ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್-19 ನಿರ್ಬಂಧಗಳನ್ನು ಸಡಿಲಿಸುತ್ತಿದ್ದಂತೆ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಪರಿಣಾಮ ಸರಕು ಮತ್ತು ಸೇವಾ ತೆರಿಗೆ(GST)ಸಂಗ್ರಹದಲ್ಲಿ ಚೇತರಿಕೆ ಕಂಡಿದೆ. ಜುಲೈ ತಿಂಗಳಿನಲ್ಲಿ ಬರೋಬ್ಬರಿ 1.16 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. 2020ರ ಜುಲೈ ತಿಂಗಳಲ್ಲಿ 87,422 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ 2021ರ ಜುಲೈ ತಿಂಗಳ ಜಿಎಸ್‌ಟಿ ಸಂಗ್ರಹದಲ್ಲಿ ಶೇ.33ರಷ್ಟು ಹೆಚ್ಚಳ ಕಂಡಿದೆ.  


COMMERCIAL BREAK
SCROLL TO CONTINUE READING

ಕೊರೊನಾ ಸಾಂಕ್ರಾಮಿಕದ 2ನೇ ಅಲೆ ತಗ್ಗಿದ ಬಳಿಕ ದೇಶದ ಬಹುತೇಕ ರಾಜ್ಯಗಳಲ್ಲಿ ಹಂತಹಂತವಾಗಿ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಗೊಳಿಸಲಾಯಿತು. ಇದರಿಂದ ಕಳೆದ ತಿಂಗಳಲ್ಲಿಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಳವಾಗಿದೆ. ಇದರಿಂದ ಭಾರತದ ಆರ್ಥಿಕತೆಯ ಅಭಿವೃದ್ಧಿಗೆ ವೇಗ ಸಿಕ್ಕಂತಾಗಿದೆ.


ಜೂನ್‌ ತಿಂಗಳ ಜಿಎಸ್‌ಟಿ ಸಂಗ್ರಹದಲ್ಲಿ ಭಾರೀ ಕುಸಿತವಾಗಿತ್ತು. ಜೂನ್‌ನಲ್ಲಿ 92,849 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಇದು ಕಳೆದ 10 ತಿಂಗಳಲ್ಲೇ ಕನಿಷ್ಟ ಮಟ್ಟದ್ದಾಗಿದೆ. ಮೇ ತಿಂಗಳಿನಲ್ಲಿ ಆರ್ಥಿಕ ಚಟುವಟಿಕೆ ಕಡಿಮೆ ಇದ್ದ ಕಾರಣ ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿ 1 ಲಕ್ಷ ಕೋಟಿ ರೂ.ಗಿಂತ ಕಡಿಮೆ ಜಿಎಸ್‌ಟಿ ಸಂಗ್ರಹವಾಗಿತ್ತು. ಅದೇನೇ ಇದ್ದರೂ ಜುಲೈ 2021ರಲ್ಲಿಜಿಎಸ್‌ಟಿ ಸಂಗ್ರಹ ಮತ್ತೆ ಪುಟಿದೆದ್ದಿದ್ದು, 1,16,393 ಕೋಟಿ ರೂ. ತಲುಪಿದೆ ಅಂತಾ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ.  


ಇದನ್ನೂ ಓದಿLIC Kanyadan Policy : LIC ಈ ಹೊಸ ಯೋಜನೆಯಲ್ಲಿ ಕೇವಲ ₹121 ಪಾವತಿಸಿ : ಮಗಳ ಮದುವೆ ವೇಳೆಗೆ ಸಿಗಲಿದೆ 27 ಲಕ್ಷ ರೂ.


ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಸಂಖ್ಯೆಯು ಏಪ್ರಿಲ್ 2021ರ 1.41 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹದಿಂದ ಮಾತ್ರ ಅಗ್ರಸ್ಥಾನದಲ್ಲಿದೆ. ವಿಶ್ಲೇಷಕರು ಮತ್ತು ಹಣಕಾಸು ತಜ್ಞರು ಆರ್ಥಿಕ ಚಟುವಟಿಕೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಮುನ್ಸೂಚನೆ ನೀಡುತ್ತಿದ್ದಾರೆ. ಇದರ ಪರಿಣಾಮ ಮುಂದಿನ ಕೆಲವು ತಿಂಗಳುಗಳಲ್ಲಿ ಜಿಎಸ್‌ಟಿ ಸಂಗ್ರಹಣೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಕೋವಿಡ್-19 3ನೇ ಅಲೆಯ ಸಾಧ್ಯತೆಯ ಹೊರತಾಗಿಯೂ ಆರ್ಥಿಕ ಚಟುವಟಿಕೆಗಳಿಗೆ ಮಾರುಕಟ್ಟೆಯು ಆಶಾವಾದವನ್ನು ತೋರಿಸುತ್ತಿದೆ.  


‘ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸುವುದರೊಂದಿಗೆ ಜುಲೈ 2021ರ ಜಿಎಸ್‌ಟಿ ಸಂಗ್ರಹವು ಮತ್ತೆ 1 ಲಕ್ಷ ಕೋಟಿ ರೂ. ದಾಟಿದೆ. ಇದು ದೇಶದ ಅರ್ಥವ್ಯವಸ್ಥೆಯು ವೇಗದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಮುಂಬರುವ ತಿಂಗಳುಗಳಲ್ಲಿಯೂ ಜಿಎಸ್‌ಟಿ ಆದಾಯ ಸಂಗ್ರಹಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಅಂತಾ ಹಣಕಾಸು ಸಚಿವಾಲಯವು ಹೇಳಿಕೆ ನೀಡಿದೆ. ಪಂಜಾಬ್, ಹರಿಯಾಣ, ಕೇರಳ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ಜಿಎಸ್‌ಟಿ ಸಂಗ್ರಹ ಹೆಚ್ಚಳಕ್ಕೆ ಕೊಡುಗೆ ನೀಡಿದ ಪ್ರಮುಖ ರಾಜ್ಯಗಳಾಗಿವೆ ಎಂದು ಪ್ರಮುಖರು ಹೇಳಿದ್ದಾರೆ.


ಇದನ್ನೂ ಓದಿ: PF ಖಾತೆದಾರರಿಗೆ ಸಿಹಿ ಸುದ್ದಿ : ಇಂದು ಖಾತೆಗೆ ಜಮಾ ಆಗಬಹುದು ಶೇ 8.5 ಬಡ್ಡಿ ಹಣ!


ಈ ಒಟ್ಟು ಸಂಗ್ರಹದಲ್ಲಿ ಸಿಜಿಎಸ್‌ಟಿಯ (CGST) ಪಾಲು 22,197 ಕೋಟಿ ರೂ. ಆದರೆ, ಎಸ್‌ಜಿಎಸ್‌ಟಿ ಮತ್ತು ಐಜಿಎಸ್‌ಟಿ (IGST) ಕ್ರಮವಾಗಿ 28,541 ರೂ. ಮತ್ತು 57,864 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 27,900 ಕೋಟಿ ರೂ. ಸೇರಿ) ಹಾಗೂ ಸೆಸ್ 7,790 ಕೋಟಿ (ಸರಕುಗಳ ಆಮದಿಗೆ ಸಂಗ್ರಹಿಸಿದ 815 ಕೋಟಿ ರೂ. ಸೇರಿ) ರೂ. ಆಗಿದೆ ಎಂದು  ಕೇಂದ್ರ ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.