Fuel Price Update:  ದೇಶಾದ್ಯಂತ ಕಳೆದ ದೀರ್ಘ ಕಾಲದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬಹುತೇಕ ಸ್ಥಿರವಾಗಿದೆ. ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ಬಳಕೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮೇ ತಿಂಗಳಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ಗಣನೀಯ ಏರಿಕೆ ದಾಖಲಾಗಿದೆ. ಅತಿ ಹೆಚ್ಚು ಬಳಕೆಯಾಗುವ ಇಂಧನ ಡೀಸೆಲ್‌ನ ಬೇಡಿಕೆಯು ಶೇ. 9.3 ರಷ್ಟು ಅಂದರೆ 74.6 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಮುಖ್ಯವಾಗಿ ಕೃಷಿ ವಲಯದಿಂದ ಹೆಚ್ಚುತ್ತಿರುವ ಬೇಡಿಕೆ ಮತ್ತು ವಾಹನಗಳಲ್ಲಿ ಹವಾನಿಯಂತ್ರಣಗಳ ಬಳಕೆ ಹೆಚ್ಚಾದ ಕಾರಣ ಇಂಧನ ಬೇಡಿಕೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಪೆಟ್ರೋಲ್-ಡೀಸೆಲ್
ಈ ಕಾರಣದಿಂದಾಗಿ, ಕಳೆದ ತಿಂಗಳು ಅಂದರೆ ಏಪ್ರಿಲ್‌ ತಿಂಗಳಿನಲ್ಲಿ ಡೀಸೆಲ್‌ನ ಬೇಡಿಕೆಯು ಶೇ. 6.7 ರಷ್ಟು ಹೆಚ್ಚಾಗಿದೆ ಮತ್ತು ಅದು 71.6 ಲಕ್ಷ ಟನ್‌ಗಳಿಗೆ ತಲುಪಿದೆ. ಹೀಗಾಗಿ, ಮಾಸಿಕ ಆಧಾರದ ಮೇಲೆ, ಮೇ ತಿಂಗಳಲ್ಲಿ ಮಾರಾಟವು ಶೇ.4.2 ರಷ್ಟು ಹೆಚ್ಚಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಈ ವರ್ಷದ ಮೇ ತಿಂಗಳಲ್ಲಿ ಪೆಟ್ರೋಲ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 10.4 ರಷ್ಟು ಅಂದರೆ 30.8 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಮತ್ತೊಂದೆಡೆ, ಮಾಸಿಕ ಆಧಾರದ ಮೇಲೆ ಮಾರಾಟವು ಶೇ. 16.5 ರಷ್ಟು ಹೆಚ್ಚಾಗಿದೆ. ಕೈಗಾರಿಕಾ ಮತ್ತು ಕೃಷಿ ಚಟುವಟಿಕೆಗಳು ಹೆಚ್ಚಾಗಿ ನಡೆಯುವ ಮಾರ್ಚ್ ತಿಂಗಳ ದ್ವಿತೀಯಾರ್ಧದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ಹೆಚ್ಚುತ್ತಿದೆ.


ಇದನ್ನೂ ಓದಿ-SEBI Auction: ಹೂಡಿಕೆದಾರರ ಹಿತರಕ್ಷಣೆಗೆ ಸೆಬಿಯಿಂದ ಮಹತ್ವದ ಹೆಜ್ಜೆ

ಪೆಟ್ರೋಲ್ ಮಾರಾಟ
ಮಾರ್ಚ್ ಮೊದಲ ಹದಿನೈದು ದಿನಗಳಲ್ಲಿ, ಪೆಟ್ರೋಲ್ ಮಾರಾಟವು ಶೇ. 1.4 ರಷ್ಟು ಮತ್ತು ಡೀಸೆಲ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 10.2 ರಷ್ಟು ಕಡಿಮೆಯಾಗಿದೆ. ಕೃಷಿ ಚಟುವಟಿಕೆಗಳ ಹೊರತಾಗಿ ಹೆಚ್ಚುತ್ತಿರುವ ವಾಹನಗಳಲ್ಲಿನ ಹವಾನಿಯಂತ್ರಣಗಳ ಬಳಕೆ ಈ ಹೆಚ್ಚಳಕ್ಕೆ ಕಾರಣವಾಗಿದೆ. ಅಂಕಿಅಂಶಗಳ ಪ್ರಕಾರ, ವಾಯುಯಾನ ಇಂಧನದ ಬೇಡಿಕೆಯು ವರ್ಷದಿಂದ ವರ್ಷಕ್ಕೆ ಶೇ 8.7 ರಷ್ಟು ಏರಿಕೆಯಾಗಿದ್ದು, ಮೇ ತಿಂಗಳಲ್ಲಿ ಅದು 6,09,800 ಟನ್‌ಗಳಿಗೆ ಏರಿಕೆಯಾಗಿದೆ.


ಇದನ್ನೂ ಓದಿ-Stock Market Update: ಸತತ ಎರಡನೇ ದಿನ ಕುಸಿದ ಷೇರು ಮಾರುಕಟ್ಟೆ, 18500 ಕ್ಕಿಂತ ಕೆಳಕ್ಕೆ ಜಾರಿದ ನಿಫ್ಟಿ ಷೇರು ಸೂಚ್ಯಂಕ


ಎಲ್ಪಿಜಿ ಅನಿಲದ ಸ್ಥಿತಿ ಹೇಗಿದೆ
ಮಾಸಿಕ ಆಧಾರದ ಮೇಲೆ, ಮಾರಾಟವು ಶೇ. 0.7 ರಷ್ಟು ಕುಸಿದು 6,13,900 ಅದು ಟನ್‌ಗಳಿಗೆ ತಲುಪಿದೆ. ಅಡುಗೆ ಅನಿಲ ಎಲ್‌ಪಿಜಿ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 10 ಪ್ರತಿಶತದಷ್ಟು ಏರಿಕೆಯಾಗಿದ್ದು, ಪರಿಶೀಲನೆಯ ತಿಂಗಳಿನಲ್ಲಿ 24 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಏಪ್ರಿಲ್‌ನಲ್ಲಿ ಎಲ್‌ಪಿಜಿ ಬಳಕೆ 21.9 ಲಕ್ಷ ಟನ್‌ಗಳಷ್ಟಿತ್ತು. ಈ ಹಿನ್ನೆಲೆಯಲ್ಲಿ ಮಾಸಿಕವಾಗಿ ಶೇ.11.3ರಷ್ಟು ಅದರ ಮಾರಾಟ ಹೆಚ್ಚಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.