Bengaluru Traffic Rules: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ ಬಹಳ ದೊಡ್ಡ ಸಮಸ್ಯೆ. ಇದನ್ನೇ ಬಂಡ ಮಾಡಿಕೊಂಡು ನಗರದಲ್ಲಿ ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನ ತಡೆಯುತ್ತಿಲ್ಲ ಎಂದು ಸಂಚಾರ ನಿಯಮಗಳನ್ನ ಉಲ್ಲಂಘಿಸಬಹುದು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. 


COMMERCIAL BREAK
SCROLL TO CONTINUE READING

ರಸ್ತೆಯಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವುದನ್ನ ಕಡಿಮೆ ಮಾಡಿರುವ ಬೆಂಗಳೂರು ಸಂಚಾರಿ ಪೊಲೀಸರು ಐಟಿಎಂಎಸ್ (ಇಂಟಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ) ಮೂಲಕ ದಂಡ ವಿಧಿಸುತ್ತಿದ್ದಾರೆ.


ಇದನ್ನೂ ಓದಿ- 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದ ಕಾಂಗ್ರೆಸ್..! ಯಾರೆಲ್ಲಾ ಇದ್ದಾರೆ ಗೊತ್ತಾ?


ಎರಡು ತಿಂಗಳಲ್ಲಿ ಎಷ್ಟು ದಂಡ ವಿಧಿಸಲಾಗಿದೆ?
ಕಳೆದ ವರ್ಷ ಡಿಸೆಂಬರ್‌ನಲ್ಲಿ ಐಟಿಎಂಎಸ್ ಕ್ಯಾಮೆರಾ ವ್ಯವಸ್ಥೆಯನ್ನ ಆರಂಭಿಸಿರುವ ಸಂಚಾರಿ ಪೊಲೀಸರು, ಈ ವರ್ಷದ ಆರಂಭದಿಂದಲೇ ವಾಹನಗಳನ್ನ ತಡೆದು ದಂಡ ವಿಧಿಸುವುದನ್ನ ಕಡಿಮೆ ಮಾಡಿದ್ದಾರೆ. ಐಟಿಎಂಎಸ್ ಮೂಲಕ ಪ್ರಕರಣಗಳನ್ನ ದಾಖಲಿಸುತ್ತಿದ್ದಾರೆ. ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿದಂತೆ ಕಳೆದ ಮೂರೂವರೆ ತಿಂಗಳಿನ ಅವಧಿಯಲ್ಲಿ ಬರೋಬ್ಬರಿ 19,04,227 ಪ್ರಕರಣಗಳನ್ನ ದಾಖಲಿಸಿದ್ದು ಆ ಪೈಕಿ 18 ಲಕ್ಷ ಪ್ರಕರಣಗಳನ್ನ ಆನ್‌ಲೈನ್‌ನಲ್ಲಿ ದಾಖಲಿಸಲಾಗಿದೆ. ಈಗಾಗಲೇ ಹೆಚ್ಚು ಪ್ರಕರಣಗಳು ದಾಖಲಾಗಿರುವ ವಾಹನಗಳ ಮಾಲೀಕರಿಗೆ ಸಂಚಾರಿ ಪೊಲೀಸರು ನೊಟೀಸ್ ರವಾನಿಸಿದ್ದಾರೆ. ಚುನಾವಣೆ ಮುಗಿದ ಬಳಿಕ ಮನೆ ಮನೆಗೆ ತೆರಳಿ ದಂಡ ವಸೂಲಿ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ- ಪುಲಿಕೇಶಿನಗರದ ಕೊಳೆ ಪೊರಕೆಯಿಂದ ತೊಳೆಯಲಿದ್ದೇವೆ: ಅಭ್ಯರ್ಥಿ ಸುರೇಶ್ ರಾಥೋಡ್


ಐಟಿಎಂಎಸ್ ತಂತ್ರಜ್ಞಾನದ ಸದ್ಬಳಕೆಯಿಂದ ಸಂಚಾರಿ ಪೊಲೀಸರು ನಗರದಲ್ಲಿನ ವಾಹನಗಳ ನಿಯಂತ್ರಣ, ಸಂಚಾರ ದಟ್ಟಣೆಯನ್ನ ತಡೆಗಟ್ಟುವ ಕಡೆ ಗಮನಹರಿಸಲು ಅನುಕೂಲವಾಗುತ್ತಿದೆ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ ತಿಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.