ನವದೆಹಲಿ: ಕೋವಿಡ್-19 ಸಾಂಕ್ರಾಮಿಕವು ಅನೇಕರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಆದರೆ ಇಲ್ಲೊಂದು ವೆಬ್‌ಸೈಟ್ ಮನೆಯಲ್ಲಿಯೇ ಕುಳಿತು ಕೈತುಂಬಾ ದುಡ್ಡು ಮಾಡಲು ನಿಮಗೆ ಸುವರ್ಣಾವಕಾಶ ನೀಡುತ್ತಿದೆ. ಹೌದು, ನಿಮ್ಮ ಹತ್ತಿರ ಹಳೆಯ ನೋಟುಗಳಿದ್ದರೆ ಸುಲಭವಾಗಿ ಲಕ್ಷಾಂತರ ರೂ. ಹಣ ಸಂಪಾದಿಸಬಹುದು.


COMMERCIAL BREAK
SCROLL TO CONTINUE READING

ನಿಮ್ಮ ಬಳಿ 786 ಸಂಖ್ಯೆಯ ನೋಟುಗಳಿದ್ದರೆ ಮನೆಯಲ್ಲಿಯೇ ಕುಳಿತು ಕೈತುಂಬಾ ಹಣ ಗಳಿಸಬಹುದು. ಇದಕ್ಕೆ ನೀವು ಮಾಡಬೇಕಾಗಿರುವುದ ಇಷ್ಟೇ... ಮೊದಲು ನೀವು ಆನ್‌ಲೈನ್‌ ಶಾಪಿಂಗ್(Online Shopping) ತಾಣವಾಗಿರುವ ಇಬೇ (eBay) ವೆಬ್‌ಸೈಟ್ ಗೆ ಲಾಗಿನ್ ಆಗಬೇಕು. ಅಲ್ಲಿ ನೀವು 786 ಸರಣಿಯ ಅಥವಾ ವಿಶಿಷ್ಟ ಸಂಖ್ಯೆಯ ಹಳೆ ನೋಟುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಈ ವೆಬ್‌ಸೈಟ್ ನಲ್ಲಿ ನೀವು ನೇರವಾಗಿ ವಿಶಿಷ್ಟ ಸಂಖ್ಯೆಯ ಹಳೆ ನೋಟು ಮತ್ತು ಕಾಯಿನ್ ಗಳನ್ನು ಖರೀದಿಸುವವರಿಗೆ ನೀಡಬಹುದಾಗಿದೆ.  


ಇದನ್ನೂ ಓದಿ: PM Kisan : ಪತಿ ಪತ್ನಿ ಇಬ್ಬರೂ ಪಡೆಯಬಹುದೇ ಯೋಜನೆಯ ಲಾಭ ? ಏನು ಹೇಳುತ್ತದೆ ನಿಯಮ


ನಿಮ್ಮ ಬಳಿ 786 ಸಂಖ್ಯೆಯ ನೋಟುಗಳಿದ್ದರೆ ನೀವು ಇಬೇ ವೆಬ್‌ಸೈಟ್(eBay Website) ನಲ್ಲಿ ಮಾರಾಟ ಮಾಡಿ ಹಣ(Money) ಗಳಿಸಬಹುದು. ವಿಶಿಷ್ಟ ಸಂಖ್ಯೆಯ 1, 2, 10, 100, 200, 500 ಮತ್ತು 2000 ರೂ. ಮುಖಬೆಲೆಯ ನೋಟುಗಳನ್ನು ನಿಮ್ಮ ಬಳಿ ಇದ್ದರೆ ತಡಮಾಡದೆ ಮಾರಾಟ ಮಾಡಿ ಲಕ್ಷ ಲಕ್ಷ ಹಣ ಎಣಿಸಬಹದು. ಅಷ್ಟಕ್ಕೂ ಈ ಸಂಖ್ಯೆಯ ನೋಟುಗಳಿಗೆ ಇಷ್ಟೊಂದು ಡಿಮ್ಯಾಂಡ್ ಏಕೆಂದು ನೀವು ಕೇಳಬಹುದು. ಮುಸ್ಲಿಂ ಸಮುದಾಯದವರು 786 ಸಂಖ್ಯೆಯ ನೋಟುಗಳು ಅಪರೂಪದಲ್ಲೇ ಅಪರೂಪ, ಶುಭ ಮತ್ತು ಅದೃಷ್ಟದ ಸಂಕೇತವೆಂದು ನಂಬುತ್ತಾರೆ. ಹೀಗಾಗಿ ಅವರು ದೊಡ್ಡ ಮೊತ್ತದ ಹಣ ನೀಡಿ ಈ ಸಂಖ್ಯೆ ಇರುವ ನೋಟುಗಳನ್ನು ಖರೀದಿಸುತ್ತಾರೆ. ಕೆಲವರು ಈ ಸಂಖ್ಯೆಯ ನೋಟುಗಳಿಗೆ 3 ಲಕ್ಷ ರೂ.ವರೆಗೂ ಹಣ ಪಡೆದುಕೊಂಡಿದ್ದಾರೆ.


ಇದನ್ನೂ ಓದಿ: ಕೇವಲ 24 ಗಂಟೆಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಗೆ ಸುಮಾರು 1 ಲಕ್ಷ ಬುಕಿಂಗ್ ಬೇಡಿಕೆ..!


Ebay.comನಲ್ಲಿ ಹಳೆ ನೋಟುಗಳನ್ನು ಹೀಗೆ ಮಾರಿ...


1) ಮೊದಲು www.ebay.com ವೆಬ್‌ಸೈಟ್ ಗೆ ಲಾಗಿನ್ ಆಗಿ.


2) ಹೋಮ್ ಪೇಜ್ ನಲ್ಲಿ ನೋಂದಣಿ ಕ್ಲಿಕ್ ಮಾಡಿ. ನಿಮ್ಮನ್ನು ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಿ.


3) ನೀವು ಮಾರಾಟ ಮಾಡುವ ನೋಟು ಅಥವಾ ಕಾಯಿನ್ ಗಳ ಸ್ಪಷ್ಟವಾದ ಚಿತ್ರವನ್ನು ತೆಗೆದುಕೊಂಡು ಅದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿ.


4) ನಿಮ್ಮ ಜಾಹೀರಾತು ನೋಡುವ ಜನರು ನೇರವಾಗಿ ನಿಮ್ಮನ್ನು ಸಂಪರ್ಕಿಸಿ ನೋಟು ಅಥವಾ ಕಾಯಿನ್ ಗಳನ್ನು ಪಡೆದುಕೊಳ್ಳುತ್ತಾರೆ.


ಇದಷ್ಟೇ ಅಲ್ಲದೆ ನೀವು ಹಳೆಯ 1, 2, 5 ರೂ. ಮುಖಬೆಲೆಯ ನೋಟು ಮತ್ತು ಕಾಯಿನ್ ಗಳನ್ನು ಸಾವಿರಾರು ರೂ.ಗಳಿಗೆ ಮಾರಾಟ ಮಾಡಬಹುದಾಗಿದೆ. ಕೇವಲ 10 ರೂ. ಮುಖಬೆಲೆಯ ಒಂದು ನೋಟು ನಿಮಗೆ 25 ಸಾವಿರ ರೂ.ವರೆಗೂ ತಂದುಕೊಡುತ್ತದೆ. ಕಾಯಿನ್ ಬಜಾರ್(Coinbazzar) ಎಂಬ ವೆಬ್‌ಸೈಟ್‌ನಲ್ಲಿ ನೀವು ಹಳೆಯ ನೋಟುಗಳು ಮತ್ತು ಕಾಯಿನ್ ಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಹಾಗಾದರೆ ಇನ್ನೇಕೆ ತಡ ನಿಮ್ಮ ಬಳಿ ಹಳೆಯ ನೋಟು ಮತ್ತು ಕಾಯಿನ್ ಗಳಿದ್ದರೆ ಈಗಲೇ ಆನ್‌ಲೈನ್‌ನಲ್ಲಿ ಮಾರಾಟ ಮಾಡಿ ಸಾವಿರಾರು ರೂ. ಪಡೆದುಕೊಳ್ಳಿ.. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ