ನವದೆಹಲಿ : ದಿನ ಸಮಯದಲ್ಲಿ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಲಿದೆ. ಎಲ್ಲಾ ರೀತಿಯ ಹಣಕಾಸು ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಹೊಂದಿರುವುದು ಅವಶ್ಯಕ. ಪ್ಯಾನ್ ಕಾರ್ಡ್ ಇಲ್ಲದಿದ್ದಲ್ಲಿ, ಬ್ಯಾಂಕ್ ಮತ್ತು ಇತರ ಹಣಕಾಸು ಕೆಲಸಗಳನ್ನು ನಡೆಯುವುದೆ ಇಲ್ಲ. 


COMMERCIAL BREAK
SCROLL TO CONTINUE READING

ಎಲ್ಲಿಯಾದರೂ ಪ್ಯಾನ್ ಕಾರ್ಡ್(Pan Card) ಕಳೆದುಹೋದರೆ, ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸುವುದು ಹೇಗೆ ಎಂದು ಇಂದು ನಾವು ನಿಮಗೆ ಹೇಳಲಿದ್ದೇವೆ. ಇದರ ಸಹಾಯದಿಂದ ನೀವು ಮನೆಯಲ್ಲಿ ಕುಳಿತು ಕೆಲವೇ ನಿಮಿಷಗಳಲ್ಲಿ ನಿಮ್ಮ ಪ್ಯಾನ್ ಕಾರ್ಡ್ (e-PAN) ಅನ್ನು ಡೌನ್‌ಲೋಡ್ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಇ-ಪ್ಯಾನ್ ಕೂಡ ಎಲ್ಲೆಡೆ ಮಾನ್ಯವಾಗಿದೆ.


ಇದನ್ನೂ ಓದಿ : Auto Debit Payments: ಡೆಬಿಟ್-ಕ್ರೆಡಿಟ್ ಕಾರ್ಡ್ ಪೇಮೆಂಟ್ ನಿಯಮ ಬದಲಿಸಿದ RBI; ಅಕ್ಟೋಬರ್ 1 ರಿಂದ ಅನ್ವಯ


ಡೌನ್ ಲೋಡ್ ಮಾಡುವುದು ಹೇಗೆ?


1. ಇ-ಪ್ಯಾನ್ ಡೌನ್‌ಲೋಡ್ ಮಾಡಲು, ಮೊದಲು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ https://www.onlineservices.nsdl.com/paam/requestAndDownloadEPAN.html ಗೆ ಲಾಗ್ ಇನ್ ಮಾಡಿ.
2. ಈಗ ಇಲ್ಲಿ ಡೌನ್ಲೋಡ್ ಇ-ಪ್ಯಾನ್ ಕಾರ್ಡ್ ಆಯ್ಕೆಯನ್ನು ಕ್ಲಿಕ್ ಮಾಡಿ.
3. ಇಲ್ಲಿ ನೀವು ಸ್ವೀಕೃತಿ ಸಂಖ್ಯೆ ಅಥವಾ ಪ್ಯಾನ್ ಸಂಖ್ಯೆಯನ್ನು ನಮೂದಿಸಬೇಕು.
4. ಈಗ ನಿಮ್ಮ PAN ಸಂಖ್ಯೆಯನ್ನು ನಮೂದಿಸಿ.
5. ಪ್ಯಾನ್ ಸಂಖ್ಯೆಯ ಹೊರತಾಗಿ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಸಹ ನಮೂದಿಸಬೇಕಾಗುತ್ತದೆ.
6. ಈಗ ನೀವು ನಿಮ್ಮ ತಿಂಗಳು ಮತ್ತು ಹುಟ್ಟಿದ ವರ್ಷವನ್ನು ನಮೂದಿಸಬೇಕು.
7. ಹಲವು ನಿಯಮಗಳು ಮತ್ತು ಷರತ್ತುಗಳನ್ನು ಇಲ್ಲಿ ನೀಡಲಾಗುವುದು, ಅವುಗಳನ್ನು ಎಚ್ಚರಿಕೆಯಿಂದ ಓದಿ ಮತ್ತು 'ಸ್ವೀಕರಿಸಿ' ಮೇಲೆ ಕ್ಲಿಕ್ ಮಾಡಿ.
8. ಇದರ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಈ OTP ನಮೂದಿಸಿ.
9. ಈಗ 'ದೃಡೀಕರಿಸಿ' ಮೇಲೆ ಕ್ಲಿಕ್ ಮಾಡಿ.
10. ನೀವು ದೃಡೀಕರಿಸಿದ ತಕ್ಷಣ, ಪಾವತಿ ಮಾಡುವ ಆಯ್ಕೆ ನಿಮ್ಮ ಮುಂದೆ ಬರುತ್ತದೆ.
11. ಇಲ್ಲಿ ನೀವು 8.26 ರೂಪಾಯಿಗಳನ್ನು ಪಾವತಿಸಬೇಕು.
12. ಇಲ್ಲಿಂದ ನೀವು ಯಾವುದೇ ಮಾಧ್ಯಮದ ಮೂಲಕ ಪಾವತಿ ಮಾಡಬಹುದು (paytm, UPI, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್).
13. ಇದರ ನಂತರ ನೀವು ನಿಮ್ಮ ಇ-ಪ್ಯಾನ್ ಅನ್ನು ಪಿಡಿಎಫ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.


ಇ-ಪ್ಯಾನ್ ತೆರೆಯುವುದು ಹೇಗೆ?


ನಿಮ್ಮ ಇ-ಪ್ಯಾನ್ ಅನ್ನು ಪಿಡಿಎಫ್‌ನಲ್ಲಿ ಡೌನ್‌ಲೋಡ್(Download) ಮಾಡಲು ನಿಮಗೆ ಸಾಧ್ಯವಾಗುತ್ತದೆ ಆದರೆ ಅದನ್ನು ತೆರೆಯಲು ಪಾಸ್‌ವರ್ಡ್ ಅಗತ್ಯವಿದೆ. ಈ ಪಾಸ್‌ವರ್ಡ್ ನಿಮ್ಮ ಜನ್ಮ ದಿನಾಂಕ. ನಿಮ್ಮ ಪೂರ್ಣ ಜನ್ಮ ದಿನಾಂಕವನ್ನು ಪಾಸ್‌ವರ್ಡ್‌ನಲ್ಲಿ ನಮೂದಿಸಿ. ಉದಾಹರಣೆಗೆ, ಯಾರೊಬ್ಬರ ಹುಟ್ಟಿದ ದಿನಾಂಕ 12 ಸೆಪ್ಟೆಂಬರ್ 1980 ಆಗಿದ್ದರೆ, ಅವರ ಪಾಸ್ ವರ್ಡ್ 12091980 ಅನ್ನು ನಮೂದಿಸಬೇಕು.


ಇದನ್ನೂ ಓದಿ : Amazon Offers: ಅಮೆಜಾನ್‌ನಲ್ಲಿ ಬಂಪರ್ ಕೊಡುಗೆ, ಕೇವಲ 99 ರೂ.ಗೆ ಬಲವಾದ ಬ್ಯಾಟರಿಯೊಂದಿಗೆ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶ


ನಿಮ್ಮ ಪ್ಯಾನ್ ಕಳೆದುಕೊಂಡರೂ ಇದನ್ನು ಮಾಡಿ


ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋದರೆ, ಮೊದಲು ಎಫ್‌ಐಆರ್(FIR) ದಾಖಲಿಸಿ. ನಿಮ್ಮ ಪ್ಯಾನ್ ಕಾರ್ಡ್ ಬೇರೆ ಅವರ ಕೈಗೆ ಹೋದರೆ ಅದನ್ನ ಕಾನೂನು ಬಾಹಿರ ಕೆಲಸಗಳಿಗೆ ಬಳಸಿದೆರೆ ನೀವು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಎಫ್ಐಆರ್ ಮಾಡಿ. ಇದರ ಹೊರತಾಗಿ, ನಿಮ್ಮ ಪ್ಯಾನ್‌ನೊಂದಿಗೆ ಯಾವುದೇ ಬೇನಾಮಿ ವಹಿವಾಟು ನಡೆದಿದೆಯೇ ಎಂಬುದನ್ನು ನೀವು ನಮೂನೆ 26AS ನಿಂದ ಕಂಡುಹಿಡಿಯಬಹುದು. ಆದಾಗ್ಯೂ, ಅದನ್ನು ತೆರಿಗೆ ಪಾವತಿಸುವವರು ಮಾತ್ರ ಪರಿಶೀಲಿಸುತ್ತಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.