Skin Colour Band Aid : ಟ್ರೆಂಡ್‌ ಎನ್ನುವ ಪದದಿಂದ ಎಲ್ಲ ಅಂಶಗಳಲ್ಲಿಯೂ ಬದಲಾವಣೆಗಳಾಗುತ್ತಿವೆ. ಜನ ಎಷ್ಟು ಫ್ಯಾಷನ್‌ ಪ್ರಿಯರಾಗಿದ್ದಾರೆ ಎನ್ನುವುದಕ್ಕೆ ಈ ಬ್ಯಾಂಡ್‌ ಏಡ್‌ಗಳೇ ಸಾಕ್ಷಿ. ಕಾರಣ ಇಷ್ಟೇ ಮಾನವ ಮೈ ಬಣ್ಣದ ಬ್ಯಾಂಡ್‌ ಏಡ್‌ಗಳು ಮಾರುಕಟ್ಟೆಗೆ ಆಗಮಿಸಿವೆ. ಇವುಗಳನ್ನು ಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಸದ್ಯ ಈ ಕುರಿತಾದ ಪೋಸ್ಟ್‌ ಒಂದನ್ನು ಉದ್ಯಮಿಯಾದಂತಹ ಹರ್ಷಾ ಗೋಯೆಂಕಾ ಎಂಬುವರು ಟ್ವೀಟ್‌ ಮಾಡಿದ್ದಾರೆ. ಈ ಮಾನವ ಮೈ ಬಣ್ಣವನ್ನು ಆಧರಿಸಿದ ಬ್ಯಾಂಡ್‌ ಏಡ್‌ಗಳ ಕುರಿತು ʼಮೈಬಣ್ಣಕ್ಕೆ ಹೊಂದುವಂತ ಬ್ಯಾಂಡ್‌ ಏಡ್‌ಗಳು ನಿಜವಾಗಿಯೂ ಅಗತ್ಯವಿದೆಯಾ? ಕೆಲವೊಂದು ಆವಿಷ್ಕಾರಗಳು ಅರ್ಥಹೀನವಾಗಿರುತ್ತವೆʼ ಎಂದು ಟ್ವೀಟ್‌ ಮೂಲಕ ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ.


ರಾಜಕೀಯ ನಾಯಕರ ವೇತನ: ಸಿಎಂ, ಸಚಿವರ ಸಂಬಳ ಎಷ್ಟಿರುತ್ತೆ?


ಹರ್ಷಾ ಗೋಯೆಂಕಾ ಅವರ ಟ್ವೀಟ್‌ಗೆ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು ವಿರೋಧ ವ್ಯಕ್ತ ಪಡಿಸಿದರೆ ಕೆಲವರು ಜನಪರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಒಬ್ಬರು ʼನಿಮಗೆ ಈ ಆವಿಷ್ಕಾರ ವ್ಯರ್ಥವಾಗಿರಬಹುದು, ಬಿಳಿ ಚರ್ಮಕ್ಕಾಗಿ ವಿನ್ಯಾಸವಾಗಿರುವ ಉತ್ಪನ್ನವು ನಿಮಗೆ ಉತ್ತಮವಾಗಿರುತ್ತದೆ. ಕೆಲವು ಕಂದು ಬಣ್ಣದ ಜನರು ತಮ್ಮ ಮೈ ಬಣ್ಣದ ಬ್ಯಾಂಡ್‌ ಏಡ್‌ಗಳನ್ನು ಬಳಸಲು ಇಚ್ಚಿಸುತ್ತಾರೆ ಎಂದು ಟ್ವೀಟ್‌ ಮಾಡಿದ್ದಾರೆ.


ʼಚರ್ಮದ ಟೋನ್ ಗಳನ್ನು ಹೊಂದಿಸುವುದು ಲಿಪ್ ಸ್ಟಿಕ್‌ ವ್ಯಾಪಾರಕ್ಕೆ ಒಳ್ಳೆಯದು ಆದರೆ ಬ್ಯಾಂಡ್‌ ಏಡ್‌ಗಳಿಗೆ ಇದು ಅಗತ್ಯವಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. 


ಇನ್ನೂ ಕೆಲವರು ಒಂದು ಸಣ್ಣ ಗಾಯಕ್ಕೆ ಅಂಟಿಸುವ ಪಟ್ಟಿಯ ಕುರಿತು ಇಷ್ಟು ಯೋಚಿಸುವ ಅಗತ್ಯವಿಲ್ಲ, ಇದು ಮಾರಾಟದ ಗಿಮಿಕ್‌ ಎಂದಿದ್ದಾರೆ. ನಿಮಗಿದೆಲ್ಲಾ ಅರ್ಥವಾಗಲ್ಲ ಅವರವರಿಗೆ ಅವರದೇ ಆದ ಆಯ್ಕೆಗಳಿರುತ್ತವೆ ಆ ಪ್ರಕಾರವಾಗಿ ತಮಗೆ ಬೇಕಾದ ಬಣ್ಣದ ಬ್ಯಾಂಡ್‌ ಏಡ್‌ಗಳನ್ನು ಖರೀದಿಸುತ್ತಾರೆ ನೀವು ಸುಮ್ಮನಿರಿ ಎಂದು ಟ್ವೀಟ್‌ ಮಾಡಿದ್ದಾರೆ. 


ಇದನ್ನೂ ಓದಿ-RBI Board Meeting: ಕೇಂದ್ರ ಸರ್ಕಾರಕ್ಕೆ 2022-23 ಸಾಲಿನ 87,416 ಕೋಟಿ ರೂ. ಡಿವಿಡೆಂಡ್ ನೀಡಲು ನಿರ್ಧರಿಸಿದ ಆರ್.ಬಿ.ಐ