Hunter 350: ಇವೇ ನೋಡಿ ಬೆಸ್ಟ್ ಸೆಲ್ಲಿಂಗ್ ರಾಯಲ್ ಎನ್‌ಫೀಲ್ಡ್ 350CC ಬೈಕ್ಗಳು
ಹೆಚ್ಚು ಮಾರಾಟವಾದ 350CC ಬೈಕ್‌ಗಳ ಕುರಿತು ಹೇಳುವುದಾದರೆ, 3 ಮತ್ತು 4ನೇ ಸ್ಥಾನಗಳಲ್ಲಿ ರಾಯಲ್ ಎನ್‌ಫೀಲ್ಡ್‌ನ ಮಾದರಿಗಳಿವೆ.
ನವದೆಹಲಿ: ದೇಶದಲ್ಲಿ 350CC ಬೈಕ್‌ಗಳು ಹೆಚ್ಚಿನ ಜನರಿಗೆ ಇಷ್ಟವಾಗಿವೆ. ಈ ವಿಭಾಗದ ಮಾರಾಟವು ನಿರಂತರವಾಗಿ ಹೆಚ್ಚುತ್ತಿದೆ. ಆಗಸ್ಟ್ ತಿಂಗಳಿನಲ್ಲಿ 350CC ಮೋಟಾರ್‌ಸೈಕಲ್ ವಿಭಾಗದ ಮಾರಾಟವು ಶೇ.69.77ರಷ್ಟು(ವಾರ್ಷಿಕ) ಬೆಳವಣಿಗೆ ಕಂಡಿದೆ. ಈ ಪಟ್ಟಿಯಲ್ಲಿ ರಾಯಲ್ ಎನ್‌ಫೀಲ್ಡ್‌ನ ಬೈಕ್ ದೀರ್ಘಕಾಲ ಅಗ್ರಸ್ಥಾನದಲ್ಲಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಹೆಚ್ಚು ಮಾರಾಟವಾಗುತ್ತಿರುವ 350cc ಬೈಕ್ ಆಗಿ ಮುಂದುವರಿದಿದೆ. ಆದರೆ ಇದೇ ಕಂಪನಿಯ ಇನ್ನೊಂದು ಬೈಕ್‍ಅನ್ನು ಬಿರುಸಿನಿಂದ ಖರೀದಿಸಲಾಗುತ್ತಿದೆ. ಅದುವೆ ಇತ್ತೀಚೆಗೆ ರಿಲೀಸ್ ಆದ ರಾಯಲ್ ಎನ್‌ಫೀಲ್ಡ್ ಹಂಟರ್ 350.
ಇದನ್ನೂ ಓದಿ: ಆಧಾರ್ ಕಾರ್ಡಿನಿಂದ ಹ್ಯಾಕ್ ಆಗುತ್ತಾ ಬ್ಯಾಂಕ್ ಅಕೌಂಟ್: ಯುಐಡಿಎಐ ಹೇಳಿದ್ದೇನು?
2ನೇ ಅತಿಹೆಚ್ಚು ಮಾರಾಟವಾದ ಬೈಕ್
ಹೌದು, ರಾಯಲ್ ಎನ್‌ಫೀಲ್ಡ್ ಹಂಟರ್ 350 ಆಗಸ್ಟ್ 7ರಂದು ಬಿಡುಗಡೆಯಾಯಿತು. ಇದರ ಬುಕಿಂಗ್ ಕೂಡ ಅಂದು ಸಂಜೆಯೇ ಪ್ರಾರಂಭವಾಯಿತು. 1 ತಿಂಗಳೊಳಗೆ ಈ ಬೈಕ್ 2ನೇ ಅತಿಹೆಚ್ಚು ಮಾರಾಟವಾದ 350cc ಬೈಕ್ ಎನಿಸಿಕೊಂಡಿದೆ. ನಂಬರ್ 1 ಕ್ಲಾಸಿಕ್ 350 ಕಳೆದ ತಿಂಗಳು 18,993 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಹಂಟರ್ 350 18,197 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಹಂಟರ್ 350 ಬೆಲೆ 1.49 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು ಕಂಪನಿಯ ಅಗ್ಗದ ಬೈಕ್‌ಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ಕೋಟಿಗಟ್ಟಲೆ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ ಎಸ್‌ಬಿಐ.!ಉಚಿತವಾಗಿ ನೀಡುತ್ತಿದೆ ಈ ಸೇವೆ
ಟಾಪ್ 5 ಬೈಕ್‍ಗಳು
ಹೆಚ್ಚು ಮಾರಾಟವಾದ 350CC ಬೈಕ್‌ಗಳ ಕುರಿತು ಹೇಳುವುದಾದರೆ, 3 ಮತ್ತು 4ನೇ ಸ್ಥಾನಗಳಲ್ಲಿ ರಾಯಲ್ ಎನ್‌ಫೀಲ್ಡ್‌ನ ಮಾದರಿಗಳಿವೆ. ಆಗಸ್ಟ್ 2022ರಲ್ಲಿ Royal Enfield Meteor 350 3ನೇ ಸ್ಥಾನದಲ್ಲಿದ್ದು, ಇದರ ಒಟ್ಟು 9,362 ಯುನಿಟ್‌ಗಳು ಮಾರಾಟವಾಗಿವೆ. ಅದೇ ರೀತಿ ಬುಲೆಟ್ 350 4ನೇ ಸ್ಥಾನದಲ್ಲಿದ್ದು, ಇದರ 7,618 ಯುನಿಟ್‌ಗಳನ ಮಾರಾಟವಾಗಿದೆ. ಎಲೆಕ್ಟ್ರಾ 350 ಮತ್ತು ಹೋಂಡಾ ಸಿಬಿ 350 ಬೈಕ್‌ಗಳು 5 ಮತ್ತು 6ನೇ ಸ್ಥಾನದಲ್ಲಿದೆ. ಇವು ಕ್ರಮವಾಗಿ 4,114 ಮತ್ತು 3,714 ಯುನಿಟ್‌ಗಳು ಮಾರಾಟವಾಗಿವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.