ನವದೆಹಲಿ : ನಿಮ್ಮ ಒಂದು ಸಣ್ಣ ಹವ್ಯಾಸವು ನಿಮ್ಮನ್ನು ನಿಮಿಷಗಳಲ್ಲಿ ಮಿಲಿಯನೇರ್ ಮಾಡಬಹುದು. ಅನೇಕರು ಹಳೆಯ ನೋಟು ಮತ್ತು ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುತ್ತಾರೆ. ನೀವು ಸಹ ಇಂತಹ ಹವ್ಯಾಸ ಹೊಂದಿದ್ದಾರೆ ಮನೆಯಿಂದಲೇ ಸಂಪಾದಿಸಬಹುದು ಲಕ್ಷ ಲಕ್ಷ ಹಣ. ಇದು ನಿಮಗೆ ಉತ್ತಮ ಅವಕಾಶವಾಗಿದೆ. ಇದಕ್ಕಾಗಿ ನೀವು ಯಾವುದೇ ರೀತಿಯ ಹೂಡಿಕೆ ಮಾಡಬೇಕಾಗಿಲ್ಲ. ನಿಮ್ಮ ಬಳಿ ಈ ವಿಶೇಷವಾದ ಹಳೆಯ ಒಂದು ರೂಪಾಯಿ ನೋಟು ಇದ್ದರೆ, ನೀವು 7 ಲಕ್ಷ ರೂ. ಗಳಿಸಬಹುದು. ಹೇಗೆ ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ಈ ಒಂದು ನೋಟಿಗೆ ಇದೆ ಲಕ್ಷಾಂತರ ರೂಪಾಯಿ


ಸರಿಯಾಗಿ 26 ವರ್ಷಗಳ ಹಿಂದೆ, ಭಾರತ ಸರ್ಕಾರವು ಈ ಒಂದು ರೂಪಾಯಿ ನೋಟನ್ನು ನಿಲ್ಲಿಸಿತ್ತು (Earn Money From 1 Rupees Note), ಆದರೆ ಅದರ ಮುದ್ರಣವನ್ನು ಜನವರಿ 2015 ರಲ್ಲಿ ಪುನರಾರಂಭಿಸಲಾಯಿತು, ನಂತರ ಈ ನೋಟು ಮಾರುಕಟ್ಟೆಯಲ್ಲಿ ಹೊಸದಾಗಿ ಪರಿಚೆಯಿಸಲಾಯಿತು. ಆದರೆ ಇಂದು ನಾವು ಸ್ವಾತಂತ್ರ್ಯ ಪೂರ್ವದಲ್ಲಿಯೇ ಇದ್ದ ಒಂದು ರೂಪಾಯಿ ನೋಟಿನ ಬಗ್ಗೆ ಮಾತನಾಡುತ್ತಿದ್ದೇವೆ, ಈ ಒಂದು ನೋಟಿನ ಮೂಲಕ ನೀವು ಮಿಲಿಯನೇರ್ ಆಗಬಹುದು.


ಇದನ್ನೂ ಓದಿ : NPS : ಸರ್ಕಾರಿ ನೌಕರರೆ ಗಮನಿಸಿ : ನಿಮಗೆ ಉಳಿತಾಯವಾಗಲಿದೆ ₹4800 ! ಹೇಗೆ? ಇಲ್ಲಿದೆ ನೋಡಿ


ಈ ನೋಟ್ ಏಕೆ ವಿಶೇಷವಾಗಿದೆ?


7 ಲಕ್ಷ ರೂಪಾಯಿಗೆ ಮಾರಾಟವಾಗುವ ಈ ನೋಟಿನ ವಿಶೇಷವೆಂದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಆಗಿನ ರಾಜ್ಯಪಾಲ ಜೆಡಬ್ಲ್ಯೂ ಕೆಲ್ಲಿ(JW Kelly) ಅವರ ಸಹಿ ಇರುವ ನೋಟು ಇದಾಗಿದೆ. ಈ ನೋಟು 80 ವರ್ಷಗಳಷ್ಟು ಹಳೆಯದಾಗಿದೆ. ಇದನ್ನು 1935 ರಲ್ಲಿ ಬ್ರಿಟಿಷ್ ಇಂಡಿಯಾ ಹೊರತಂದಿತ್ತು. 


ಈ ನೋಟನ್ನು ಈ ರೀತಿ ಮಾರಾಟ ಮಾಡಿ


- ನೀವು ಈ ನೋಟುಗಳು ನಿಮ್ಮ ಬಳಿ ಇದ್ದರೆ ನೀವು ಅವುಗಳನ್ನ ಆನ್‌ಲೈನ್‌ ಮಾರಾಟ ವೇದಿಕೆಯಾದ  OLX ನಲ್ಲಿ ಮಾರಾಟ ಮಾಡಬಹುದು.
- ಈ ವೆಬ್‌ಸೈಟ್‌ನಲ್ಲಿ ಈ ಅಪರೂಪದ ನೋಟಿಗೆ ಖರೀದಿದಾರರು ಭಾರಿ ಮೊತ್ತ ಮೊತ್ತ ನೀಡಿ ಖರೀದಿಸಲಿದ್ದಾರೆ. 
- ನಾಣ್ಯಗಳನ್ನು ಮಾರಾಟ ಮಾಡಲು ನೀವು ಮೊದಲು Olx ನಲ್ಲಿ ಮಾರಾಟಗಾರರಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಿ.
- ಇದರ ನಂತರ, ನೋಟಿನ ಎರಡೂ ಬದಿಗಳ ಫೋಟೋವನ್ನು ತೆಗೆದು ಅಪ್ಲೋಡ್ ಮಾಡಿ.
- ಅದರ ನಂತರ ನಿಮ್ಮ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಿ.
- ವೆಬ್‌ಸೈಟ್‌ನಲ್ಲಿ ನೀವು ಒದಗಿಸಿದ ಮಾಹಿತಿಯನ್ನು ಪರಿಶೀಲಿಸಿ.
- ಖರೀದಿಸಲು ಬಯಸುವವರೂ ನಿಮ್ಮನ್ನು ಸಂಪರ್ಕಿಸುತ್ತಾರೆ.


ಇದನ್ನೂ ಓದಿ : Budget 2022 : ಆಸ್ತಿ ಮಾರಾಟ ಮತ್ತು ಖರೀದಿಯ TDS ನಿಯಮದಲ್ಲಿ ಬದಲಾವಣೆ!


ನೋಟುಗಳ ಬಂಡಲ್ ನಿಂದ ಸಿಗುತ್ತದೆ ಲಾಭ


ನೀವು ಇಂತಹ ನೋಟುಗಳ ಸಂಗ್ರಹವನ್ನು ಹೊಂದಿದ್ದರೆ ನೀವು ಭರ್ಜರಿ ಹಣ(Earn Money) ಗಳಿಸಬಹುದು. ನಿಮ್ಮ ಈ ಸಂಗ್ರಹವನ್ನು ನೀವು eBay ನಲ್ಲಿ ಮಾರಾಟ ಮಾಡಬಹುದು. 1949, 1957 ಮತ್ತು 1964 ರ 59 ನೋಟುಗಳ ಬಂಡಲ್‌ನಿಂದ, ನೀವು 34,999 ರೂ. ಗಳಿಸಬಹುದು. ನೀವು 1957 ರ ಒಂದು ರೂಪಾಯಿ ನೋಟು ಹೊಂದಿದ್ದಾರೆ, 15 ಸಾವಿರ ರೂಪಾಯಿಗಳವರೆಗೆ ಹಣ ಗಳಿಸಬಹುದು. ಈ ರೀತಿಯಾಗಿ, ಈ ಕೆಲವು ವಿಶೇಷ ನೋಟುಗಳನ್ನ ಹೊಂದಿದ್ದರೆ ಮನೆಯಲ್ಲಿ ಕುಳಿತು ಮಿಲಿಯನೇರ್ ಆಗಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.