Indian Currency: ಈ ಜಗತ್ತಿನಲ್ಲಿ ಹಣ ಸಂಪಾದಿಸಲು ಹಲವು ಮಾರ್ಗಗಳಿವೆ. ಅಂತಹ ಪರಿಸ್ಥಿತಿಯಲ್ಲಿ, ಈಗ ಕೆಲವು ಹಳೆಯ ನಾಣ್ಯಗಳು ಮತ್ತು ನೋಟುಗಳಿಗಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡ್‌ಗಳನ್ನು ಆಹ್ವಾನಿಸಲಾಗುತ್ತಿದೆ. ಇದರಿಂದ ಜನರು ಲಕ್ಷಾಂತರ ರೂ. ಹಣ ಸಂಪಾದಿಸಬಹುದಾಗಿದೆ. ಆದರೆ, ಈ ಸಂದರ್ಭದಲ್ಲಿ ಕೆಲವು ಅಂಶಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ನಿಮ್ಮ ಬಳಿ ಇರುವ ಹಳೆಯ ನಾಣ್ಯ ಮತ್ತು ನೋಟುಗಳಲ್ಲಿ (Old Currency) ಈ ರೀತಿಯ ವಿಶೇಷತೆ ಇದ್ದರೆ, ನೀವು ಮನೆಯಲ್ಲಿಯೇ ಕುಳಿತು ಹಣ ಸಂಪಾದಿಸಬಹುದು. ಹಳೆಯ ನೋಟುಗಳು ಮತ್ತು ನಾಣ್ಯಗಳ ಸರಣಿಯಲ್ಲಿ, ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಹಳೆಯ ಮತ್ತು ವಿಶೇಷ ರೀತಿಯ 2 ರೂ. ನೋಟುಗಳನ್ನು ಮಾರಾಟ ಮಾಡುವ ಮೂಲಕ ನೀವು ಲಕ್ಷ ರೂಪಾಯಿಗಳನ್ನು ಹೇಗೆ ಗಳಿಸಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಳೆಯ ಕರೆನ್ಸಿ ನೋಟುಗಳ ಹರಾಜಿನ ಬಗ್ಗೆ ಅನೇಕ ಸುದ್ದಿಗಳು ಸಾಕಷ್ಟು ವೈರಲ್‌ ಆಗುತ್ತಿವೆ.


ಭಾರತ ಸರ್ಕಾರವು (Govt of India) ಅನೇಕ ರೀತಿಯ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ. ಅಂತಹ ಪರಿಸ್ಥಿತಿಯಲ್ಲಿ, 1, 2, 5, 10 ರೂ.ಗಳ ವಿಶೇಷ ನೋಟುಗಳನ್ನು ಈಗ ಅಪರೂಪದ ಕರೆನ್ಸಿ (Special Currencies) ನೋಟುಗಳಲ್ಲಿ ಸೇರಿಸಲಾಗಿದೆ. ಈ ವಿಶೇಷ ಪ್ರಕಾರದ ನೋಟುಗಳನ್ನು ಅನೇಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಾಜು ಮಾಡಲಾಗುತ್ತಿದೆ. ಇದಕ್ಕಾಗಿ ಲಕ್ಷ ರೂಪಾಯಿ ಮೌಲ್ಯದ ಬಿಡ್‌ಗಳನ್ನು ಮಾಡಲಾಗುತ್ತಿದೆ. ನಿಮ್ಮ ಬಳಿ ಕೂಡ 2 ರೂಪಾಯಿಗಳ ಹಳೆಯ ವಿಶೇಷ ನೋಟು ಇದ್ದರೆ, ನೀವು ಕೂಡ ಒಂದು ನಿಮಿಷದಲ್ಲಿ ಮಿಲಿಯನೇರ್ ಆಗಬಹುದು.


ಇದನ್ನೂ ಓದಿ- Post Office's 7 SuperHit Schemes -ಪೋಸ್ಟ್ ಆಫೀಸ್‌ನ 7 ಸೂಪರ್‌ಹಿಟ್ ಯೋಜನೆಗಳು


ಇದು ಮಾತ್ರವಲ್ಲ, ಈ ವಿಶೇಷ ರೀತಿಯ ವಸ್ತುಗಳ ನಿಖರವಾದ ಬೆಲೆಯ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದ್ದರೆ, ನೀವು ಮನೆಯಲ್ಲಿಯೇ ಕುಳಿತು ಮಿಲಿಯನೇರ್ ಆಗಬಹುದು. ಈ 2 ರೂಪಾಯಿ ನೋಟಿನ ವಿಶೇಷತೆ ಏನು, ಈ ಹಳೆಯ ನೋಟನ್ನು ಆನ್‌ಲೈನ್ನಲ್ಲಿ ಹರಾಜು ಮಾಡುವ ಮೂಲಕ ನೀವು ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಈ 2 ರೂಪಾಯಿ ನೋಟಿನಲ್ಲಿ 786 ಎಂದು ಬರೆಯಲಾಗಿದ್ದರೆ, ಜನರು ಅದನ್ನು ಖರೀದಿಸಲು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ಧರಾಗಿದ್ದಾರೆ.


ಈ ದೇಶದಲ್ಲಿ ಅನೇಕ ಜನರಿದ್ದಾರೆ, ಅವರು 786 ಸಂಖ್ಯೆಯನ್ನು ಬಹಳ ಶುಭವೆಂದು ಪರಿಗಣಿಸುತ್ತಾರೆ ಮತ್ತು ಈ ಸಂಖ್ಯೆಯನ್ನು ಬರೆಯಲಾದ ನೋಟುಗಳನ್ನು ಹುಡುಕುತ್ತಿರುತ್ತಾರೆ. ಇದಲ್ಲದೆ, ಈ ನೋಟು ಗುಲಾಬಿ ಬಣ್ಣದ್ದಾಗಿರಬೇಕು. ಇದರೊಂದಿಗೆ ಸತತ 10 ವರ್ಷಗಳ ಕಾಲ ಭಾರತದ ಪ್ರಧಾನ ಮಂತ್ರಿಯೂ ಆಗಿದ್ದ ಮಾಜಿ ಆರ್‌ಬಿಐ ಗವರ್ನರ್ ಡಾ. ಮನಮೋಹನ್ ಸಿಂಗ್ (Manmohan Singh) ಅವರ ಸಹಿ ಇರಬೇಕು.


2 ರೂಪಾಯಿಗಳ ಈ ವಿಶೇಷ ನೋಟನ್ನು ಮಾರಾಟ ಮಾಡಲು ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ಇಬೇ (Ebay)  ಮತ್ತು ಕ್ಲಿಕ್ ಇಂಡಿಯಾ (Click India) ದಂತಹ ವೆಬ್‌ಸೈಟ್‌ಗಳು ಅಂತಹ ನೋಟುಗಳನ್ನು ಹುಡುಕುತ್ತವೆ ಮತ್ತು ಹರಾಜು ನಡೆಸುತ್ತವೆ. ಕ್ಲಿಕ್‌ಇಂಡಿಯಾ ಸೈಟ್‌ನಲ್ಲಿ, ವಾಟ್ಸಾಪ್‌ನಲ್ಲಿ ನೇರವಾಗಿ ಮಾರಾಟ ಮಾಡುವ ಲಿಂಕ್ ಸಹ ಲಭ್ಯವಿರುತ್ತದೆ.


ಇದನ್ನೂ ಓದಿ- ಉದ್ಯೋಗ ಕಳೆದುಕೊಂಡಿದ್ದೀರಾ ? ಹಾಗಿದ್ದರೆ ESIC ಯೋಜನೆ ಮೂಲಕ ಸಿಗಲಿದೆ ನಿರುದ್ಯೋಗ ಭತ್ಯೆ


ಆನ್‌ಲೈನ್ ಹರಾಜಿಗಾಗಿ, ನಿಮ್ಮೊಂದಿಗೆ ನೀವು ಹೊಂದಿರುವ ಈ ನಿರ್ದಿಷ್ಟ ಪ್ರಕಾರದ ನೋಟಿನ ಫೋಟೋವನ್ನು ನೀವು ಕ್ಲಿಕ್ ಮಾಡಬೇಕು. ಇದರ ನಂತರ, ನೀವು ಬಿಡ್ಡಿಂಗ್ ವೆಬ್‌ಸೈಟ್‌ನಲ್ಲಿ ನಿಮ್ಮನ್ನು ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ನಂತರ ಈ ಫೋಟೋವನ್ನು ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಈ ನಂತರ ಖರೀದಿಸಲು ಆಸಕ್ತಿ ಹೊಂದಿರುವ ಜನರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. ಅವರೊಂದಿಗೆ ಮಾತನಾಡುವ ಮೂಲಕ, ನೀವು 2 ವಿಶೇಷ ರೂಪದ ನೋಟಿನ ಬೆಲೆಯನ್ನು ನಿರ್ಧರಿಸಬಹುದು. ಅಲ್ಲದೆ, ನೋಟು ವಿತರಣೆಯನ್ನು ಹೇಗೆ ಮತ್ತು ಎಲ್ಲಿ ಮಾಡಲಾಗುತ್ತದೆ ಎಂದು ನಿರ್ಧರಿಸಬಹುದೇದು?


(ಹಕ್ಕುತ್ಯಾಗ: ಇದು ವಿವಿಧ ವೆಬ್‌ಸೈಟ್‌ಗಳ ಮಾಹಿತಿಯನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಸುದ್ದಿಯನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.