ನವದೆಹಲಿ : Atal Pension Yojana: ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ನೀಡಲು ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನು (Atal Pension Yojana) ಆರಂಭಿಸಿತ್ತು. ಈ ಯೋಜನೆಯನ್ನು  ಮೇ 9 2015 ರಂದು ಆರಂಭಿಸಲಾಗಿತ್ತು. ಈ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಿದ್ದು, ಈ ಯೋಜನೆ ಎಷ್ಟು ಯಶಸ್ವಿಯಾಗಿದೆ ಎನ್ನುವುದನ್ನು ಸಾಬೀತುಪಡಿಸುತ್ತದೆ. 


COMMERCIAL BREAK
SCROLL TO CONTINUE READING

APYಯಲ್ಲಿ ನೋಂದಾಯಿಸಿಕೊಂಡಿರುವ 3.3 ಕೋಟಿಗೂ ಹೆಚ್ಚು ಜನ : 
PFRDAದ ಮಾಹಿತಿಯ ಪ್ರಕಾರ, 25 ಆಗಸ್ಟ್ 2021 ರವರೆಗೆ ಅಟಲ್ ಪಿಂಚಣಿ ಯೋಜನೆ (APY) ಚಂದಾದಾರರ ಸಂಖ್ಯೆ 3.30 ಕೋಟಿಗಳಷ್ಟು ಹೆಚ್ಚಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಪಿಂಚಣಿ (Pension) ಯೋಜನೆಯಡಿ 28 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ.


ಇದನ್ನೂ ಓದಿ : Google Pay ಬಳಕೆದಾರರು ಬ್ಯಾಂಕ್ ಖಾತೆಯಿಲ್ಲದೆ ಎಫ್‌ಡಿ ಸೌಲಭ್ಯ ಪಡೆಯಬಹುದು, ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ


ಈ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು? :
PFRDA ಮಾಹಿತಿಯ ಪ್ರಕಾರ, ಸುಮಾರು 78% ಚಂದಾದಾರರು 1,000 ರೂಪಾಯಿ ಪಿಂಚಣಿ ಯೋಜನೆಯನ್ನು ಆರಿಸಿಕೊಂಡಿದ್ದಾರೆ. ಸುಮಾರು 14% ಚಂದಾದಾರರು 5,000 ರೂಪಾಯಿ ಪಿಂಚಣಿ ಯೋಜನೆಯನ್ನು ಆರಿಸಿಕೊಂಡಿದ್ದಾರೆ. ಈ ಯೋಜನೆಯಡಿ, 60 ವರ್ಷಗಳ ನಂತರ, 1,000, 2,000, 3,000, 4,000 ಮತ್ತು 5,000 ರೂಪಾಯಿಗಳ ಪಿಂಚಣಿ ಲಭ್ಯವಿದೆ. ಬ್ಯಾಂಕ್ (Bank) ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ 18 ರಿಂದ 40 ವರ್ಷದ ಯಾವುದೇ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 


ಗರಿಷ್ಠ 5,000 ಪಿಂಚಣಿ ಪಡೆಯಬಹುದು :  
ಈ ಯೋಜನೆಯಡಿ ಖಾತೆಯನ್ನು ತೆರೆದರೆ, ಪ್ರತಿ ತಿಂಗಳು 210 ರೂ. ಹೂಡಿಕೆ ಮಾಡುವುದರೊಂದಿಗೆ, ಒಂದು ವರ್ಷದಲ್ಲಿ 2520 ಹೂಡಿಕೆ ಮಾಡಿದಂತಾಗುತ್ತದೆ. ಪ್ರತಿ ತಿಂಗಳು 210 ರೂ.ಗಳನ್ನು 60 ವರ್ಷ ವಯಸ್ಸಿನವರೆಗೆ ಹೂಡಿಕೆ (Investment) ಮಾಡಬೇಕು. ಹೀಗೆ ಮಾಡಿದರೆ, ಪ್ರತಿ ತಿಂಗಳು 5 ಸಾವಿರ ರೂಪಾಯಿಗಳು ನಿಮ್ಮ ಖಾತೆಗೆ ಬರುತ್ತದೆ. ಪ್ರತಿ ತಿಂಗಳು ಐದು ಸಾವಿರ ಅಂದರೆ, ವರ್ಷಕ್ಕೆ 60 ಸಾವಿರ ರೂಪಾಯಿಗಳು.


ಈ ಯೋಜನೆಯ ಗರಿಷ್ಠ ಲಾಭ ಪಡೆಯಲು, ಆದಷ್ಟು ಬೇಗ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆರಂಭಿಸಬೇಕು. 18 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಿದರೆ ಪ್ರತಿ ದಿನ ಕೇವಲ 7 ರೂಪಾಯಿಗಳನ್ನು ಜಮಾ ಮಾಡುವ ಮೂಲಕ ನೀವು ಪ್ರತಿ ತಿಂಗಳು 5,000 ರೂ. ಪಿಂಚಣಿ ಪಡೆಯಬಹುದು. ಅದೇ ಸಮಯದಲ್ಲಿ, ಪ್ರತಿ ತಿಂಗಳು 1000 ರೂಪಾಯಿಗಳ ಮಾಸಿಕ ಪಿಂಚಣಿಗೆ, ಕೇವಲ 42 ರೂಪಾಯಿಗಳನ್ನು ತಿಂಗಳಿಗೆ ಜಮಾ ಮಾಡಬೇಕಾಗುತ್ತದೆ. 2,000 ರೂ. ಪಿಂಚಣಿಗೆ 84 ರೂ., ರೂ. 3,000 ಕ್ಕೆ 126 ರೂ. ಮತ್ತು ಮಾಸಿಕ 4,000 ರೂ. ಪಿಂಚಣಿಗೆ 168 ರೂ. ಪ್ರತಿ ತಿಂಗಳು ಜಮಾ ಮಾಡಬೇಕಾಗುತ್ತದೆ.


ಇದನ್ನೂ ಓದಿ : LIC ಯ ಈ ಯೋಜನೆಯಲ್ಲಿ ದಿನಕ್ಕೆ 121 ರೂ. ಹೂಡಿಕೆ ಮಾಡಿ ಪಡೆಯಿರಿ 27 ಲಕ್ಷ ರೂ. : ಇಲ್ಲಿದೆ ಸಂಪೂರ್ಣ ಮಾಹಿತಿ 


ಹೂಡಿಕೆ ಮಾಡುವುದು ಹೇಗೆ ?
- ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು, https://enps.nsdl.com/eNPS/NationalPtensionSystem.html ವೆಬ್‌ಸೈಟ್‌ಗೆ ಭೇಟಿ ನೀಡಿ.
-ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಇಲ್ಲಿ ಸಲ್ಲಿಸಿ.
- ತಕ್ಷಣ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ನೀವು ಅದನ್ನು ನಮೂದಿಸಿದ ತಕ್ಷಣ ವೆರಿಫಿಕಾಶನ್  ಮಾಡಲಾಗುತ್ತದೆ.
- ಈಗ ಬ್ಯಾಂಕಿನ ಮಾಹಿತಿಯನ್ನು ನೀಡಿ, ಇದರಲ್ಲಿ ಖಾತೆ ಸಂಖ್ಯೆ ಮತ್ತು ವಿಳಾಸವನ್ನು ಟೈಪ್ ಮಾಡಿದರೆ, ನಿಮ್ಮ ಅಕೌಂಟ್  ಆಕ್ಟಿವ್ ಮಾಡಲಾಗುತ್ತದೆ. 
- ಇದರ ನಂತರ, ನೀವು ನಾಮಿನಿ ಮತ್ತು ಪ್ರೀಮಿಯಂ ಪಾವತಿಯ ಬಗ್ಗೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
- ಈಗ ಪರಿಶೀಲನೆಗಾಗಿ ಫಾರ್ಮ್‌ಗೆ ಸಹಿ ಮಾಡಿ. ಇದರೊಂದಿಗೆ, ಅಟಲ್ ಪಿಂಚಣಿ ಯೋಜನೆಗೆ ನಿಮ್ಮ ನೋಂದಣಿ ಪೂರ್ಣಗೊಳ್ಳುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.