ಡೆಬಿಟ್-ಕ್ರೆಡಿಟ್ಗೆ ಸಂಬಂಧಿಸಿದ ನಿಯಮ ಬದಲಾಯಿಸಿದ ಆರ್‌ಬಿಐ, ನಾಳೆಯಿಂದ ಎಲ್ಲಾ ಗ್ರಾಹಕರಿಗೆ ಅನ್ವಯ
ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಹೆಚ್ಚು ಸುರಕ್ಷಿತಗೊಳಿಸುವ ಉದ್ದೇಶದಿಂದ ಹೆಚ್ಚುವರಿ ಫ್ಯಾಕ್ಟರ್ Additional Factor Authentication ಜಾರಿಗೆ ತರಲು RBI ಸೂಚನೆ ನೀಡಿದೆ.
ನವದೆಹಲಿ : Auto Debit Payments: ವಿದ್ಯುತ್, ಮೊಬೈಲ್ ಬಿಲ್ ಅಥವಾ ಇತರ ಯುಟಿಲಿಟಿ ಬಿಲ್ ಅನ್ನು ಆಟೋ ಡೆಬಿಟ್ ರೂಪದಲ್ಲಿ ಪಾವತಿಸುವುದಾದರೆ ಈ ಸುದ್ದಿ ನಿಮಗೆ ಪ್ರಮುಖ ಸುದ್ದಿಯಾಗಿರಲಿದೆ. Additional Factor Authenticationಗಾಗಿ ರಿಸರ್ವ್ ಬ್ಯಾಂಕ್ ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಈ ಆದೇಶದ ಪ್ರಕಾರ, ಈಗ ಆಟೋ ಡೆಬಿಟ್ ಪಾವತಿ ವ್ಯವಸ್ಥೆಯು ಅಕ್ಟೋಬರ್ 1 ರಿಂದ ಬದಲಾಗಲಿದೆ.
ಅಕ್ಟೋಬರ್ 1 ರಿಂದ ಆಟೋ ಡೆಬಿಟ್ ಪಾವತಿಗಳು ವಿಫಲವಾಗಬಹುದು :
ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು (Digital payment) ಹೆಚ್ಚು ಸುರಕ್ಷಿತಗೊಳಿಸುವ ಉದ್ದೇಶದಿಂದ ಹೆಚ್ಚುವರಿ ಫ್ಯಾಕ್ಟರ್ Additional Factor Authentication ಜಾರಿಗೆ ತರಲು RBI ಸೂಚನೆ ನೀಡಿದೆ. ರಿಕರಿಂಗ್ ಆನ್‌ಲೈನ್ ಪೇಮೆಂಟ್ ಗಳಲ್ಲಿ ಗ್ರಾಹಕರ ಹಿತಾಸಕ್ತಿ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ವಂಚನೆಗಳಿಂದ ರಕ್ಷಿಸುವ ಉದ್ದೇಶಕ್ಕಾಗಿ ಎಎಫ್‌ಎ ಬಳಸಿ ಫ್ರೇಮ್ ವರ್ಕ್ ರಚಿಸಲು ನಿರ್ದೇಶಿಸಲಾಗಿದೆ. ಆದರೆ IBA ಯ ಮನವಿಯನ್ನು ಗಮನದಲ್ಲಿಟ್ಟುಕೊಂಡು, ಅದರ ಅನುಷ್ಠಾನದ ಗಡುವು ಮಾರ್ಚ್ 31, 2021 ರಿಂದ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿತ್ತು.
ಇದನ್ನೂ ಓದಿ : Rule changes from October 1 : ಆಟೋ ಡೆಬಿಟ್ ನಿಂದ LPG ಬೆಲೆಗಳವರೆಗೆ ನಾಳೆಯಿಂದ ಬದಲಾಗಲಿವೆ ಈ ನಿಯಮಗಳು
ಎರಡನೇ ಬಾರಿಗೆ ಗಡುವು ವಿಸ್ತರಣೆ :
ಈ ಮೊದಲು ರಿಸರ್ವ್ ಬ್ಯಾಂಕ್ (RBI) 2020 ರ ಡಿಸೆಂಬರ್ 31 ರಲ್ಲಿ ಬ್ಯಾಂಕ್‌ಗಳಿಗೆ ಮಾರ್ಚ್ 31, 2021 ರೊಳಗೆ ಫ್ರೇಮ್‌ವರ್ಕ್ ಅನ್ನು ಕಾರ್ಯಗತಗೊಳಿಸಲು ಎಲ್ಲಾ ಸಿದ್ದತೆ ಪೂರ್ಣಗೊಳಿಸುವಂತೆ ಸೂಚಿಸಿತ್ತು. ಬ್ಯಾಂಕುಗಳ ಸಿದ್ಧತೆಯಲ್ಲಿನ ವಿಳಂಬದಿಂದಾಗಿ ಗ್ರಾಹಕರು ಯಾವುದೇ ಸಮಸ್ಯೆ ಎದುರಿಸಬಾರದೆಂದು ಈ ಗಡುವನ್ನು ಸೆಪ್ಟೆಂಬರ್ 30 2021 ರವರೆಗೆ ಮತ್ತೆ ವಿಸ್ತರಿಸಲಾಗಿತ್ತು.
ಆರ್‌ಬಿಐನ ಹೊಸ ಮಾರ್ಗಸೂಚಿಗಳು ಇಲ್ಲಿವೆ :
ಆರ್‌ಬಿಐನ ಹೊಸ ನಿಯಮಗಳ ಪ್ರಕಾರ, ಬ್ಯಾಂಕ್ (Bank) ಪಾವತಿ ದಿನಾಂಕಕ್ಕಿಂತ 5 ದಿನಗಳ ಮೊದಲು ನೋಟಿಫಿಕೇಶನ್ ಕಳುಹಿಸಬೇಕಾಗುತ್ತದೆ. ಗ್ರಾಹಕರು ಅನುಮೋದನೆ ನೀಡಿದರೆ ಮಾತ್ರ ಪಾವತಿಯನ್ನು ಅನುಮೋದಿಸಲಾಗುತ್ತದೆ. ರಿಕರಿಂಗ್ ಪೇಮೆಂಟ್ 5000 ರೂ.ಗಿಂತ ಹೆಚ್ಚಿದ್ದರೆ ಬ್ಯಾಂಕುಗಳು ಗ್ರಾಹಕರಿಗೆ ಒನ್ ಟೈಮ್ ಪಾಸ್‌ವರ್ಡ್ (OTP) ಕಳುಹಿಸಬೇಕು. ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಈ ಕ್ರಮ ಕೈಗೊಂಡಿದೆ.
ಇದನ್ನೂ ಓದಿ : Flipkart Curtain Raiser Deals: ಐಫೋನ್ ಅನ್ನು 26,000 ರೂ.ಗೆ ಖರೀದಿಸುವ ಅವಕಾಶ, ಈ ಫೋನ್‌ಗಳ ಮೇಲೂ ಸಿಗಲಿದೆ ರಿಯಾಯಿತಿ
ಈ ಹಿಂದೆ, ರಿಸರ್ವ್ ಬ್ಯಾಂಕ್ (Reserve bank of India) ಎಲ್ಲಾ ಬ್ಯಾಂಕ್‌ಗಳು, ಪಾವತಿ ಗೇಟ್‌ವೇಗಳು ಮತ್ತು ಇತರ ಸೇವಾ ಪೂರೈಕೆದಾರರಿಗೆ ಕಾರ್ಡ್ ವಿವರಗಳನ್ನು ಶಾಶ್ವತವಾಗಿ ಸಂಗ್ರಹಿಸದಂತೆ ಸೂಚನೆ ನೀಡಿತ್ತು. ಜಸ್ಪೇ ಮತ್ತು ನಿಯೋ ಬ್ಯಾಂಕಿಂಗ್ ಸ್ಟಾರ್ಟ್ಅಪ್ Chqbook ನಲ್ಲಿ ಡೇಟಾ ಸೋರಿಕೆಯಾದ ನಂತರ RBI ಈ ಕ್ರಮ ಕೈಗೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.