ICICI ಹಾಗೂ ಪಿಎನ್‌ಬಿ ಗ್ರಾಹಕರಿಗೊಂದು ಶಾಕಿಂಗ್ ಸುದ್ದಿ, ಹೆಚ್ಚಾಗಲಿದೆ ಇಎಂಐ ಹೊರೆ
MCLR Rate Hike: ಐಸಿಐಸಿಐ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಂಸಿಎಲ್ಆರ್ ದರವನ್ನು ಹೆಚ್ಚಿಸಿವೆ. ಇದರಿಂದ ಈ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದವರ ಇಎಂಐ ಹೊರೆ ಹೆಚ್ಚಾಗಲಿದೆ.
MCLR Rate Hike: ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಕೋಟ್ಯಂತರ ಗ್ರಾಹಕರು ಭಾರಿ ಹಿನ್ನಡೆ ಉಂಟಾಗಿದೆ. ನೀವು ಸಹ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ಇನ್ಮುಂದೆ ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಲಿದೆ. ಐಸಿಐಸಿಐ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಎಂಸಿಎಲ್ಆರ್ ದರವನ್ನು ಹೆಚ್ಚಿಸಿವೆ. ಇದರಿಂದ ಈ ಬ್ಯಾಂಕ್‌ಗಳಲ್ಲಿನ ಖಾತೆದಾರರ ಇಎಂಐ ಹೊರೆ ಹೆಚ್ಚಾಗಲಿದೆ. ಇನ್ನೊಂದೆಡೆ ICICI ಬ್ಯಾಂಕ್ ಕೆಲವು ಅವಧಿಗಳಿಗೆ ಬಡ್ಡಿದರವನ್ನು ಕಡಿತಗೊಳಿಸಿದೆ, ಆದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಎಲ್ಲಾ ಅವಧಿಗಳಿಗೆ ಬಡ್ಡಿದರವನ್ನು ಹೆಚ್ಚಿಸಿದೆ.
ಐಸಿಐಸಿಐ ಬ್ಯಾಂಕ್ ದರ ಇಳಿಕೆ ಮಾಡಿದೆ
ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಬಗ್ಗೆ ಹೇಳುವುದಾದರೆ, ಈ ಬ್ಯಾಂಕ್ ಬಡ್ಡಿದರಗಳನ್ನು ಕಡಿತಗೊಳಿಸಿದೆ, ಅಂದರೆ ಗ್ರಾಹಕರ ಇಎಂಐ ಹೊರೆ ಕಡಿಮೆಯಾಗಿದೆ. ಬ್ಯಾಂಕ್ ರಾತ್ರಿಯ ಬಡ್ಡಿ ದರವನ್ನು ಶೇಕಡಾ 8.5 ರಿಂದ 8.35 ಕ್ಕೆ ಇಳಿಸಿದೆ. ಇದಲ್ಲದೇ 3 ತಿಂಗಳ ಅವಧಿಯ ದರವನ್ನು ಕೂಡ 15 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಲಾಗಿದೆ. ಇದರ ದರಗಳು ಶೇ.8.55ರಿಂದ ಶೇ.8.40ಕ್ಕೆ ಇಳಿದಿವೆ. ಐಸಿಐಸಿಐ ಬ್ಯಾಂಕ್ 6 ತಿಂಗಳು ಮತ್ತು ಒಂದು ವರ್ಷದ ಅವಧಿಯ ಬಡ್ಡಿದರಗಳ ಬಗ್ಗೆ ಹೇಳುವುದಾದರೆ, ಬ್ಯಾಂಕ್ ಅದನ್ನು ಹೆಚ್ಚಿಸಿದೆ. ಇದರಲ್ಲಿ ಬ್ಯಾಂಕ್ 5 ಬೇಸಿಕ್ ಪಾಯಿಂಟ್ ಗಳಷ್ಟು ಹೆಚ್ಚಿಸಿದೆ. ಇದರಲ್ಲಿ ನೀವು ಶೇಕಡಾ 8.85 ರ ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗಲಿದೆ.
PNB ಜೂನ್ 1 ರಿಂದ ಹೊಸ ದರಗಳನ್ನು ಜಾರಿಗೆ ತಂದಿದೆ
ದೇಶದ ಸರ್ಕಾರಿ ಬ್ಯಾಂಕ್ PNB ಎಲ್ಲಾ ಅವಧಿಗಳಿಗೆ ಬಡ್ಡಿದರಗಳನ್ನು ಹೆಚ್ಚಿಸಿದೆ. ಪಿಎನ್‌ಬಿ ಎಂಸಿಎಲ್‌ಆರ್ ದರವನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಬ್ಯಾಂಕ್‌ನ ಹೊಸ ಬಡ್ಡಿದರಗಳು ಜೂನ್ 1 ರಿಂದ ಜಾರಿಗೆ ಬಂದಿವೆ. PNB ಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಬ್ಯಾಂಕ್ ಎಂಸಿಎಲ್‌ಆರ್ ದರಗಳನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ, ನಂತರ ಬಡ್ಡಿ ದರವು 8 ರಿಂದ 8.10 ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ-Fuel Price Update: ಪೆಟ್ರೋಲ್ ಡೀಸೆಲ್ ಬೆಲೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟ
ಯಾವ ಅವಧಿಗೆ ಎಂಸಿಎಲ್‌ಆರ್ ದರಗಳು ಎಷ್ಟು?
ಇದಲ್ಲದೆ, ಒಂದು ತಿಂಗಳು, 3 ತಿಂಗಳು ಮತ್ತು 6 ತಿಂಗಳ ದರವೂ ಹೆಚ್ಚಾಗಿದೆ. ಒಂದು ತಿಂಗಳ ಬಡ್ಡಿ ದರ ಶೇ.8.20, 3 ತಿಂಗಳ ಬಡ್ಡಿ ದರ ಶೇ.8.30, 6 ತಿಂಗಳ ಬಡ್ಡಿ ದರ ಶೇ.8.50 ರಷ್ಟಿದೆ. ಇದಲ್ಲದೆ, ಒಂದು ವರ್ಷದ ಎಂಸಿಎಲ್‌ಆರ್ ದರಗಳನ್ನು ಶೇಕಡಾ 8.60 ಕ್ಕೆ ಮತ್ತು 3 ವರ್ಷಗಳ ಎಂಸಿಎಲ್‌ಆರ್ ದರಗಳನ್ನು ಶೇಕಡಾ 8.90 ಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ-SEBI Auction: ಹೂಡಿಕೆದಾರರ ಹಿತರಕ್ಷಣೆಗೆ ಸೆಬಿಯಿಂದ ಮಹತ್ವದ ಹೆಜ್ಜೆ
EMI ಮೇಲೆ ಯಾವ ಪರಿಣಾಮ ಉಂಟಾಗಲಿದೆ
ಬ್ಯಾಂಕ್‌ನಿಂದ ಬಂದ ಮಾಹಿತಿಯ ಪ್ರಕಾರ, ಬ್ಯಾಂಕಿನ ವಿವಿಧ ಅವಧಿಗಳ ಬಡ್ಡಿದರದ ಬಗ್ಗೆ ಹೇಳುವುದಾದರೆ, ನಿಮ್ಮ ಇಎಂಐ ನಿನ್ನೆಯಿಂದ ಹೆಚ್ಚಾಗಿದೆ. ಇಂದಿನಿಂದ ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಲಿದೆ. ಇದರ ಹೊರತಾಗಿ, ICICI ಬ್ಯಾಂಕ್ ಬಡ್ಡಿದರಗಳನ್ನು ಕಡಿತಗೊಳಿಸಿದೆ, ಆದ್ದರಿಂದ ನಿಮ್ಮ EMI ಕಡಿಮೆಯಾಗಲಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ