Economy: ಯಾವ ದಿಕ್ಕಿನತ್ತ ಸಾಗುತ್ತಿದೆ ದೇಶದ ಆರ್ಥಿಕತೆ? ಅಪಾಯ ಎಲ್ಲಿದೆ? ವಿತ್ತ ಸಚಿವಾಲಯದ ವರದಿ ಹೇಳಿದ್ದೇನು?
Finance Ministry: ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆ ಎದುರಿಸಬೇಕಾದ ಸವಾಲುಗಳ ಬಗ್ಗೆ ಹಣಕಾಸು ಸಚಿವಾಲಯ ತನ್ನ ಮಾಸಿಕ ವರದಿಯಲ್ಲಿ ವಿಸ್ತೃತವಾಗಿ ಮಾಹಿತಿ ನೀಡಿದೆ.
Report Of Finance Ministry: ದೇಶದ ಆರ್ಥಿಕ ಸ್ಥಿತಿ ಹೇಗಿದೆ, ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದರ ನೀಲನಕ್ಷೆಯನ್ನು ಹಣಕಾಸು ಸಚಿವಾಲಯ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ. ಜಾಗತಿಕ ಮಟ್ಟದಲ್ಲಿನ ಸವಾಲುಗಳು ಮತ್ತು ಹವಾಮಾನ ಮಟ್ಟದಲ್ಲಿನ ಅನಿಶ್ಚಿತತೆಗಳನ್ನು ಗಮನಿಸಿದರೆ, ಆರ್ಥಿಕ ಬೆಳವಣಿಗೆ ಕುಸಿಯುವ ಮತ್ತು ಹಣದುಬ್ಬರ ಹೆಚ್ಚಾಗುವ ಅಪಾಯವಿದೆ ಎಂದು ವರದಿ ಹೇಳಿದೆ. ಸೋಮವಾರದ ಏಪ್ರಿಲ್ ತಿಂಗಳ ಮಾಸಿಕ ಆರ್ಥಿಕ ಪರಿಶೀಲನಾ ವರದಿಯಲ್ಲಿ ವಿತ್ತ ಸಚಿವಾಲಯವು ಬಳಕೆಯಲ್ಲಿ ಬಲವಿದೆ ಮತ್ತು ಅದರಲ್ಲಿ ಸರ್ವತೋಮುಖ ಬೆಳವಣಿಗೆಯಾಗಿದೆ ಎಂದು ಹೇಳಿದೆ. ಇದೇ ವೇಳೆ, ರಿಯಲ್ ಎಸ್ಟೇಟ್ನಲ್ಲಿ ಸಾಮರ್ಥ್ಯ ಸೃಷ್ಟಿ ಮತ್ತು ಹೂಡಿಕೆಯ ಆಕರ್ಷಣೆ ಹೆಚ್ಚುತ್ತಿದೆ ಎಂದೂ ಕೂಡ ವರದಿ ಹೇಳಿದೆ.
ಏಪ್ರಿಲ್‌ನಲ್ಲಿ ಉತ್ತಮ ಜಿಎಸ್‌ಟಿ ಸಂಗ್ರಹ
"ಏಪ್ರಿಲ್‌ನಲ್ಲಿ ಇಡೀ ವರ್ಷದ ಆರ್ಥಿಕ ಫಲಿತಾಂಶದ ಬಗ್ಗೆ ಅಂದಾಜು ವ್ಯಕ್ತಪಡಿಸುವುದು ಸ್ವಲ್ಪ ಕಷ್ಟ ಸಾಧ್ಯ. ಆದರೆ, ಆರಂಭವು ಉತ್ತಮವಾಗಿದೆ" ಎಂದು ವರದಿ ಹೇಳಿದೆ. ಭಾರತೀಯ ಆರ್ಥಿಕತೆಗೆ 2023-24 ಕಳೆದ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದ ಪ್ರಬಲ ಚಟುವಟಿಕೆಗಳೊಂದಿಗೆ ಆರಂಭಗೊಂಡಿದೆ ಎಂದು ಹೇಳಲಾಗಿದೆ. ಏಪ್ರಿಲ್‌ನಲ್ಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದ ಅಂಕಿ ಅಂಶವು ತೆರಿಗೆ ನೆಲೆಯ ವಿಸ್ತರಣೆ ಮತ್ತು ಆರ್ಥಿಕ ಚಟುವಟಿಕೆಯ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ.
ಈ ರಂಗಗಳಲ್ಲೂ ಒಳ್ಳೆಯ ಸುದ್ದಿ ಬಂದಿದೆ
ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (IIP) ಮತ್ತು ಎಂಟು ಮೂಲ ಕೈಗಾರಿಕೆಗಳ ಉತ್ಪಾದನೆಯು FY 2022-23 ರ ನಾಲ್ಕನೇ ತ್ರೈಮಾಸಿಕದಲ್ಲಿ ಹೆಚ್ಚಾಗಿದೆ. ಹಿಂದಿನ ಎರಡು ತ್ರೈಮಾಸಿಕಗಳಲ್ಲಿ ಸಾಮರ್ಥ್ಯದ ಬಳಕೆಯು ಶೇಕಡಾ 75 ರಷ್ಟಿತ್ತು. ಆರ್ಥಿಕ ಚಟುವಟಿಕೆಗಳ ನಿರಂತರ ಬೆಳವಣಿಗೆ ಮತ್ತು ಸಾಮರ್ಥ್ಯದ ಬಳಕೆಯಲ್ಲಿನ ಹೆಚ್ಚಳದಿಂದಾಗಿ, ಕಂಪನಿಗಳು ಹೊಸ ಸಾಮರ್ಥ್ಯ ನಿರ್ಮಾಣದಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿವೆ. ಬಂಡವಾಳ ಸರಕುಗಳ ಉತ್ಪಾದನೆಯೊಂದಿಗೆ ನಿರ್ಮಾಣ/ಮೂಲಸೌಕರ್ಯ ಸರಕುಗಳ ವಲಯದಲ್ಲಿನ ಬೆಳವಣಿಗೆಯು Q4:2022-23 ರಲ್ಲಿ ಮುಂದುವರಿದಿದೆ. ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಂತೆ, ಕೃಷಿ ಕ್ಷೇತ್ರದ ಭವಿಷ್ಯವೂ ಉತ್ತಮವಾಗಿದೆ.
ಮುಂಗಾರು ಮಳೆಯ ಮುನ್ಸೂಚನೆ ಏನು?
ವರದಿಯ ಪ್ರಕಾರ, ಸಾಮಾನ್ಯ ಮುಂಗಾರು ಮುನ್ಸೂಚನೆ, ಜಲಾಶಯಗಳಲ್ಲಿ ಹೆಚ್ಚಿನ ನೀರಿನ ಲಭ್ಯತೆ, ಬೀಜಗಳು ಮತ್ತು ರಸಗೊಬ್ಬರಗಳ ಉತ್ತಮ ಲಭ್ಯತೆ ಮತ್ತು ಉತ್ತಮ ಟ್ರ್ಯಾಕ್ಟರ್ ಮಾರಾಟವು ಖಾರಿಫ್ ಬಿತ್ತನೆ ಹಂಗಾಮಿಗೆ ಉತ್ತಮವಾಗಿದೆ. ಅಕಾಲಿಕ ಮಳೆಯ ಹೊರತಾಗಿಯೂ, ಗೋಧಿಯ ಸುಗಮ ಸಾರ್ವಜನಿಕ ಸಂಗ್ರಹಣೆಯು ಆಹಾರ ಭದ್ರತೆಯ ದೃಷ್ಟಿಯಿಂದ ಉತ್ತಮವಾಗಿದೆ. ಹಳ್ಳಿಗಳಲ್ಲೂ ಬೇಡಿಕೆ ಹೆಚ್ಚುತ್ತಿದೆ. ಇದು 2022-23ರ ನಾಲ್ಕನೇ ತ್ರೈಮಾಸಿಕದಲ್ಲಿ ದೈನಂದಿನ ಬಳಕೆಯ ಸರಕುಗಳ ಕಂಪನಿಗಳ ಬಲವಾದ ಮಾರಾಟ ಮತ್ತು ಏಪ್ರಿಲ್ ತಿಂಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸತತ ಎರಡಂಕಿಯ ಬೆಳವಣಿಗೆಯಲ್ಲಿ ಪ್ರತಿಫಲಿಸುತ್ತದೆ.
ವರದಿಯ ಪ್ರಕಾರ, ಮುಂಬರುವ ಖಾರಿಫ್ ಋತುವಿನಲ್ಲಿ ಉತ್ತಮ ನಿರೀಕ್ಷೆಗಳು, ಬೆಳೆಗಳಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ಮತ್ತು ಸರ್ಕಾರದ ಬಜೆಟ್ ವೆಚ್ಚದಲ್ಲಿ ಹೆಚ್ಚಳವು ರೈತರ ಆದಾಯವನ್ನು ಹೆಚ್ಚಿಸಲಿದೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲಿದೆ ಎನ್ನಲಾಗಿದೆ.
ಇದನ್ನೂ ಓದಿ-Dhoom Machaale...! ಪಲ್ಸರ್-ಅಪಾಚೆಗೆ ಭಾರಿ ಪೈಪೋಟಿ ನೀಡಲು ಬಿಡುಗಡೆಯಾಗಿದೆ ಯಮಾಹ ಕಂಪನಿಯ ಈ 150 ಸಿಸಿ ಬೈಕ್
ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು 18 ತಿಂಗಳುಗಳ ಕಾಲ ಎರಡಂಕಿಗಳಲ್ಲಿ ಉಳಿದ ನಂತರ ಏಪ್ರಿಲ್ 2023 ರಲ್ಲಿ ಮೈನಸ್ ಶೇ. 0.9 ಕ್ಕೆ ಅಂದರೆ 33 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದ ಹಣದುಬ್ಬರವು ಏಪ್ರಿಲ್ 2022 ರಲ್ಲಿ ಗರಿಷ್ಠ ಶೇ. 7.8 ರಿಂದ ಈ ವರ್ಷದ ಏಪ್ರಿಲ್‌ನಲ್ಲಿ 18 ತಿಂಗಳ ಕನಿಷ್ಠ ಶೇ. 4.7 ಕ್ಕೆ ಇಳಿದಿದೆ.
ಇದನ್ನೂ ಓದಿ-Share Market Update: ಸತತ ಎರಡನೇ ದಿನ 234 ಅಂಕಗಳ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದ ಸೆನ್ಸೆಕ್ಸ್
ವರದಿಯ ಪ್ರಕಾರ, 2022-23ರಲ್ಲಿ ದಾಖಲೆಯ ಆಹಾರ ಧಾನ್ಯ ಉತ್ಪಾದನೆಯ ಸಾಧ್ಯತೆ ಮತ್ತು 2023-24ರಲ್ಲಿ ಉತ್ತಮ ಖಾರಿಫ್ ಋತುವಿನಿಂದ ಆಹಾರ ಹಣದುಬ್ಬರವು ಮುಂಬರುವ ತಿಂಗಳುಗಳಲ್ಲಿ ಮಧ್ಯಮವಾಗುವ ನಿರೀಕ್ಷೆಯಿದೆ. ರಫ್ತಿಗೆ ಸಂಬಂಧಿಸಿದಂತೆ, ಹಣಕಾಸು ಸಚಿವಾಲಯದ ವರದಿಯು ಈ ಪ್ರದೇಶದ ಇತರ ದೇಶಗಳಿಂದ ತೀವ್ರ ಸ್ಪರ್ಧೆಯ ಹೊರತಾಗಿಯೂ, ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆಯ ಬೆಂಬಲದೊಂದಿಗೆ ಜವಳಿ ಮತ್ತು ಸಿದ್ಧ ಉಡುಪುಗಳ ಜಾಗತಿಕ ಉಪಸ್ಥಿತಿಯು ಬೆಳೆಯುತ್ತಿದೆ ಎಂದು ಹೇಳಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ