ನವದೆಹಲಿ : ಕೊರೊನಾವೈರಸ್ ಸಾಂಕ್ರಾಮಿಕದ (Coronavirus) ಹಿನ್ನೆಲೆಯಲ್ಲಿ, ರೈಲುಗಳಿಂದ ಲಿನಿನ್ ಮತ್ತು ಕರ್ಟನ್ ಸೇವೆಗಳನ್ನು ತೆಗೆದುಹಾಕುವ ನಿರ್ಧಾರವನ್ನು ರೈಲ್ವೆ ಈಗ ಹಿಂಪಡೆದಿದೆ. ಉತ್ತರ ರೈಲ್ವೆ ಇದುವರೆಗೆ 92 ರೈಲುಗಳಲ್ಲಿ ಕರ್ಟನ್ ಸೇವೆಗಳನ್ನು (Curtain service) ಮತ್ತು 26 ರೈಲುಗಳಲ್ಲಿ ಲಿನಿನ್ ಸೇವೆಗಳನ್ನು ಪುನಃ ಆರಂಭಿಸಿದೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಈ ಸೌಲಭ್ಯವನ್ನು ನಿಷೇಧಿಸಲಾಗಿತ್ತು. 


COMMERCIAL BREAK
SCROLL TO CONTINUE READING

ಮತ್ತೆ ಈ ಸೇವೆಯನ್ನು ಆರಂಭಿಸಿದ ಉತ್ತರ ರೈಲ್ವೆ :
ದೀರ್ಘಕಾಲದಿಂದ ಮುಚ್ಚಿರುವ ವಾಷಿಂಗ್ ಲಾಂಡ್ರಿ ಮತ್ತು ಲಿನಿನ್ ವಿತರಣಾ ಸೇವೆಗಳನ್ನು ಮರುಪ್ರಾರಂಭಿಸಲು, ಲಭ್ಯವಿರುವ ಸಂಪನ್ಮೂಲಗಳು ಮತ್ತು ಸಮಯವನ್ನು ಗಮನದಲ್ಲಿಟ್ಟುಕೊಂಡು ಲಿನಿನ್, ಬೆಡ್‌ರೋಲ್, ಕರ್ಟನ್ ವಾಷಿಂಗ್ ಲಾಂಡ್ರಿ ಮತ್ತು ಲಿನಿನ್ ವಿತರಣಾ ಸೇವೆಗಳ ಮರುಸ್ಥಾಪನೆಗಾಗಿ ಉತ್ತರ ರೈಲ್ವೆ ಎಲ್ಲಾ ಸಂಪನ್ಮೂಲಗಳನ್ನು ವಿನಿಯೋಗಿಸಿದೆ (Indian Railway services). 


ಇದನ್ನೂ ಓದಿ : Mahindra: ಹೊಸ ಎಲೆಕ್ಟ್ರಿಕ್ ಆಲ್ಫಾ ಸಿಎನ್‌ಜಿ ಆಟೋ ಬಿಡುಗಡೆ ಮಾಡಿದ ಮಹೀಂದ್ರಾ


ಲಿನಿನ್ ಮತ್ತು ಬೆಡ್ ರೋಲ್ ವಸ್ತುಗಳನ್ನು ಖರೀದಿಸಲಾಗುವುದು :
ಹೆಚ್ಚುವರಿಯಾಗಿ, ಲಿನಿನ್ ಮತ್ತು ಬೆಡ್‌ರೋಲ್ ಗಳನ್ನು (Bed roll) ಅಂದಾಜು ಪ್ರಮಾಣದಲ್ಲಿ ಖರೀದಿ ಮಾಡುವ ಪ್ರಕ್ರಿಯೆ ಆರಂಭಿಸುವಂತೆ ಇಲಾಖೆಗೆ ಸೂಚಿಸಲಾಗಿದೆ. ಪ್ರಸ್ತುತ ಲಭ್ಯವಿರುವ ಬೆಡ್‌ರೋಲ್ ಸ್ಟಾಕ್‌ನೊಂದಿಗೆ ಇದನ್ನು ಹಂತಹಂತವಾಗಿ ಮರುಸ್ಥಾಪಿಸಲಾಗುತ್ತಿದೆ. 


ಇತರ ರೈಲುಗಳಲ್ಲೂ ಶೀಘ್ರದಲ್ಲೇ ಸೇವೆ ಆರಂಭ : 
ಉಳಿದ ರೈಲುಗಳಲ್ಲಿ ಕೂಡಾ ಕರ್ಟನ್ ಮತ್ತು ಲಿನಿನ್ ಸೇವೆಗಳನ್ನು ಮರುಸ್ಥಾಪಿಸಲು ಯೋಜಿಸಲಾಗಿದೆ (Curtain service in train) . ಇದಲ್ಲದೆ, ಮಾರಾಟಗಾರರಿಂದ ಸರಬರಾಜು ಪಡೆದ ನಂತರ ಉಳಿದ ರೈಲುಗಳಲ್ಲಿ ಲಿನಿನ್ ಸೇವೆಗಳನ್ನು ಪುನಃಸ್ಥಾಪಿಸಲಾಗುತ್ತದೆ.


ಇದನ್ನೂ ಓದಿ : Petrol Diesel Price Hike: ಎರಡು ವಾರಗಳಲ್ಲಿ 13ನೇ ಬಾರಿಗೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ


ಇದರೊಂದಿಗೆ ಬೆಡ್‌ರೋಲ್ ಸೌಲಭ್ಯವನ್ನು ಮರುಸ್ಥಾಪಿಸುತ್ತಿರುವ ರೈಲುಗಳ  ಅಪ್ಡೇಟ್ ಅನ್ನು ಎಸ್‌ಎಂಎಸ್, ಸಾಮಾಜಿಕ ಮಾಧ್ಯಮಗಳ (Social media) ಮೂಲಕ ಪ್ರಯಾಣಿಕರಿಗೆ ನೀಡಲಾಗುತ್ತಿದೆ. ರೈಲುಗಳಲ್ಲಿ ಬೆಡ್‌ರೋಲ್‌ಗಳ ಲಭ್ಯತೆಯನ್ನು ರೈಲ್ವೆ ಆಡಳಿತವು SMS ಮೂಲಕ ತಿಳಿಸುತ್ತಿದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.