ನವದೆಹಲಿ : ಕಡಿಮೆ ಸಮಯ ಮತ್ತು ಹೆಚ್ಚು ಶ್ರಮವಿಲ್ಲದೆ ಸಾವಿರಾರು ರೂಪಾಯಿಗಳನ್ನು ಗಳಿಸಲು ಬಯಸುತ್ತೀರಾ? ಹಾಗಾದರೆ ಈ ಸುದ್ದಿಯನ್ನು ಗಮನಯಿಟ್ಟು ಓದಿ . ನಿಮ್ಮಲ್ಲಿ ಹಳೆಯ 500 ರೂಪಾಯಿ (500 Rupee Note) ನೋಟು ಇದ್ದು, ನೀವು ಅದನ್ನು ನಿಷ್ಪ್ರಯೋಜಕ ಅಂದುಕೊಂಡಿದ್ದರೆ ಅದು ಈಗ ಪ್ರಯೋಜನಕ್ಕೆ ಬರಬಹುದು. ಯಾಕೆಂದರೆ ಹಳೆಯ 500 ರೂಪಾಯಿಯ ನೋಟಿನ ಬದಲಿಗೆ ಈಗ ಸಾವಿರ ಸಾವಿರ ರೂಪಾಯಿ ಗಳಿಸುವ ಅವಕಾಶವಿದೆ. 


COMMERCIAL BREAK
SCROLL TO CONTINUE READING

ಮುದ್ರಣದ ಸಮಯದಲ್ಲಾಗುವ ತಪ್ಪಿಗೇ ಇಲ್ಲಿ ಬೆಲೆ : 
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನೋಟುಗಳನ್ನು ಮುದ್ರಿಸುವಾಗ, ಬಹಳ ಎಚ್ಚರಿಕೆ ವಹಿಸುತ್ತದೆ. ಪ್ರತೀ ನೋಟಿಗೂ ನಿರ್ದಿಷ್ಟವಾದ ಮಾದರಿ ಇರುತ್ತದೆ. ಇದರ ಪ್ರಕಾರವೇ ನೋಟು ಮುದ್ರಿಸಲಾಗುತ್ತದೆ. ಹಾಗಾಗಿಯೇ ಎಲ್ಲಾ ನೋಟುಗಳು ಒಂದೇ ಪ್ರಕಾರವಾಗಿರುತ್ತವೆ. ಆದರೂ ಕೆಲವೊಮ್ಮೆ ಕೆಲ ನೋಟುಗಳು ಮಾದರಿಯನ್ನು ಮೀರಿ ಮುದ್ರಿತವಾಗುತ್ತದೆ. ಮತ್ತು ಮಾರುಕಟ್ಟೆಗೂ ಬಂದು ಬಿಡುತ್ತದೆ. ಆಗ ಆ ನೋಟುಗಳೇ ವಿಶೇಷ (special notes) ಎಂದೆನಿಸಿಕೊಳ್ಳುತ್ತವೆ. ಇಂಥಹ ನೋಟುಗಳನ್ನು  ಸಾವಿರಾರು ರೂಪಾಯಿ ಕೊಟ್ಟು ಖರೀದಿಸಿ ಮಾಡುತ್ತಾರೆ. 


ಇದನ್ನೂ ಓದಿ : EPFO Rules: ನಿಮ್ಮ ಪಿಎಫ್ ಖಾತೆಯಲ್ಲಿ ಸಿಗಲಿದೆ 50,000 ರೂ. ನೇರ ಪ್ರಯೋಜನ, ಆದರೆ...


500 ರ ಬದಲಿಗೆ ಸಿಗಲಿದೆ 5ರಿಂದ 10 ಸಾವಿರ ರೂಪಾಯಿಗಳು: 
ನಿಮ್ಮ ಬಳಿ ಹಳೆಯ ಐನೂರು ರೂಪಾಯಿ ನೋಟುಗಳಿದ್ದರೆ, ಅದರ ಸರಣಿ ಸಂಖ್ಯೆಯನ್ನೊಮ್ಮೆ ಗಮನಿಸಿ. ನೊಟಿನ ಸರಣಿ ಸಂಖ್ಯೆಯನ್ನು (Serial number) ಎರಡು ಬಾರಿ ಮುದ್ರಿಸಲಾಗಿದೆಯೇ ಎಂದು ತಕ್ಷಣ ಪರಿಶೀಲಿಸಿ. ಒಂದು ವೇಳೆ ಹೌದು ಎಂದಿದ್ದರೆ, ಈ ನೋಟಿನ ಬದಲಿಗೆ ನೀವು 5000 ಸಾವಿರ ರೂಪಾಯಿಗಳನ್ನು ಪಡೆಯಬಹುದು. ಇದಲ್ಲದೆ, ನಿಮ್ಮಲ್ಲಿರುವ   500 ರೂಪಾಯಿ ನೋಟಿನ (500 Rupee Note) ಒಂದು ಅಂಚು ದೊಡ್ಡದಾಗಿದ್ದರೆ, ಆಗ ಆ ನೋಟಿಗೆ ಬದಲಾಗಿ ನೀವು 10000 ರೂಪಾಯಿಗಳನ್ನು ಪಡೆಯಬಹುದು.


ಈ ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು :
ನೋಟುಗಳನ್ನು ಮಾರಾಟ ಮಾಡಲು, ಮೊದಲಿಗೆ  oldindiancoins.com. ಆನ್‌ಲೈನ್ ವೆಬ್‌ಸೈಟ್‌ ಗೆ ಹೋಗಬೇಕು. ಇಲ್ಲಿ ನೋಟಿನ ಫೋಟೋ ತೆಗೆಯುವ ಮೂಲಕ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಿ.  ಮತ್ತು ಆನ್ ಸೇಲ್ ಟ್ಯಾಗ್ ಹಾಕಿ. ಇಷ್ಟಾದ ನಂತರ ಜನ ಬಿಡ್‌ ಮಾಡಲು ಶುರು ಮಾಡುತ್ತಾರೆ. ಯಾರು ಹೆಚ್ಚು ಬಿಡ್ ಮಾಡುತ್ತಾರೋ ಅವರಿಗೆ ನೋಟು ಮಾರಾಟ ಮಾಡಿ. ನಿಮ್ಮಲ್ಲಿರುವ ಹಳೆಯ ನೋಟಿನ ಬದಲಿಗೆ ಸಾವಿರಾರು ರೂಪಾಯಿಗಳನ್ನು ಪಡೆದುಕೊಳ್ಳಿ. 


ಇದನ್ನೂ ಓದಿ :Credit Card Payment ಬಾಕಿ ಇದೆಯೇ? ಪಾವತಿಸಲು ಖಾತೆಯಲ್ಲಿ ಹಣವಿಲ್ಲವೇ? ಇಲ್ಲಿದೆ ಸುಲಭ ಮಾರ್ಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.