ಉಚಿತ ಪಡಿತರ ಪಡೆಯಲು ತೊಂದರೆ ಆಗುತ್ತಿದೆಯೇ? ತಕ್ಷಣವೇ ಈ ರೀತಿ ದೂರು ಸಲ್ಲಿಸಿ
Free Ration Latest Update : ದೇಶದ ಯಾವುದೇ ಪ್ರಜೆಯೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಸರ್ಕಾರ ಉಚಿತ ಪಡಿತರ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ, ಹಲವು ಫಲಾನುಭವಿಗಳಿಗೆ ಫ್ರೀ ರೇಷನ್ ಪಡೆಯುವಲ್ಲಿ ತೊಂದರೆ ಉಂಟಾಗುತ್ತಿದೆ ಎಂಬ ಬಗ್ಗೆ ಆಗಾಗ್ಗೆ ವರದಿ ಆಗುತ್ತಲೇ ಇದೆ. ನೀವೂ ಈ ರೀತಿಯ ಸಮಸ್ಯೆ ಅನುಭವಿಸುತ್ತಿದ್ದರೆ, ಚಿಂತಿಸುವ ಅಗತ್ಯವಿಲ್ಲ. ಒಂದು ಸಣ್ಣ ಕೆಲಸ ಮಾಡಿದರೆ ಪಡಿತರ ನಿಮ್ಮ ಮನೆ ಬಾಗಿಲಿಗೆ ಬಂದು ತಲುಪುತ್ತದೆ.
ಉಚಿತ ಪಡಿತರ: ಇಡೀ ವಿಶ್ವವನ್ನೇ ತನ್ನ ಕಪಿಮುಷ್ಠಿಯಲ್ಲಿ ಬಂದಿಸಿದ್ದ ಕರೋನಾ ಸಾಂಕ್ರಾಮಿಕ ಯುಗದಲ್ಲಿ ದೇಶದಲ್ಲಿ ಲಕ್ಷಾಂತರ ಮಂದಿ ನಿರುದ್ಯೋಗಿಗಳಾದರು. ಈ ಸಮಯದಲ್ಲಿ ಅಗತ್ಯ ಇರುವವರಿಗೆ ಸಹಾಯವಾಗಲೆಂದು ಸರ್ಕಾರವು 'ಪಿಎಂ ಗರೀಬ್ ಕಲ್ಯಾಣ್ ಯೋಜನೆ' ಎಂಬ ಮಹತ್ವದ ಯೋಜನೆಯನ್ನು ಪ್ರಾರಂಭಿಸಿತು. ಇದರ ಅಡಿಯಲ್ಲಿ ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ. ರೇಷನ್ ಕಾರ್ಡ್ ಹೊಂದಿರುವ ದೇಶದ ಪ್ರತಿ ಪ್ರಜೆಗೂ ಈ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ.
ವಾಸ್ತವವಾಗಿ, ದೇಶದ ಯಾವುದೇ ಪ್ರಜೆಯೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಸರ್ಕಾರ ಉಚಿತ ಪಡಿತರ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ, ಹಲವು ಫಲಾನುಭವಿಗಳಿಗೆ ಫ್ರೀ ರೇಷನ್ ಪಡೆಯುವಲ್ಲಿ ತೊಂದರೆ ಉಂಟಾಗುತ್ತಿದೆ ಎಂಬ ಬಗ್ಗೆ ಆಗಾಗ್ಗೆ ವರದಿ ಆಗುತ್ತಲೇ ಇದೆ. ನೀವೂ ಈ ರೀತಿಯ ಸಮಸ್ಯೆ ಅನುಭವಿಸುತ್ತಿದ್ದರೆ, ಚಿಂತಿಸುವ ಅಗತ್ಯವಿಲ್ಲ. ಒಂದು ಸಣ್ಣ ಕೆಲಸ ಮಾಡಿದರೆ ಪಡಿತರ ನಿಮ್ಮ ಮನೆ ಬಾಗಿಲಿಗೆ ಬಂದು ತಲುಪುತ್ತದೆ.
ನೀವೂ ಉಚಿತ ಪಡಿತರ ಪಡೆಯಲು ಅರ್ಹರಾಗಿದ್ದರೆ ಮತ್ತು ನಿಮಗೆ 'ಪಿಎಂ ಗರೀಬ್ ಕಲ್ಯಾಣ್ ಯೋಜನೆ'ಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗದಿದ್ದರೆ ಅಥವಾ ಫ್ರೀ ರೇಷನ್ ಪಡೆಯುವಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ ನೀವು ಕುಳಿತಲ್ಲಿಯೇ ಆನ್‌ಲೈನ್‌ನಲ್ಲಿ ಸುಲಭವಾಗಿ ಈ ಕುರಿತಂತೆ ದೂರು ನೀಡಬಹುದು. ಇದರಿಂದ ನಿಮಗೆ ತಲುಪಬೇಕಾದ ಉಚಿತ ಪಡಿತರ ನಿಮ್ಮ ಮನೆ ಬಾಗಿಲಿನ ಬಳಿಗೆ ಬರುತ್ತದೆ.
ಇದನ್ನೂ ಓದಿ- ರೇಷನ್ ಕಾರ್ಡ್ ಹೊಸ ನಿಯಮ, ಇಂತಹವರು ಕೂಡಲೇ ನಿಮ್ಮ ಕಾರ್ಡ್ ಸರೆಂಡರ್ ಮಾಡಿ ಇಲ್ಲವೇ....
ಉಚಿತ ಪಡಿತರಕ್ಕಾಗಿ ದೂರು ಸಲ್ಲಿಸುವುದು ಹೇಗೆ?
ಉಚಿತ ಪಡಿತರ ಪಡೆಯುವಲ್ಲಿ ನೀವು ಯಾವುದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ ಆನ್‌ಲೈನ್‌ನಲ್ಲಿ ವೆಬ್‌ಸೈಟ್ ಮತ್ತು ಇ-ಮೇಲ್ ಮೂಲಕ ದೂರು ಸಲ್ಲಿಸಬಹುದು. ಇದಲ್ಲದೆ, ನೀವು ದೂರು ನೀಡಲು ಸಹಾಯವಾಣಿ ಸಂಖ್ಯೆಗೆ ಕರೆ ಸಹ ಮಾಡಬಹುದು. ಇದಲ್ಲದೆ, ಸ್ಥಳೀಯ ಆಹಾರ ಇಲಾಖೆಗೆ ಭೇಟಿ ನೀಡುವ ಮೂಲಕವೂ ದೂರು ಸಲ್ಲಿಸಬಹುದು.
ಅಗತ್ಯ ದಾಖಲೆಗಳು:
ಇ-ಮೇಲ್ ಮೂಲಕ ದೂರು ನೀಡಲು, ನಿಮ್ಮ ದೂರನ್ನು ನೀವು ಬರೆಯಬೇಕು. ಇದರಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆಯೊಂದಿಗೆ ಪಡಿತರ ಡಿಪೋದ ಹೆಸರನ್ನೂ ನಮೂದಿಸಬೇಕು.
ಪಡಿತರಕ್ಕಾಗಿ ಇ-ಮೇಲ್ ಮೂಲಕ ದೂರು ಸಲ್ಲಿಸುವುದು ಹೇಗೆ?
ಇ-ಮೇಲ್ ಮೂಲಕ ದೂರು ನೀಡಲು, prs-fcs@karnataka.gov.in ಗೆ ಮೇಲ್ ಕಳುಹಿಸಿ. ಆದರೆ, ಕರ್ನಾಟಕದ ಪಡಿತರ ಚೀಟಿ ಹೊಂದಿರುವವರು ಮಾತ್ರ ಈ ಐಡಿಯನ್ನು ಮೇಲ್ ಮಾಡಬಹುದು ಎಂಬುದನ್ನು ನೆನಪಿನಲ್ಲಿಡಿ. ಕರ್ನಾಟಕ ಸರ್ಕಾರ ನೀಡುತ್ತಿರುವ ಸೌಲಭ್ಯದ ಲಾಭ ಪಡೆಯಲು ಮಾತ್ರ ಈ ಬಗ್ಗೆ ದೂರು ನೀಡಬಹುದು. ನೀವು ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ( https://nfsa.gov.in/State/KA ) ಸಹ ದೂರು ನೀಡಬಹುದು.
ಇದನ್ನೂ ಓದಿ- ಪಡಿತರ ಚೀಟಿದಾರರಿಗೆ ಸಿಗುತ್ತೆ ಉಚಿತ ಎಲ್‌ಪಿಜಿ ಸಿಲಿಂಡರ್!
ಟೋಲ್-ಫ್ರೀ ಸಂಖ್ಯೆಗೆ ದೂರು ನೀಡಿ:
ಟೋಲ್ ಫ್ರೀ ಸಂಖ್ಯೆಗೆ ದೂರು ದಾಖಲಿಸಲು, ನೀವು 1800-425-9339 ಸಂಖ್ಯೆಗೆ ಕರೆ ಮಾಡಬೇಕು. ಇಷ್ಟಾಗಿಯೂ ಪ್ರಯೋಜನ ಸಿಗದಿದ್ದರೆ ನಿಮ್ಮ ಕಚೇರಿಯ ವಿಳಾಸಕ್ಕೆ ಹೋಗಿ ದೂರು ನೀಡಬಹುದು. ಪಡಿತರಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.