ನವದೆಹಲಿ: ನಮ್ಮ ಪ್ರಯಾಣವನ್ನು ಟ್ರಾಫಿಕ್‌ ಕಾಟವಿಲ್ಲದೇ ಸುಗಮಗೊಳಿಸಲು ಹೆದ್ದಾರಿಗಳು ಉತ್ತಮ ಮಾರ್ಗವಾಗಿದೆ. ಬಹಳಷ್ಟು ಜನರು ನಿತ್ಯವೂ ಹೆದ್ದಾರಿಗಳಲ್ಲಿ ಸಂಚರಿಸುತ್ತಾರೆ. ಈ ಹೆದ್ದಾರಿಗಳಲ್ಲಿ ನಾವು ಟೋಲ್ ಗೇಟ್‌ಗಳನ್ನು ನೋಡುತ್ತೇವೆ. ವಾಹನವನ್ನು ಅವಲಂಬಿಸಿ, ಟೋಲ್ ಶುಲ್ಕವನ್ನು ಅಲ್ಲಿ ಸಂಗ್ರಹಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಆದರೆ ಟೋಲ್ ಗೇಟ್ ಗಳ ವಿಷಯದಲ್ಲಿ ಕಾಲಕಾಲಕ್ಕೆ ಹಲವು ಬದಲಾವಣೆ, ಸೇರ್ಪಡೆಗಳು ನಡೆಯುತ್ತಿವೆ. ಇದು ಜನರಿಗೆ ತಿಳಿದಿಲ್ಲದ ಹಲವಾರು ನಿಯಮಗಳನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ರಸ್ತೆಯಲ್ಲಿ ಸಂಚರಿಸಿದ ದೂರದ ಆಧಾರದ ಮೇಲೆ ಟೋಲ್ ಶುಲ್ಕ ಸಂಗ್ರಹಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಈ ವಿಚಾರವಾಗಿ ಹೇಳಿರುವುದು ಕುತೂಹಲ ಮೂಡಿಸಿದೆ.


ರಸ್ತೆಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದು, ನೀವು ಪ್ರಯಾಣಿಸಿದ ದೂರಕ್ಕೆ ಅನುಗುಣವಾಗಿ ಟೋಲ್‌ ಮೊತ್ತ ಕಟ್ಟಬೇಕಾಗುವುದು. ಹೊಸ ತಂತ್ರಜ್ಞಾನ ಬಳಸಿ ಪ್ರಯಾಣಕ್ಕೆ ಅನುಗುಣವಾಗಿ ಟೋಲ್ ಶುಲ್ಕ ಸಂಗ್ರಹಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. 


ಇದನ್ನೂ ಓದಿ: EPFO UAN ಪ್ರೊಫೈಲ್ ವಿವರಗಳನ್ನು ಎಷ್ಟು ಬಾರಿ ಬದಲಾಯಿಸಬಹುದು? ನಿಮ್ಮ ಬಳಿ ಇರಬೇಕಾದ ದಾಖಲೆಗಳು ಯಾವುವು?


ಟೋಲ್ ಗೇಟ್ ಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಈ ಕ್ರಮ ಕೈಗೊಳ್ಳುವ ಚಿಂತನೆ ವ್ಯಕ್ತವಾಗಿದೆ. ವಾಹನ ಕ್ರಮಿಸಿದ ನಿಖರ ದೂರಕ್ಕೆ ಮಾತ್ರ ಟೋಲ್ ವಸೂಲಿ ಮಾಡುವ ಉದ್ದೇಶ ಈ ಯೋಜನೆಯದ್ದಾಗಿದೆ. 


ಜಿಪಿಎಸ್ ಆಧಾರಿತ ಟೋಲ್ ಶುಲ್ಕ ವಸೂಲಿ ಮಾಡಿದರೆ ವಾಹನ ಸವಾರರ ಹೊರೆ ಕಡಿಮೆಯಾಗಲಿದೆ. ಟ್ರಾಫಿಕ್ ಸಮಸ್ಯೆಯೂ ಇರುವುದಿಲ್ಲ. ಹೆದ್ದಾರಿ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು NHAI ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. 


ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಭಾರತದಲ್ಲಿನ ಪ್ರತಿ ಟೋಲ್ ಪ್ಲಾಜಾವು ಪೀಕ್ ಅವರ್‌ಗಳಲ್ಲಿಯೂ ಸಹ ಪ್ರತಿ ವಾಹನಕ್ಕೆ 10 ಸೆಕೆಂಡ್‌ಗಳಿಗಿಂತ ಹೆಚ್ಚು ಸೇವಾ ಸಮಯವನ್ನು ವ್ಯಯಿಸಬಾರದು ಎಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದೇ ರೀತಿ ವಾಹನಗಳು 100 ಮೀಟರ್‌ಗಿಂತ ಹೆಚ್ಚು ಸರತಿ ಸಾಲಿನಲ್ಲಿ ನಿಲ್ಲಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 


ಇದನ್ನೂ ಓದಿ: ನಿಮ್ಮ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಇಷ್ಟೇ ಹಣ ಇರಿಸಬಹುದು! ಹೆಚ್ಚಿದ್ದರೆ ಈ ಕ್ರಮಕ್ಕೆ ಸಿದ್ದರಾಗಬೇಕು ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.