ಬೆಂಗಳೂರು : ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಇರುವ ಸ್ಥಿರ ಠೇವಣಿ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳವರೆಗೆ ಸ್ಥಿರ ಠೇವಣಿಗಳ ಮೇಲೆ 3 ರಿಂದ 8.61 ಶೇಕಡಾ ಬಡ್ಡಿಯನ್ನು ನೀಡುತ್ತದೆ. ಆದರೆ ಬ್ಯಾಂಕ್ ಹಿರಿಯ ನಾಗರಿಕರಿಗೆ 3.60 ರಿಂದ 9.21 ರಷ್ಟು ಬಡ್ಡಿದರಗಳನ್ನು ನೀಡುತ್ತದೆ.  ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಸ್ಥಿರ ಠೇವಣಿಗಳ ಹೊಸ ದರಗಳು ಅಕ್ಟೋಬರ್ 28 ರಿಂದಲೇ ಜಾರಿಗೆ ಬಂದಿದೆ. 


COMMERCIAL BREAK
SCROLL TO CONTINUE READING

750 ದಿನಗಳ ಎಫ್‌ಡಿ (Fixed Deposit Interest Rates):
ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 750 ದಿನಗಳ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿ ದರಗಳನ್ನು ನೀಡುತ್ತದೆ. ಈ ಅವಧಿಯಲ್ಲಿ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಸ್ಥಿರ ಠೇವಣಿಗಳ (FD) ಮೇಲೆ 8.61 ಪ್ರತಿಶತ ಬಡ್ಡಿಯನ್ನು ನೀಡುತ್ತದೆ. ಆದರೆ ಬ್ಯಾಂಕ್ ಹಿರಿಯ ನಾಗರಿಕರಿಗೆ 750 ದಿನಗಳವರೆಗಿನ FD (Fixed Deposit Interest Rates) ಮೇಲೆ 9.21 ಪ್ರತಿಶತ ಬಡ್ಡಿಯನ್ನು ನೀಡುತ್ತದೆ.


ಇದನ್ನೂ ಓದಿ : ಹೊಸ ನಿಯಮದಂತೆಯೇ ಸರ್ಕಾರಿ ನೌಕರರ ವೇತನ ಹೆಚ್ಚಳ ! ಮೂಲ ವೇತನ 26 ಸಾವಿರಕ್ಕೆ ಏರಿಕೆ


ವಿವಿಧ ಅವಧಿಗಳಿಗೆ ಬ್ಯಾಂಕಿನ FD ದರಗಳು:
Fincare Small Finance Bank 7 ದಿನಗಳಿಂದ 14 ದಿನಗಳ FD ಗಳ ಮೇಲೆ 3% ಬಡ್ಡಿಯನ್ನು ನೀಡುತ್ತದೆ. ಬ್ಯಾಂಕ್ 15 ದಿನಗಳಿಂದ 30 ದಿನಗಳ ನಡುವಿನ FD ಗಳಿಗೆ 4.50 ಶೇಕಡಾ ಬಡ್ಡಿದರವನ್ನು ನೀಡುತ್ತದೆ. ಬ್ಯಾಂಕ್ 31 ದಿನಗಳಿಂದ 45 ದಿನಗಳವರೆಗೆ ಸ್ಥಿರ ಠೇವಣಿಗಳ ಮೇಲೆ 5.25% ಬಡ್ಡಿಯನ್ನು ಮತ್ತು 46 ದಿನಗಳಿಂದ 90 ದಿನಗಳ FD ಗಳ ಮೇಲೆ 5.76% ಬಡ್ಡಿಯನ್ನು ನೀಡುತ್ತದೆ. ಬ್ಯಾಂಕ್ 91 ದಿನಗಳಿಂದ 180 ದಿನಗಳ ಎಫ್‌ಡಿಗಳಿಗೆ 6.25% ಬಡ್ಡಿಯನ್ನು ನೀಡುತ್ತದೆ. ಆದರೆ, ಬ್ಯಾಂಕ್ 181 ದಿನಗಳಿಂದ 365 ದಿನಗಳವರೆಗೆ FD ಗೆ 6.50% ಬಡ್ಡಿಯನ್ನು ನೀಡುತ್ತದೆ.


ಬ್ಯಾಂಕ್ 12 ತಿಂಗಳಿಂದ 15 ತಿಂಗಳವರೆಗೆ FD ಮೇಲೆ 7.50% ಬಡ್ಡಿಯನ್ನು ನೀಡುತ್ತದೆ. ಬ್ಯಾಂಕ್ 15 ತಿಂಗಳ ಮತ್ತು 1 ದಿನದಿಂದ 499 ದಿನಗಳ FD ಗಳ ಮೇಲೆ 7.85 ಶೇಕಡಾ ಬಡ್ಡಿಯನ್ನು ನೀಡುತ್ತದೆ. ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 500 ದಿನದ ಮೇಲಿನ FDಗೆ 8.21% ಬಡ್ಡಿಯನ್ನು ನೀಡುತ್ತದೆ. ಬ್ಯಾಂಕ್ 18 ತಿಂಗಳಿಂದ 24 ತಿಂಗಳಿಗೆ 8.11% ಬಡ್ಡಿಯನ್ನು ಮತ್ತು 24 ತಿಂಗಳಿಂದ 749 ದಿನಗಳವರೆಗೆ 8.15% ಬಡ್ಡಿಯನ್ನು ನೀಡುತ್ತದೆ. 1000 ದಿನಗಳಲ್ಲಿ  ಮೆಚ್ಯೂರ್ ಆಗುವ FD ಮೇಲೆ ಬ್ಯಾಂಕ್ 8.41% ಬಡ್ಡಿಯನ್ನು ನೀಡುತ್ತದೆ. ಇನ್ನು  ಬ್ಯಾಂಕ್ 1001 ದಿನಗಳು ಮತ್ತು 36 ತಿಂಗಳ ನಡುವಿನ FD ಗಳಿಗೆ 8.11% ಬಡ್ಡಿದರವನ್ನು ನೀಡುತ್ತದೆ. ಬ್ಯಾಂಕ್ 36 ತಿಂಗಳಿಂದ 42 ತಿಂಗಳವರೆಗೆ FD ಮೇಲೆ 8.25% ಬಡ್ಡಿ ನೀಡುತ್ತದೆ.


ಇದನ್ನೂ ಓದಿ : ತಿಂಗಳ ಮೊದಲ ದಿನವೇ ಬೆಲೆ ಏರಿಕೆ ಬಿಸಿ ! ಇಂದಿನಿಂದ ರೆಡಿಯಾಗಿ ಈ ಎಲ್ಲಾ ಬದಲಾವಣೆಗಳಿಗೆ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.