Gold Price Today Karnataka, 03-Jan-2024: ಬುಲಿಯನ್ ಮಾರುಕಟ್ಟೆ ಏರಿಕೆ ಮುಂದುವರೆಸಿದೆ. ಚಿನ್ನದ ಬೆಲೆ ದಾಖಲೆಯ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಚಿನ್ನ ಮತ್ತು ಬೆಳ್ಳಿಯ ನಿರಂತರ ಏರಿಕೆಯಿಂದಾಗಿ, ಅಮೆರಿಕದಲ್ಲಿ ಬಡ್ಡಿದರಗಳನ್ನು ಕಡಿತಗೊಳಿಸುವ ನಿರೀಕ್ಷೆಯಿದೆ. ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೊದಲ ಬಾರಿಗೆ 2000 ಡಾಲರ್‌ಗಿಂತ ಹೆಚ್ಚಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೂ ಕಾಣುತ್ತಿದೆ. 


COMMERCIAL BREAK
SCROLL TO CONTINUE READING

ಸತತ ಮೂರನೇ ದಿನವೂ ದೇಶಿ ಬುಲಿಯನ್ ಮಾರುಕಟ್ಟೆ ಏರುಗತಿಯಲ್ಲಿದೆ. ಚಿನ್ನದ ಬೆಲೆಯಲ್ಲಿ 230 ರೂಪಾಯಿ ಏರಿಕೆ ಕಂಡಿದೆ. ಈ ಏರಿಕೆಯೊಂದಿಗೆ 10 ಗ್ರಾಂ ಚಿನ್ನದ ಬೆಲೆ 64,090 ರೂ ಪಾಯಿಗೆ ತಲುಪಿದೆ.  


22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ ):


ಬೆಂಗಳೂರು : 58,750 ರೂ. 
ದೆಹಲಿ: 58,900 ರೂ. 
 ಮುಂಬಯಿ :58,750 ರೂ.
ಹೈದರಾಬಾದ್ : 58,750 ರೂ.
ಕೇರಳ :58,750 ರೂ.
ಚೆನ್ನೈ :  59,200 ರೂ.


ಇದನ್ನೂ ಓದಿ : UPI new Rules: ಜನವರಿ 1ರಿಂದ ಜಾರಿಗೆ ಬರಲಿವೆ ಈ ಪ್ರಮುಖ UPI ಬದಲಾವಣೆಗಳು


ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ : 
ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ 100 ರೂಪಾಯಿ ಹೆಚ್ಚಾಗಿದೆ. 10 ಗ್ರಾಂ ಚಿನ್ನದ ದರ 63,423 ರೂ.ಗೆ ತಲುಪಿದೆ.ಚಿನ್ನದ ಸಾರ್ವಕಾಲಿಕ ಗರಿಷ್ಠ ಬೆಲೆ 64,063 ರೂಪಾಯಿ. ಚಿನ್ನದಂತೆ ಬೆಳ್ಳಿ ಬೆಲೆಯೂ ಏರಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ, ಬೆಳ್ಳಿ ಪ್ರತಿ ಕೆಜಿಗೆ ರೂ 74615 ರಂತೆ 225 ರೂ ಲಾಭದೊಂದಿಗೆ ವಹಿವಾಟು ನಡೆಸುತ್ತಿದೆ. 


ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ : 
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಕಾಮ್ಯಾಕ್ಸ್‌ನಲ್ಲಿ, ಚಿನ್ನದ ಬೆಲೆ ಸುಮಾರು 7 ಡಾಲರ್ ಏರಿಕೆಯೊಂದಿಗೆ ಪ್ರತಿ ಆನ್‌ಗೆ 2080 ಡಾಲರ್ ನಂತೆ ನಂತೆ ವಹಿವಾಟು ನಡೆಸಿದೆ. ಬೆಳ್ಳಿ ಕೂಡ ಜಿಗಿಟ ಕಂಡಿದ್ದು, ಪ್ರತಿ ಔನ್ಸ್ ಗೆ 24.17 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದೆ. 


ಇದನ್ನೂ ಓದಿ : ಸ್ಕ್ಯಾಮ್‌ಗಳಿಂದ ಸೇಫಾಗಿರಲು ಬಯಸುತ್ತೀರಾ? ನಕಲಿ ಮೆಸೇಜ್‌ ಪತ್ತೆಹಚ್ಚಲು ಇಲ್ಲಿದೆ 3 ಸಲಹೆಗಳು!


ನಿಮ್ಮ ನಗರದಲ್ಲಿನ ದರಗಳನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.