Income Tax News Today: ತಮ್ಮ ಆದಾಯವು, ನಿಗದಿಪಡಿಸಿರುವ ತೆರಿಗೆ ಮಿತಿಯೊಳಗೇ ಇದೆ ಎನ್ನುವುದನ್ನು ತೋರಿಸಿಕೊಳ್ಳಲು ಜನರು ನಕಲಿ ಬಾಡಿಗೆ ರಸೀದಿಗಳನ್ನು ಕೊಡುವುದು ಸಾಮಾನ್ಯವಾಗಿದೆ. ಇದರಿಂದಾಗಿ ದೊಡ್ಡ ಮಟ್ಟದ ಆದಾಯ ತೆರಿಗೆ ವಂಚನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ. ನಕಲಿ ಬಾಡಿಗೆ ರಸೀದಿ ಕೊಡುವವರ ಮೇಲೆ ನಿಗಾ ಇಡಲಿದೆ. 


COMMERCIAL BREAK
SCROLL TO CONTINUE READING

ನಕಲಿ ಬಾಡಿಗೆ ರಸೀದಿ ತಯಾರಿಸಿ ಹೆಚ್ಚಿನ HRA ವೆಚ್ಚಗಳನ್ನು ತೋರಿಸುವುದು ಆದಾಯ ತೆರಿಗೆ ಇಲಾಖೆ ನಿಯಮಗಳ ಪ್ರಕಾರ ಕಾನೂನು ಬಾಹಿರ. ಒಂದೊಮ್ಮೆ ನಕಲಿ ಬಾಡಿಗೆ ರಸೀದಿ ಲಗತ್ತಿಸಿ ಆದಾಯ ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳುವುದು ಪತ್ತೆಯಾದರೆ ಅಂಥವರ ವಿರುದ್ಧ ಆದಾಯ ತೆರಿಗೆ ಇಲಾಖೆಯು ಗಂಭೀರ ಕಾನೂನು ಕ್ರಮ ಕೈಗೊಳ್ಳಲಿದೆ. ಅಂಥವರ ವಿರುದ್ದ ದಂಡ ವಿಧಿಸಲಿದೆ. 


ಹೀಗೆಲ್ಲಾ ನಕಲಿ ಬಾಡಿಗೆ ರಸೀದಿ ಸಲ್ಲಿಸುತ್ತಾರೆ:
ನಕಲಿ ಬಾಡಿಗೆ ರಸೀದಿ ಕೊಡುವುದರ ಪ್ರಾಥಮಿಕ ಕಾರಣವೆಂದರೆ ತೆರಿಗೆ ಉಳಿಸುವುದಾಗಿದೆ. HRA ಎನ್ನುವುದು ಉದ್ಯೋಗಿಯ ಸಂಬಳದ ಅಂಶಗಳಲ್ಲಿ ಒಂದಾಗಿದ್ದು, ಅವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಅದಕ್ಕಾಗಿ ಹೆಚ್ಚಿನ ಬಾಡಿಗೆ ತೋರಿಸಿ ಆದಾಯ ತೆರಿಗೆಯನ್ನು ವಂಚಿಸುತ್ತಾರೆ.


ಇದನ್ನೂ ಓದಿ- 2025ರ ಬಜೆಟ್‌ನಲ್ಲಿ ಹಳೆ ತೆರಿಗೆ ಪದ್ಧತಿ ಬದಲಿಸ್ತಾರಾ ನಿರ್ಮಲಾ ಸೀತಾರಾಮನ್? ತೆರಿಗೆದಾರರ ಮೇಲೆ ಏನು ಪರಿಣಾಮ..!


ಕೆಲ ಸಂದರ್ಭದಲ್ಲಿ ನಿಜವಾದ ಬಾಡಿಗೆ ವೆಚ್ಚ ಹೊಂದಿಲ್ಲದೆ ತಮ್ಮದೇ ಕುಟುಂಬದ ಒಡೆತನದ ಮನೆಯಲ್ಲಿ ವಾಸವಾಗಿರುತ್ತಾರೆ. ಅಥವಾ ಸ್ನೇಹಿತರೊಂದಿಗೆ ಬಾಡಿಗೆ ಶೇರ್ ಮಾಡುತ್ತಿರುತ್ತಾರೆ. ಅಂಥವರು ಕೂಡ ತೆರಿಗೆ ಉಳಿಸಲು ನಕಲಿ ಬಾಡಿಗೆ ರಸೀದಿ ಕೊಡುತ್ತಾರೆ. ಕೆಲವರಿಗೆ ಅವರ ಸಹೋದ್ಯೋಗಿಗಳು ಮತ್ತು ತೆರಿಗೆ ಸಲಹೆಗಾರರೇ ತೆರಿಗೆ ಉಳಿಸಲು ನಕಲಿ ಬಾಡಿಗೆ ಬಿಲ್ ಲಗಟ್ಟಿಸುವಂತೆ ಪ್ರೇರೇಪಿಸುತ್ತಾರೆ. ಆದರೆ, ಈ ತಪ್ಪು ಮಾಡಿ ಸಿಕ್ಕಿಬಿದ್ರೆ ನೀವು ತೊಂದರೆಯಲ್ಲಿ ಸಿಲುಕುವುದರಲ್ಲಿ ಅನುಮಾನವೇ ಇಲ್ಲ. 


ಇದನ್ನೂ ಓದಿ- ಗೃಹಲಕ್ಷ್ಮೀ ಯೋಜನೆಯಂತೆ ಮೋದಿ ಸರ್ಕಾರದಿಂದಲೂ ಮನೆಯೊಡತಿಗೆ ಹಣ: 2025ರ ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ!


ನಕಲಿ ಬಾಡಿಗೆ ರಸೀದಿಗಳನ್ನು ಹೀಗೆ ಗುರುತಿಸಲಾಗುತ್ತದೆ: 
ಆದಾಯ ತೆರಿಗೆ ಇಲಾಖೆಯು (IT-D) ನಕಲಿ ಬಾಡಿಗೆ ರಸೀದಿಗಳನ್ನು ಮತ್ತು ಸುಳ್ಳು HRA ಕ್ಲೈಮ್‌ಗಳನ್ನು ಕಂಡು ಹಿಡಿಯಲು ನಾನಾ ತಂತ್ರ ಅನುಸರಿಸುತ್ತದೆ.
* ಡೇಟಾ ಅನಾಲಿಸಿಸ್:
ದತ್ತಾಂಶ ವಿಶ್ಲೇಷಣೆ ವಿಧಾನವನ್ನು ಬಳಸಿಕೊಂಡು ಆದಾಯ ತೆರಿಗೆ ಇಲಾಖೆಯು HRA ಕ್ಲೈಮ್‌ಗಳಲ್ಲಿ ಇರಬಹುದಾದ ವತ್ಯಾಸವನ್ನು ಗುರುತಿಸಲಾಗುತ್ತದೆ.


* ಕೃತಕ ಬುದ್ದಿಮತ್ತೆ: 
ಕೃತಕ ಬುದ್ದಿಮತ್ತೆ (AI) ಬಳಸಿಕೊಂಡು ನಕಲಿ ಬಾಡಿಗೆ ರಸೀದಿಗಳನ್ನು ಸುಲಭವಾಗಿ ಪತ್ತೆ ಮಾಡಲಾಗುತ್ತದೆ. 


* ಬಾಡಿಗೆ ಪರಿಶೀಲನೆ
ನಕಲಿ ಬಾಡಿಗೆ ರಸೀದಿಯಲ್ಲಿ ನಮೂದಿಸಿರುವ ಮನೆಯ ಮಾಲೀಕರಿಂದ ಪರಿಶೀಲನೆ ಮಾಡುವ ಸಾಧ್ಯತೆಯೂ ಇರುತ್ತದೆ. ವಿಶೇಷವಾಗಿ ದೊಡ್ಡ ಮೊತ್ತವನ್ನು ಕ್ಲೈಮ್ ಮಾಡಿದ್ದಾರೆ ಈ ಸಾಧ್ಯತೆ ಹೆಚ್ಚಿರುತ್ತದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.