ನವದೆಹಲಿ : ಕೊರೊನಾವೈರಸ್ (Coronavirus) ಅವಧಿಯಲ್ಲಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. CMIE ಪ್ರಕಾರ, ಜೂನ್ 21 ರ ಹೊತ್ತಿಗೆ ಭಾರತದಲ್ಲಿ ಸರಾಸರಿ ನಿರುದ್ಯೋಗ ದರವು ಶೇಕಡಾ 10.6 ರಷ್ಟಿದೆ. ಜೂನ್ 7 ರಂದು ನಿರುದ್ಯೋಗವು ಶೇಕಡಾ 12.99 ಕ್ಕೆ ತಲುಪಿತ್ತು, ಕಳೆದ ರಡು ವಾರದಲ್ಲಿ ಇದರ ಪ್ರಮಾ ಣ ಸ್ವಲ್ಪ ಕಡಿಮೆಯಾಗಿದೆ. ಕಳೆದ ವರ್ಷದ ಬಗ್ಗೆ ಹೇಳುವುದಾದರೆ, ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಕಾರಣದಿಂದಾಗಿ, ನಿರುದ್ಯೋಗ ಮಟ್ಟವು 24  ಪ್ರತಿಶತವನ್ನು ದಾಟಿತ್ತು. ಅಂತಹ ಪರಿಸ್ಥಿತಿಯಲ್ಲಿ, ನೀವು ಸಹ ನಿರುದ್ಯೋಗಿಗಳಾಗಿದ್ದರೆ ಭಯಪಡುವ ಅಗತ್ಯವಿಲ್ಲ. ESIC ಯೋಜನೆಯಡಿಯಲ್ಲಿ ನಿರುದ್ಯೋಗ ಭತ್ಯೆಯನ್ನು (Unemployment Allowance) ನೀಡಲಾಗುತ್ತದೆ. 


COMMERCIAL BREAK
SCROLL TO CONTINUE READING

ಏನಿದು RGSKY? :
ಇದು ರಾಜೀವ್ ಗಾಂಧಿ ಶ್ರಮಿಕ್ ಕಲ್ಯಾಣ್ ಯೋಜನೆ (Rajiv Gandhi Shramik Kalyan Yojana– RGSKY). ನಿರುದ್ಯೋಗ ಭತ್ಯೆ ನೀಡುವ ಈ ಯೋಜನೆಯನ್ನು 2005 ರಲ್ಲಿ ಆರಂಭಿಸಲಾಯಿತು. ಇದರ ಪ್ರಕಾರ, ಯಾವುದೇ ವ್ಯಕ್ತಿ ನೌಕರರ ರಾಜ್ಯ ವಿಮಾ ಯೋಜನೆ' ಯ ವ್ಯಾಪ್ತಿಗೆ ಒಳಪಟ್ಟರೆ, ಅವರು ಕೆಲಸ ನಿರುದ್ಯೋಗಿಯಾದಾಗ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ. ಇದರ ಅಡಿಯಲ್ಲಿ, ವ್ಯಕ್ತಿಯ ಆದಾಯದ 50 ಪ್ರತಿಶತವನ್ನು ನಿರುದ್ಯೋಗ ಭತ್ಯೆಯಾಗಿ (Unemployment Allowance) ನೀಡಲಾಗುತ್ತದೆ. ಗರಿಷ್ಠ 2 ವರ್ಷಗಳವರೆಗೆ ಈ ನೆರವನ್ನು ನೀಡಲಾಗುತ್ತದೆ.  


ಇದನ್ನೂ ಓದಿ : ATM ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದಂತೆ ಎಸ್‌ಬಿಐ ಎಚ್ಚರಿಕೆ! ನಿಮ್ಮ ಕಾರ್ಡ್ ಕಳೆದುಹೋದರೆ ತಕ್ಷಣ ಈ ಕೆಲಸ ಮಾಡಿ


ಇವು ಅಗತ್ಯ ಪರಿಸ್ಥಿತಿಗಳು :
ಈ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯಬೇಕಾದರೆ ಕೆಲವು ಷರತ್ತುಗಳಿರುತ್ತವೆ. ಹಾಗಿದ್ದರೆ ಆ ಷರತ್ತಯಗಳು ಏನು ನೋಡೋಣ.. 
1. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ (Union Ministry of Labor and Employment) ನಡೆಸುತ್ತಿರುವ ESIC ಯೋಜನೆಯಡಿ ರಾಜೀವ್ ಗಾಂಧಿ ಶ್ರಮಿಕ್ ಕಲ್ಯಾಣ್ ಯೋಜನೆಯ (Rajiv Gandhi Shramik Kalyan Yojana)  ಪ್ರಯೋಜನವನ್ನು ನೀಡಲಾಗುತ್ತದೆ. ಈ ಯೋಜನೆ ಈಗಾಗಲೇ ESIC  ವ್ಯಾಪ್ತಿಗೆ ಬರುವ ವ್ಯಕ್ತಿಗಳಿಗೆ ಆಗಿದೆ.
2. ಈ ಯೋಜನೆಯ ಮಾಹಿತಿಯನ್ನು ತನ್ನ ಟ್ವಿಟ್ಟರ್ (twitter) ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳುವಾಗ, ಯಾವ ಸಂದರ್ಭದಲ್ಲಿ ಈ ಯೋಜನೆಯ ಲಾಭವನ್ನು (ನಿರುದ್ಯೋಗ ಭತ್ಯೆ) ಪಡೆಯಬಹುದು ಎಂದು ಇಎಸ್‌ಐಸಿ ಹೇಳಿದೆ.
3. ID ಕಾಯ್ದೆಯಡಿ, ಇಎಸ್ಐಸಿ ವಿಮಾದಾರನು ಕಾರ್ಖಾನೆ ಮುಚ್ಚಿ ಹೋದ ಕಾರಣದಿಂದ ತನ್ನ ಕೆಲಸವನ್ನು ಕಳೆದುಕೊಂಡರೆ, ಅವನು ನಿರುದ್ಯೋಗ ಭತ್ಯೆಗೆ ಅರ್ಹನಾಗಿರುತ್ತಾನೆ.
4. ವಿಮೆ (Insurance) ಮಾಡಿದ ವ್ಯಕ್ತಿ ಶಾಖಾ ಕಚೇರಿಯಲ್ಲಿ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಬೇಕು. ಶಾಖಾ ಕಚೇರಿ ಈ ಅರ್ಜಿಯನ್ನು ಪರಿಶೀಲಿಸುತ್ತದೆ ಮತ್ತು ಅರ್ಜಿಯನ್ನು SRO ಅಥವಾ ಆರ್‌ಒಗೆ ರವಾನಿಸುತ್ತದೆ. ಇದರ ನಂತರ ಮಾತ್ರ ವ್ಯಕ್ತಿಗೆ ಭತ್ಯೆ ಸಿಗುತ್ತದೆ.


ಇದನ್ನೂ ಓದಿ : Indian Railways: ಈ ಕೋಟಾಗಳಡಿ ಟಿಕೆಟ್ ಬುಕ್ ಮಾಡಿದರೆ Confirm ಸೀಟು ಗ್ಯಾರಂಟಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.