿಯಲ್ಲಿ ತುಟ್ಟಿಭತ್ಯೆಯನ್ನು ಹೆಚ್ಚಿಸಿತ್ತು ಎಂಬುದು ಗಮನಾರ್ಹ. ಈ ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರುತ್ತದೆ. ಇದಲ್ಲದೆ, ಅನೇಕ ರಾಜ್ಯಗಳು ತಮ್ಮ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಹೆಚ್ಚಿಸಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.