ಬೆಂಗಳೂರು : ನೀವು ಪಡಿತರ ಚೀಟಿಯ ಫಲಾನುಭವಿಯಾಗಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ (Ration card Updates). ರಾಜ್ಯ ಸರ್ಕಾರವು ಕಾಲಕಾಲಕ್ಕೆ ಪಡಿತರ ಚೀಟಿ ಪಟ್ಟಿಯನ್ನು ನವೀಕರಿಸುತ್ತಲೇ ಇರುತ್ತದೆ. ಪಡಿತರ ಚೀಟಿಯಲ್ಲಿ ವ್ಯತ್ಯಯ ಕಂಡು ಬಂದರೆ ಅದನ್ನು ರದ್ದುಪಡಿಸಲಾಗುತ್ತದೆ. ದೀರ್ಘಕಾಲದವರೆಗೆ ಆಹಾರ ಧಾನ್ಯಗಳನ್ನು ತೆಗೆದುಕೊಳ್ಳಲು ನಿಮ್ಮ ಪಡಿತರ ಚೀಟಿಯನ್ನು ಬಳಸದಿದ್ದರೆ, ನಿಮ್ಮ ಕಾರ್ಡ್ ಅನ್ನು ರದ್ದುಗೊಳಿಸಬಹುದು.


COMMERCIAL BREAK
SCROLL TO CONTINUE READING

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ, ಪಡಿತರ ಚೀಟಿ (Ration card) ಹೊಂದಿರುವ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಇದರಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ, ಕುಟುಂಬದಲ್ಲಿನ ಸದಸ್ಯರ ಸಂಖ್ಯೆಯ ಆಧಾರದ ಮೇಲೆ, ಸರ್ಕಾರವು ಜನರಿಗೆ ಅತ್ಯಂತ ಅಗ್ಗದ ದರದಲ್ಲಿ ಪಡಿತರವನ್ನು ನೀಡುತ್ತದೆ (Ration at low price). ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದು ಇದರ ಉದ್ದೇಶವಾಗಿದೆ.  


ಇದನ್ನೂ ಓದಿ :  Credit Cards: ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದೀರಾ? ಇದರಿಂದ ಎಷ್ಟು ಲಾಭ -ನಷ್ಟ ತಿಳಿಯಿರಿ


ಪಡಿತರ ಚೀಟಿ ರದ್ದಾಗಬಹುದು :
 ನೀವು ಪಡಿತರ ಇಲಾಖೆಯಲ್ಲಿ ಯಾವ ತಿಂಗಳಲ್ಲಿ ಪಡಿತರವನ್ನು ತೆಗೆದುಕೊಂಡಿದ್ದೀರಿ ಮತ್ತು ನಿಮ್ಮ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ, ಈ  ಎಲ್ಲಾ ಮಾಹಿತಿಯು ಪಡಿತರ ಚೀಟಿಯಲ್ಲಿರುತ್ತದೆ. ನಿಯಮಗಳ ಪ್ರಕಾರ, ನಿಮ್ಮ ಹೆಸರಿನಲ್ಲಿ ಪಡಿತರ ಚೀಟಿ ಇದ್ದರೆ ಮಾತ್ರ ನೀವು ಪಿಡಿಎಸ್‌ನಲ್ಲಿ ಆಹಾರ ಧಾನ್ಯಗಳನ್ನು ಪಡೆಯುತವುದು ಸಾಧ್ಯವಾಗುತ್ತದೆ (Ration Card Rules). ಆದರೆ, ದೀರ್ಘಕಾಲದಿಂದ ಬಳಕೆಯಾಗದ ಎಲ್ಲಾ ಪಡಿತರ ಚೀಟಿಗಳು ರದ್ದಾಗಿವೆ ಎಂಬ ಮಾಹಿತಿ ಇದೀಗ ಬಂದಿದೆ. 


ಏನು ಹೇಳುತ್ತದೆ ನಿಯಮ ? 
ಇಲಾಖೆ ಪ್ರಕಾರ, 'ಒಬ್ಬ ಪಡಿತರ ಚೀಟಿದಾರರು ಆರು ತಿಂಗಳಿಂದ ಪಡಿತರ ತೆಗೆದುಕೊಳ್ಳದಿದ್ದರೆ, ಅವರಿಗೆ ಅಗ್ಗದ ದರದಲ್ಲಿ ದೊರೆಯುವ ಆಹಾರ ಧಾನ್ಯಗಳ ಅಗತ್ಯವಿಲ್ಲ ಅಥವಾ ಪಡಿತರ ಪಡೆಯಲು ಅರ್ಹರಲ್ಲ ಎಂದು ಹೇಳಲಾಗಿದೆ. ಈ ಕಾರಣಗಳ ಆಧಾರದ ಮೇಲೆ, ಆರು ತಿಂಗಳಿಂದ ಪಡಿತರವನ್ನು ತೆಗೆದುಕೊಳ್ಳದ ವ್ಯಕ್ತಿಯ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತದೆ (ration Card gets cancelled). 


ಇದನ್ನೂ ಓದಿ : ATM ಸ್ಕಿಮ್ಮಿಂಗ್ ಮೂಲಕ ಖಾಲಿಯಾಗಿ ಬಿಡಬಹುದು ನಿಮ್ಮ ಬ್ಯಾಂಕ್ ಖಾತೆ ..! ಸುರಕ್ಷಿತವಾಗಿರುವುದು ಹೇಗೆ ?


 ಒಂದು ವೇಳೆ ಈ ಕಾರಣಕ್ಕಾಗಿ ನಿಮ್ಮ ಪಡಿತರ ಚೀಟಿಯನ್ನು ರದ್ದುಗೊಳಿಸಿದರೆ, ನೀವು ಅದನ್ನು ಮತ್ತೆ ಸಕ್ರಿಯಗೊಳಿಸಬಹುದು. ಇದಕ್ಕಾಗಿ, ನಿಮ್ಮ ರಾಜ್ಯದಲ್ಲಿ AePDS ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಕೆಲವು ಫಾರ್ಮಾಲಿಟಿ ಪೂರೈಸಬೇಕು.  ಮಾತ್ರವಲ್ಲ,  AePDS ರೇಷನ್ ಕಾರ್ಡ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಕೂಡಾ ಅದನ್ನು ಸಕ್ರಿಯಗೊಳಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.