ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಮಿಷನ್ ಈಗ ಯಶಸ್ವಿಯಾಗಿದೆ. 2020 ರಲ್ಲಿ ಭಾರತೀಯರು ಅತಿ ಹೆಚ್ಚು ಡಿಜಿಟಲ್ ವಹಿವಾಟ ಮಾಡುವ ಮೂಲಕ ಯುಎಸ್-ಚೀನಾವನ್ನು ಹಿಂದಿಕ್ಕಿದೆ. 


COMMERCIAL BREAK
SCROLL TO CONTINUE READING

ಕಳೆದ ವರ್ಷದಲ್ಲಿ ಭಾರತದಲ್ಲಿ ಸುಮಾರು 25.5 ಬಿಲಿಯನ್ ಡಿಜಿಟಲ್ ವಹಿವಾಟ(Digital Transactions) ನಡೆದಿದೆ. ಚೀನಾ 15.7 ಬಿಲಿಯನ್ ವಹಿವಾಟು ನಡೆದರೆ, ದಕ್ಷಿಣ ಕೊರಿಯಾದಲ್ಲಿ 6 ಬಿಲಿಯನ್, ಥೈಲ್ಯಾಂಡ್ನಲ್ಲಿ 5.2 ಬಿಲಿಯನ್, ಬ್ರಿಟನ್ನಲ್ಲಿ 2.8 ಬಿಲಿಯನ್ ಡಿಜಿಟಲ್ ವ್ಯವಹಾರಗಳು ನಡೆದಿವೆ. 


ಇಳಿಕೆಯಾಗಲಿದೆ LPG ದರ : ಪೆಟ್ರೋಲಿಯಂ ಸಚಿವರು ನೀಡಿದ್ದಾರೆ ಪ್ರಮುಖ ಸುಳಿವು..!
 
ಡಿಜಿಟಲ್ ವ್ಯವಹಾರದಲ್ಲಿ 9 ನೇ ಸ್ಥಾನದಲ್ಲಿದೆ ಅಮೆರಿಕ: ಅಮೆರಿಕ(America)ವು ಟಾಪ್ -10 ರಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು  ಬಹಳ ಕಷ್ಟ ಪಟ್ಟಿದೆ. ಕಳೆದ ವರ್ಷ 1.2 ಬಿಲಿಯನ್ ವಹಿವಾಟು ನಡೆಸಿ  9 ನೇ ಸ್ಥಾನದಲ್ಲಿತ್ತು. ತ್ವರಿತ ಪಾವತಿಗಳ ವಿಷಯದಲ್ಲಿ, ಭಾರತದ ಪಾಲು ಶೇಕಡಾ 15.6 ರಷ್ಟಿದ್ದರೆ, ಇತರ ಎಲೆಕ್ಟ್ರಾನಿಕ್ ಪಾವತಿಗಳಲ್ಲಿ ಇದು ಶೇಕಡಾ 22.9 ಕ್ಕೆ ತಲುಪಿದೆ.


How To Check PF Balance: ಕೇವಲ ಮಿಸ್ಡ್ ಕಾಲ್ ಮೂಲಕ ತಿಳಿದುಕೊಳ್ಳಬಹುದು PF Balance


ಡಿಜಿಟಲ್ ಪಾವತಿಗಳ ಪ್ರಚಾರದ ಹೊರತಾಗಿಯೂ, ಭಾರತದ(India)ಲ್ಲಿ ಪೇಪರ್ ಆಧಾರಿತ ಪಾವತಿಗಳೂ ಕಡಿಮೆಯಾಗಿಲ್ಲ. ಆದ್ರೆ ಭಾರತೀಯರು ಪೇಪರ್ ವ್ಯವಹಾರವನ್ನು ನಂಬುತ್ತಾರೆ. ಈ ನಿಟ್ಟಿನಲ್ಲಿ ಭಾರತದ ಪಾಲು ಶೇಕಡಾ 61 ಕ್ಕಿಂತ ಹೆಚ್ಚಾಗಿದೆ. ಯುಕೆ ಕಂಪನಿಯ ಎಸಿಐ ವರ್ಲ್ಡ್ ವೈಡ್ ವರದಿಯಲ್ಲಿ ಈ ಸಂಗತಿ ಬಹಿರಂಗವಾಗಿದೆ.


ATMನಿಂದ ಹಣ ವಿತ್ ಡ್ರಾ ಮಾಡಿದಾಗ ಹರಿದ ನೋಟು ಸಿಕ್ಕಿದರೆ ಚಿಂತೆಬಿಟ್ಟು ಈ ಕೆಲಸ ಮಾಡಿ


2025 ರ ವೇಳೆಗೆ ಇನ್ನೂ ಏರಿಕೆಯಾಗುವ ನಿರೀಕ್ಷೆ ಇದೆ: 2025 ರ ವೇಳೆಗೆ ಭಾರತವು ಈ ದಿಕ್ಕಿನಲ್ಲಿ ಮತ್ತಷ್ಟು ಸುಧಾರಿಸುತ್ತದೆ ಎಂದು ಅಂದಾಜಿಸಲಾಗಿದೆ. ಡಿಜಿಟಲ್ ಪಾವತಿ(Digital Pay)ಗಳ ವಿಷಯದಲ್ಲಿ, ಭಾರತದ ಪಾಲು ಶೇಕಡಾ 37 ಕ್ಕೆ ಏರಿದರೆ, ಎಲೆಕ್ಟ್ರಾನಿಕ್ ಪಾವತಿಗಳಲ್ಲಿ ಇದು ಶೇಕಡಾ 34 ಕ್ಕೆ ತಲುಪುವ ನಿರೀಕ್ಷೆಯಿದೆ. ಆಗ ಕಾಗದ ಆಧಾರಿತ ಪಾವತಿಯ ಪಾಲು ಕುಸಿಯುತ್ತದೆ ಎಂಬುದು ಸ್ಪಷ್ಟವಾಗಿದೆ, ಅದು ಶೇಕಡಾ 28 ಕ್ಕೆ ಇಳಿಯುವ ನಿರೀಕ್ಷೆಯಿದೆ.


SBI Home Loan : ಗೃಹ ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ


ಎನ್‌ಪಿಸಿಐ ಪ್ರಕಾರ, ದೇಶದಲ್ಲಿ ಯುಪಿಐ(UPI) ಮೂಲಕ ವಹಿವಾಟು ಕೂಡ ನಿರಂತರವಾಗಿ ಹೆಚ್ಚುತ್ತಿದೆ. ಫೆಬ್ರವರಿಯಿಂದ ಮಾರ್ಚ್ 2021 ರವರೆಗೆ ಇದು ಸುಮಾರು 4.25 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.