ನವದೆಹಲಿ : ಅಸಂಘಟಿತ ವಲಯದ ಕಾರ್ಮಿಕರು ಮತ್ತು ಕಡಿಮೆ ಆದಾಯ  ಹೊಂದಿರುವ ನೌಕರರು ನಿವೃತ್ತಿಯ ನಂತರ ಪಿಂಚಣಿ ಪಡೆಯುವ ದಾರಿಯನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ  ಪ್ರಧಾನ ಮಂತ್ರಿ ಶ್ರಮ ಯೋಗಿ ಮತ್ತು ಮಾನ್ ಧನ್ ಯೋಜನೆಯೂ ಸೇರಿದೆ (Pradhan Mantri Shram Yogi Maandhan Yojana).  ಇದು ಸ್ವಯಂಪ್ರೇರಿತ ಮತ್ತು ಕಾಂಟ್ರೀಬ್ಯುಟರಿ  ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಗಯ ಅಡಿಯಲ್ಲಿ  ಇಲ್ಲಿವರೆಗೆ 45 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆ  ಅನ್ವಯ 60 ವರ್ಷ ವಯಸ್ಸಿನ ನಂತರ, ಜೀವನಪರ್ಯಂತ ವ್ಯಕ್ತಿಯು 3000 ರೂ ಪಿಂಚಣಿ ಪಡೆಯಬಹುದು. ಈ ಯೋಜನೆಯ ವಿಶೇಷವೆಂದರೆ ಜನ್ ಧನ್ ಖಾತೆದಾರರೂ ಈ ಯೋಜನೆಯಡಿ ಪಿಂಚಣಿಗೆ (Pension) ಅರ್ಹರಾಗಿರುತ್ತಾರೆ. 


COMMERCIAL BREAK
SCROLL TO CONTINUE READING

ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲವಾಗಲಿದೆ :
 ಅಸಂಘಟಿತ ವಲಯದ ಕಾರ್ಮಿಕರು, ಬಹುತೇಕ ಗೃಹ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಮಿಡ್ ಡೇ ಮೀಲ್ ವರ್ಕರ್ , ಹೆಡ್ ಲೋಡರ್‌ಗಳು, ಇಟ್ಟಿಗೆ ಗೂಡು ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆಗೆಲಸದವರು, ಧೋಬಿಗಳು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಇದಲ್ಲದೆ ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು ಅಥವಾ ಕೂಲಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಕೂಡಾ ಇದರ ಪ್ರಯೋಜನ ಪಡೆಯಬಹುದು. ಮಾಸಿಕ ಆದಾಯ (Monthly Income) 15,000 ರೂಪಾಯಿ ಮೀರದ ಕಾರ್ಮಿಕರಿಗೆ ಈ ಯೋಜನೆಯ ಪ್ರಯೋಜನವನ್ನು ನೀಡಲಾಗುತ್ತದೆ. 


ಇದನ್ನೂ ಓದಿ :  Masked Aadhaar ಎಂದರೇನು? UIDAIನ ಈ ವೈಶಿಷ್ಟ್ಯದಿಂದ ಏನು ಪ್ರಯೋಜನ?


ಈ ಯೋಜನೆಯಡಿ (PM Maandhan Yojana), 60 ವರ್ಷ ವಯಸ್ಸಿನ ನಂತರ, ಪ್ರತಿ ತಿಂಗಳು 3000 ರೂ. ಅಂದರೆ ವಾರ್ಷಿಕ . 36,000 ರೂ ಪಿಂಚಣಿ ನೀಡಲಾಗುತ್ತದೆ. ಇಪಿಎಫ್‌ಒ (EPFO), NPS ಅಥವಾ ಇಎಸ್‌ಐಸಿ ಸದಸ್ಯರಾಗಿರುವವರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಆದಾಯ ತೆರಿಗೆ (Income tax) ಪಾವತಿಸುವವರು ಕೂಡಾ ಈ ಯೋಜನೆಗೆ ಅರ್ಹರಲ್ಲ. 


ಹೂಡಿಕೆ ಎಷ್ಟು ಮಾಡಬೇಕು ?
ಯೋಜನೆಯ ಪ್ರಕಾರ, ಒಬ್ಬ ವ್ಯಕ್ತಿಯು 18 ವರ್ಷ ವಯಸ್ಸಿನವರಾಗಿದ್ದರೆ, 60 ವರ್ಷ ವಯಸ್ಸಿನವರೆಗೆ ಪ್ರತಿ ತಿಂಗಳು 55 ರೂಪಾಯಿಗಳನ್ನು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಲ್ಲಿ ಠೇವಣಿ ಮಾಡಬೇಕಾಗುತ್ತದೆ (Pradhan Mantri Shram Yogi Maandhan Yojana). 29 ವರ್ಷ ವಯಸ್ಸಿನವರಾಗಿದ್ದರೆ, ಯೋಜನೆಯಲ್ಲಿ ಪಿಂಚಣಿ ಪಡೆಯಲು 60 ವರ್ಷ ವಯಸ್ಸಿನವರೆಗೆ ಪ್ರತಿ ತಿಂಗಳು 100 ರೂಪಾಯಿಗಳನ್ನು ಠೇವಣಿ ಮಾಡಬೇಕಾಗುತ್ತದೆ. ಉದ್ಯೋಗಿಯು 40 ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿದರೆ, ಪ್ರತಿ ತಿಂಗಳು 200 ರೂ. ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ವಿಶೇಷವೆಂದರೆ ಖಾತೆದಾರರೂ ಎಷ್ಟು ಮೊತ್ತ ಹೂಡಿಕೆ ಮಾಡುತ್ತಾರೋ, ಅಷ್ಟೇ ಮೊತ್ತವನ್ನು ಸರ್ಕಾರ ಕೂಡಾ ನೀಡಲಿದೆ.


ಅಗತ್ಯ ದಾಖಲೆಗಳು : 
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಗೆ, ಕೇವಲ ಎರಡು ದಾಖಲೆಗಳ ಅಗತ್ಯವಿರುತ್ತದೆ.  ಆಧಾರ್ ಕಾರ್ಡ್ (Aadhaar Card) ಮತ್ತು ಉಳಿತಾಯ ಖಾತೆ . ಜನ್ ಧನ್ ಖಾತೆಯನ್ನು (Jandhan Account) ಹೊಂದಿದ್ದರೂ ಈ ಯೋಜನೆಗೆ ಸೇರಬಹುದು. ಇದಕ್ಕಾಗಿ ನೀವು ಪ್ರತ್ಯೇಕ ಉಳಿತಾಯ ಖಾತೆ ತೆರೆಯುವ ಅಗತ್ಯವಿಲ್ಲ. ಇದಲ್ಲದೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಹ ನಮೂದಿಸಬೇಕಾಗುತ್ತದೆ.


ಇದನ್ನೂ ಓದಿ :  10-02-2022 Today Gold Price:ಆಭರಣ ಪ್ರಿಯರಿಗೆ ಶಾಕ್.. ಬಂಗಾರದ ಬೆಲೆಯಲ್ಲಿ ಏರಿಕೆ


ಈ ರೀತಿ ನೋಂದಾಯಿಸಿಕೊಳ್ಳಿ : 
-ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಯಲ್ಲಿ ನೋಂದಣಿಗಾಗಿ, ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ .
-ಆಧಾರ್ ಕಾರ್ಡ್ ಮತ್ತು ಉಳಿತಾಯ ಖಾತೆ (Saving account) ಅಥವಾ ಜನ್ ಧನ್ ಖಾತೆಯ ಮಾಹಿತಿಯನ್ನು IFSC ಕೋಡ್‌ನೊಂದಿಗೆ ನೀಡಬೇಕಾಗುತ್ತದೆ. ಪಾಸ್ ಬುಕ್, ಚೆಕ್ ಬುಕ್ ಅಥವಾ ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು ಪುರಾವೆಯಾಗಿ ನೀಡಬಹುದು. 
-ಖಾತೆಯನ್ನು ತೆರೆಯುವ ಸಮಯದಲ್ಲಿ ನಾಮಿನಿಯನ್ನು ಸಹ ನಮೂದಿಸಬಹುದು.
-ನಿಮ್ಮ ವಿವರಗಳನ್ನು ಕಂಪ್ಯೂಟರ್‌ನಲ್ಲಿ ನಮೂದಿಸಿದ ನಂತರ, ಮಾಸಿಕ ಕೊಡುಗೆ ಮಾಹಿತಿ ಸಿಗುತ್ತದೆ. 
- ಇದರ ನಂತರ, ನೀವು ನಿಮ್ಮ ಆರಂಭಿಕ ಕೊಡುಗೆಯನ್ನು ನಗದು ರೂಪದಲ್ಲಿ ನೀಡಬೇಕಾಗುತ್ತದೆ.
-ಇದರ ನಂತರ ನಿಮ್ಮ ಖಾತೆಯನ್ನು ತೆರೆಯಲಾಗುತ್ತದೆ ಮತ್ತು ಶ್ರಮ ಯೋಗಿ ಕಾರ್ಡ್ ನೀಡಲಾಗುತ್ತದೆ. 
-ಈ ಯೋಜನೆಯ ಬಗ್ಗೆ  1800 267 6888 ಟೋಲ್ ಫ್ರೀ ಸಂಖ್ಯೆಯಲ್ಲಿಯೂ ಮಾಹಿತಿ ಪಡೆಯಬಹುದು.


ಈ ನಿಯಮವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ : 
ಕೆಲವು ಕಾರಣಗಳಿಂದ ಹೂಡಿಕೆ ಮಾಡಲು ಸಾಧ್ಯವಾಗದೆ ಇದ್ದರೆ, ಬಾಕಿ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಬೇಕಾಗುತ್ತದೆ. ಚಂದಾದಾರರು ಸೇರ್ಪಡೆಗೊಂಡ ದಿನಾಂಕದಿಂದ 10 ವರ್ಷಗಳೊಳಗೆ ಯೋಜನೆಯಿಂದ ಹಣವನ್ನು ಹಿಂಪಡೆಯಲು ಬಯಸುವುದಾದರೆ, ಕೇವಲ ಅವರು ಮಾಡಿರುವ ಹೂಡಿಕೆಯನ್ನು ಮಾತ್ರ ಉಳಿತಾಯ ಖಾತೆಯ ಬಡ್ಡಿ ದರದಲ್ಲಿ ಹಿಂತಿರುಗಿಸಲಾಗುತ್ತದೆ.


ಇದನ್ನೂ ಓದಿ:  LIC ಈ ಯೋಜನೆಯಲ್ಲಿ ದಿನಕ್ಕೆ ₹262 ಹೂಡಿಕೆ ಮಾಡಿ, ₹20 ಲಕ್ಷ ಲಾಭ ಪಡೆಯಿರಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.