ಡಿಸೆಂಬರ್ನಲ್ಲಿ 13 ದಿನ ಬ್ಯಾಂಕ್ ರಜೆ.! ಇಲ್ಲಿದೆ ಆರ್ ಬಿಐ ಬಿಡುಗಡೆ ಮಾಡಿರುವ ಪಟ್ಟಿ
Bank Holidays 2022 : ರಿಸರ್ವ್ ಬ್ಯಾಂಕ್‌ನಿಂದ ಬಿಡುಗಡೆ ಮಾಡಲಾಗಿರುವ ಮಾಹಿತಿಯ ಪ್ರಕಾರ ಡಿಸೆಂಬರ್ ತಿಂಗಳಲ್ಲಿ 31 ದಿನಗಳ ಪೈಕಿ 13 ದಿನ ಬ್ಯಾಂಕ್ ರಜೆ ಇರಲಿದೆ.
Bank Holidays 2022 : ಡಿಸೆಂಬರ್ ತಿಂಗಳಿನಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೂ ಬ್ಯಾಂಕ್ ಗೆ ತೆರಳುವ ಮುನ್ನ ರಜಾ ದಿನಗಳ ಪಟ್ಟಿಯನ್ನೊಮ್ಮೆ ಪರಿಶೀಲಿಸಿಕೊಳ್ಳಿ. ಇಲ್ಲವಾದರೆ ಹೋದ ಕೆಲಸ ಪೂರ್ಣವಾಗದೆ ಬರೀ ಗೈಯ್ಯಲ್ಲಿ ವಾಪಾಸಾಗಬೇಕಾದೀತು. ರಿಸರ್ವ್ ಬ್ಯಾಂಕ್‌ನಿಂದ ಬಿಡುಗಡೆ ಮಾಡಲಾಗಿರುವ ಮಾಹಿತಿಯ ಪ್ರಕಾರ ಡಿಸೆಂಬರ್ ತಿಂಗಳಲ್ಲಿ 31 ದಿನಗಳ ಪೈಕಿ 13 ದಿನ ಬ್ಯಾಂಕ್ ರಜೆ ಇರಲಿದೆ.
ರಜಾ ಪಟ್ಟಿ ಬಿಡುಗಡೆ ಮಾಡಿದ RBI :
RBI ಹೊರಡಿಸಿದ ಪಟ್ಟಿಯ ಪ್ರಕಾರ, ಈ 13 ರಜಾದಿನಗಳು ದೇಶಾದ್ಯಂತ ಬ್ಯಾಂಕ್ ರಜೆ ಇರಲಿದೆ. ಈ ರಜಾ ದಿನಗಳು ರಾಜ್ಯಕ್ಕೆ ಅನುಗುಣವಾಗಿ, ಪ್ರದೇಶಗಳಿಗೆ ಅನುಗುಣವಾಗಿ ಬದಲಾಗಿರುತ್ತದೆ. ಹಾಗಾಗಿ ನಿಮ್ಮ ನಗರದಲ್ಲಿ ಯಾವ ದಿನ ರಜೆ ಇರಲಿದೆ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಗ್ರಾಹಕರು ಮತ್ತು ಉದ್ಯೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡ್ಕೊಳ್ಳುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ವರ್ಷದ ಮೊದಲ ತಿಂಗಳು ಅಂದರೆ ಜನವರಿ ತಿಂಗಳಿನಲ್ಲಿಯೇ ಇಡೀ ವರ್ಷ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.
ಇದನ್ನೂ ಓದಿ : Employee's Pension Limit: ಇನ್ಮುಂದೆ 25000 ರೂ. ಪೆನ್ಷನ್ ಸಿಗಲಿದೆ! ಶೇ.333 ವೃದ್ಧಿ, ಹೇಗೆ ಇಲ್ಲಿ ತಿಳಿದುಕೊಳ್ಳಿ
ಸಾಪ್ತಾಹಿಕ ರಜಾದಿನಗಳನ್ನು ಸಹ ಸೇರಿಸಲಾಗಿದೆ :
ಕ್ರಿಸ್ಮಸ್, ಹೊಸ ವರ್ಷವನ್ನು ಹೊರತುಪಡಿಸಿಯೂ ಡಿಸೆಂಬರ್ ತಿಂಗಳಿನಲ್ಲಿ, ಅನೇಕ ದಿನಗಳವರೆಗೆ ಬ್ಯಾಂಕ ಕಾರ್ಯ ನಿರ್ವಹಿಸುವುದಿಲ್ಲ. ಶನಿವಾರ ಮತ್ತು ಭಾನುವಾರದ ರಜಾದಿನಗಳನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಡಿಸೆಂಬರ್ 4, 10, 11, 18, 25 ಮತ್ತು 31 ರಂದು ದೇಶಾದ್ಯಂತ ಬ್ಯಾಂಕ್‌ಗಳಲ್ಲಿ ಬ್ಯಾಂಕ್ ರಜೆ ಇರಲಿದೆ.
ಡಿಸೆಂಬರ್ 2022 ಬ್ಯಾಂಕ್ ರಜಾ ದಿನಗಳ ಪಟ್ಟಿ :
1. 3ನೇ ಡಿಸೆಂಬರ್ 2022 - ಶನಿವಾರ - ಸೇಂಟ್ ಕ್ಸೇವಿಯರ್ ಫೀಸ್ಟ್ - ಗೋವಾದಲ್ಲಿ ಬ್ಯಾಂಕ್ ರಜೆ
2. ಡಿಸೆಂಬರ್ 4, 2022 - ಭಾನುವಾರ - ಬ್ಯಾಂಕ್ ರಜೆ
3. 10ನೇ ಡಿಸೆಂಬರ್ 2022 - ಶನಿವಾರ - ಎರಡನೇ ಶನಿವಾರ
4. 11 ಡಿಸೆಂಬರ್ 2022 - ಭಾನುವಾರ - ರಜೆ
5. 12 ಡಿಸೆಂಬರ್ 2022 - ಸೋಮವಾರ - ಪಾ-ತಗನ್ ನೆಂಗ್ಮಿಂಜ ಸಂಗಮ - ಮೇಘಾಲಯದಲ್ಲಿ ಬ್ಯಾಂಕ್ ರಜೆ
6. 18 ಡಿಸೆಂಬರ್ 2022 - ಭಾನುವಾರ - ರಜೆ
7. 19 ಡಿಸೆಂಬರ್ 2022 - ಸೋಮವಾರ - ಗೋವಾ ವಿಮೋಚನಾ ದಿನ - ಗೋವಾದಲ್ಲಿ ಬ್ಯಾಂಕ್ ರಜೆ
8. 24 ಡಿಸೆಂಬರ್ 2022 - ಶನಿವಾರ - ಕ್ರಿಸ್ಮಸ್ ಮತ್ತು ನಾಲ್ಕನೇ ಶನಿವಾರ - ದೇಶದಾದ್ಯಂತ ಬ್ಯಾಂಕ್ ರಜೆ
9. 25 ಡಿಸೆಂಬರ್ 2022 - ಭಾನುವಾರ - ರಜೆ
10. 26 ಡಿಸೆಂಬರ್ 2022 - ಸೋಮವಾರ - ಕ್ರಿಸ್ಮಸ್, ಲಸುಂಗ್, ನಮ್ಸಂಗ್ - ಮಿಜೋರಾಂ, ಸಿಕ್ಕಿಂ,ಮೇಘಾಲಯದಲ್ಲಿ ಬ್ಯಾಂಕ್ ರಜೆ
11. 29 ಡಿಸೆಂಬರ್ 2022 - ಗುರುವಾರ - ಗುರು ಗೋಬಿಂದ್ ಸಿಂಗ್ ಜಿ ಅವರ ಜನ್ಮದಿನ - ಚಂಡೀಗಢದಲ್ಲಿ ಬ್ಯಾಂಕ್ ರಜೆ
12. 30 ಡಿಸೆಂಬರ್ 2022 - ಶುಕ್ರವಾರ - ಯು ಕಿಯಾಂಗ್ ನಂಗ್ವಾ - ಮೇಘಾಲಯದಲ್ಲಿ ಬ್ಯಾಂಕ್ ರಜೆ
13. 31 ಡಿಸೆಂಬರ್ 2022 - ಶನಿವಾರ - ಹೊಸ ವರ್ಷದ ಮುನ್ನಾದಿನ - ಮಿಜೋರಾಂನಲ್ಲಿ ಬ್ಯಾಂಕ್ ರಜೆ
ಇದನ್ನೂ ಓದಿ : Ola S1 Pro, Ather 450X ಮತ್ತು Hero Vida V1ಗಳಲ್ಲಿ ಯಾವುದು ಅಗ್ಗದ ಎಲೆಕ್ಟ್ರಿಕ್ ಸ್ಕೂಟ ರ್ ?
ರಜಾ ದಿನಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಅನ್ನು ಬಳಸಬಹುದು:
ಈ ರಜಾದಿನಗಳಲ್ಲಿ ಗ್ರಾಹಕರು ಆನ್‌ಲೈನ್ ಬ್ಯಾಂಕಿಂಗ್ ಅನ್ನು ಬಳಸಬಹುದು. ಅವುಗಳಿಗೆ ಯಾವುದೇ ರೀತಿಯ ಅಡಿಯಾಗುವುದಿಲ್ಲ. ಆದರೆ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೊದಲು ರಜಾದಿನಗಳ ಪಟ್ಟಿಯನ್ನೊಮ್ಮೆ ನೋಡಿಕೊಳ್ಳಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.