Indian Economy Growth Rate: ಬಲವಾದ ದೇಶೀಯ ಬೇಡಿಕೆಯಿಂದಾಗಿ 2024 ಕ್ಯಾಲೆಂಡರ್ ವರ್ಷದಲ್ಲಿ ಭಾರತೀಯ ಆರ್ಥಿಕತೆಯು ಶೇಕಡಾ 6.7 ರ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಇದನ್ನು ವಿಶ್ವಸಂಸ್ಥೆಯ ವರದಿಯಲ್ಲಿ ಅಂದಾಜಿಸಲಾಗಿದೆ. ಆದರೆ, ಇದರೊಂದಿಗೆ ಹೆಚ್ಚಿನ ಬಡ್ಡಿದರ ಮತ್ತು ದುರ್ಬಲ ಬಾಹ್ಯ ಬೇಡಿಕೆಯಿಂದಾಗಿ ಈ ವರ್ಷ ದೇಶದ ಹೂಡಿಕೆ ಮತ್ತು ರಫ್ತುಗಳ ಮೇಲೆ ಪರಿಣಾಮ ಉಂಟಾಗಲಿದೆ ಎಂದೂ ಕೂಡ ಹೇಳಲಾಗಿದೆ. '2023ರ ಮಧ್ಯದಲ್ಲಿ ಜಾಗತಿಕ ಆರ್ಥಿಕ ಸ್ಥಿತಿ ಮತ್ತು ಭವಿಷ್ಯ' ಎಂಬ ಶೀರ್ಷಿಕೆಯಡಿ ಯುಎನ್ ವರದಿಯನ್ನು ಮಂಗಳವಾರ ಇಲ್ಲಿ ಬಿಡುಗಡೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಏಷ್ಯಾ ಪ್ರಾಂತ್ಯದ ಅತಿದೊಡ್ಡ ಆರ್ಥಿಕತೆ
ವರದಿಯ ಪ್ರಕಾರ, ಭಾರತವು ದಕ್ಷಿಣ ಏಷ್ಯಾದ ಅತಿದೊಡ್ಡ ಆರ್ಥಿಕತೆಯಾಗಿದೆ. 2023 ರಲ್ಲಿ ಶೇ. 5.8 ರಷ್ಟು ಮತ್ತು 2024 ರಲ್ಲಿ ಶೇ. 6.7 ಶೇಕಡಾ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಲಿದೆ (ಕ್ಯಾಲೆಂಡರ್ ವರ್ಷದ ಆಧಾರದ ಮೇಲೆ). ಭಾರತೀಯ ಆರ್ಥಿಕತೆಯು ಬಲವಾದ ದೇಶೀಯ ಬೇಡಿಕೆಯಿಂದ ಬೆಂಬಲಿತವಾಗಿದೆ. ಆದಾಗ್ಯೂ, ಹೆಚ್ಚಿನ ಬಡ್ಡಿದರಗಳು ಮತ್ತು ದುರ್ಬಲ ಬಾಹ್ಯ ಬೇಡಿಕೆಯಿಂದಾಗಿ ದೇಶದ ಹೂಡಿಕೆ ಮತ್ತು ರಫ್ತುಗಳು 2023 ರಲ್ಲಿ ಒತ್ತಡದಲ್ಲಿಯೇ ಇರಲಿವೆ ಎಂದು ವರದಿ ಹೇಳಿದೆ. 


ಭಾರತದ ಹಣದುಬ್ಬರ ದರ ಕಡಿಮೆಯಾಗಲಿದೆ
2023 ರಲ್ಲಿ ಭಾರತದಲ್ಲಿ ಹಣದುಬ್ಬರ ದರವು ಶೇಕಡಾ 5.5 ಕ್ಕೆಇಳಿಕೆಯಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಡಿಮೆ ಜಾಗತಿಕ ಸರಕುಗಳ ಬೆಲೆಗಳು ಮತ್ತು ಕರೆನ್ಸಿ ಸವಕಳಿಯ ನಿಧಾನಗತಿಯು 'ಆಮದು' ಹಣದುಬ್ಬರವನ್ನು ತಗ್ಗಿಸಲಿದೆ. ಈ ಮೌಲ್ಯಮಾಪನದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಬದಲಾಯಿಸಲಾಗಿಲ್ಲ. ಇದು ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯ-2023 ವರದಿಯಲ್ಲಿ ಮಾಡಲಾದ ಪ್ರಕ್ಷೇಪಗಳಿಗೆ ಅನುಗುಣವಾಗಿದೆ.


ಜಿಡಿಪಿ ಬೆಳವಣಿಗೆ ಶೇ 5.8ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ
ಜನವರಿಯಲ್ಲಿ ಬಿಡುಗಡೆಯಾದ ಪ್ರಮುಖ ವರದಿಯಲ್ಲಿ, ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರವು 2023 ರಲ್ಲಿ ಶೇಕಡಾ 5.8 ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು ಹೇಳಲಾಗಿತ್ತು. ಜಾಗತಿಕ ಆರ್ಥಿಕತೆಯಲ್ಲಿನ ಹೆಚ್ಚಿನ ಬಡ್ಡಿ ದರಗಳು ಮತ್ತು ನಿಧಾನಗತಿಯು ದೇಶದ ಹೂಡಿಕೆ ಮತ್ತು ರಫ್ತಿನ ಮೇಲೆ ಪರಿಣಾಮ ಬೀರುವುದು ಇದಕ್ಕೆ ಕಾರಣ. ಭಾರತದ ಆರ್ಥಿಕ ಬೆಳವಣಿಗೆಯು 'ಸದೃಢ'ವಾಗಿ ಉಳಿಯಲಿದೆ ಎಂದು ವರದಿ ಹೇಳಿದೆ. ಆದಾಗ್ಯೂ, ಇತರ ದಕ್ಷಿಣ ಏಷ್ಯಾದ ದೇಶಗಳ ನಿರೀಕ್ಷೆಗಳು 'ಹೆಚ್ಚು ಸವಾಲಿನಿಂದ ಕೂಡಿವೆ' ಎನ್ನಲಾಗಿದೆ.


ಆರ್ಥಿಕತೆಯು ಯಾವ ಪ್ರಮಾಣದಲ್ಲಿ ಬೆಳೆಯಲಿದೆ
2024 ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.7 ರ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಪ್ರಮುಖ ವರದಿ ಹೇಳುತ್ತದೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ ಜಾಗತಿಕ ಆರ್ಥಿಕ ಮೇಲ್ವಿಚಾರಣಾ ಘಟಕದ ಆರ್ಥಿಕ ವಿಶ್ಲೇಷಣೆ ಮತ್ತು ನೀತಿ ವಿಭಾಗದ ಮುಖ್ಯಸ್ಥ ಹಮೀದ್ ರಶೀದ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ಆರ್ಥಿಕತೆಯಲ್ಲಿ ಭಾರತವು ಉಜ್ವಲ ಭವಿಷ್ಯ ಹೊಂದಿದೆ ಎಂದು ಹೇಳಿದ್ದಾರೆ. 


ಅನೇಕ ಸಕಾರಾತ್ಮಕ ಅಂಶಗಳು ಮುನ್ನೆಲೆಗೆ ಬರುತ್ತವೆ
ಭಾರತದ ಆರ್ಥಿಕತೆಯ ಕುರಿತು ಪಿಟಿಐ-ಭಾಷಾ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಶೀದ್, ಭಾರತ ಇಂದಿಗೂ ಕೂಡ ಪ್ರಬಲ ಸ್ಥಾನ ಹೊಂದಿದೆ ಎಂದು ಹೇಳಿದ್ದಾರೆ. ಭಾರತಕ್ಕಾಗಿ ನಮ್ಮ ಪ್ರಕ್ಷೇಪಣಗಳು ಜನವರಿಯಿಂದ ಬದಲಾಗಿಲ್ಲ ಮತ್ತು ನಾವು ಅನೇಕ ಧನಾತ್ಮಕತೆಯನ್ನು ನೋಡುತ್ತೇವೆ. ಬಹಳಷ್ಟು ಕಡಿಮೆಯಾಗಿರುವ ಇವುಗಳಲ್ಲಿ ಹಣದುಬ್ಬರವೂ ಶಾಮಿಲಾಗಿದೆ. ಭಾರತದ ಹಣದುಬ್ಬರವು ಶೇಕಡಾ 5.5 ರಷ್ಟಿದ್ದರೆ ದಕ್ಷಿಣ ಏಷ್ಯಾದ ಪ್ರಾದೇಶಿಕ ಸರಾಸರಿಯು ಶೇಕಡಾ 11 ರಷ್ಟಿದೆ. ಇದರರ್ಥ ಹಣಕಾಸಿನ ವಿಸ್ತರಣೆ ಮತ್ತು ವಿತ್ತೀಯ ಮಟ್ಟಕ್ಕೆ ಸಾಕಷ್ಟು ಅವಕಾಶವಿದೆ, ಇದು ದೇಶೀಯ ಬೇಡಿಕೆಯನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಇದರ ಜೊತೆಗೆ ಬಾಹ್ಯ ಅಪಾಯವು ಕೂಡ ಇರಲಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-IT Hardware ಗಾಗಿ 17000 ಕೋಟಿ ರೂ.ಗಳ ಪಿಎಲ್ಐ ಯೋಜನೆಗೆ ಅನುಮತಿ


ಸವಾಲುಗಳನ್ನು ಎದುರಿಸಬೇಕಾಗಬಹುದು
ಇನ್ನೊಂದೆಡೆ ಸವಾಲುಗಳ ಕುರಿತು ಮಾತನಾಡಿರುವ ರಶೀದ್ "ಬಾಹ್ಯ ಹಣಕಾಸು ಪರಿಸ್ಥಿತಿಯು ಹದಗೆಟ್ಟರೆ, ಭಾರತವು ಕೆಲವು ಸವಾಲುಗಳನ್ನು ಎದುರಿಸಬಹುದು." ಮತ್ತು ಇದು 2024 ರಲ್ಲಿ ಶೇ. 2.5( ಅಂದರೆ ಶೇ. 0.2 ಪಾಯಿಂಟ್ ಕಡಿಮೆ) ದರದಲ್ಲಿ ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ.


ಇದನ್ನೂ ಓದಿ-PMFBY Claim: ಈ ಕಾರಣಕ್ಕಾಗಿ ಬ್ಲಾಕ್ ಲಿಸ್ಟ್ ಆಗಲಿದೆ ಐಸಿಐಸಿಐ ಲಂಬಾರ್ಡ್, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಆಡಳಿತ


ಅಮೆರಿಕ ಎಷ್ಟು ದಿನ ಬದುಕಬಲ್ಲದು?
ಅಮೆರಿಕಕ್ಕೆ ಸಂಬಂಧಿಸಿದಂತೆ, ಕುಟುಂಬಗಳ ಉತ್ತಮ ವೆಚ್ಚದಿಂದಾಗಿ, ಅದರ ಆರ್ಥಿಕತೆಯ ಬೆಳವಣಿಗೆಯ ದರವನ್ನು 2023 ರಲ್ಲಿ ಶೇ. 1.1 ಕ್ಕೆ ಹೆಚ್ಚಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದೇ ವೇಳೆ, ಯುರೋಪಿಯನ್ ಆರ್ಥಿಕತೆಯು ಶೇ. 0.9 ಶೇಕಡಾ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಈ ವರ್ಷದ ಚೀನಾದ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 4.8 ರಿಂದ 5.3 ಕ್ಕೆ ಹೆಚ್ಚಿಸಲಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ