Diwali Bonus : ಈ ಹಬ್ಬದ ಋತುವಿನಲ್ಲಿ, ನೌಕರರು ಬೋನಸ್‌ಗಳ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ದೀಪಾವಳಿಯ ಸಂದರ್ಭದಲ್ಲಿ, ಕಂಪನಿಗಳು, ಸರ್ಕಾರ ತಮ್ಮ ಉದ್ಯೋಗಿಗಳಿಗೆ/ ನೌಕರರಿಗೆ ಖಂಡಿತವಾಗಿಯೂ ಬೋನಸ್ ನೀಡುತ್ತವೆ. ಇದೇ ವೇಳೆ ಸರ್ಕಾರ ತನ್ನ ನೌಕರರಿಗೆ ಬೋನಸ್ ಕೂಡ ನೀಡುತ್ತದೆ. ಇದೀಗ ಕೆಲ ಸರ್ಕಾರಿ ನೌಕರರಿಗೆ ಬೋನಸ್ ಸಿಗಲಿದ್ದು, ದೀಪಾವಳಿಗೂ ಮುನ್ನವೇ ಈ ನೌಕರರಲ್ಲಿ ಸಂತಸದ ಅಲೆ ಎದ್ದಿದೆ. ಸರ್ಕಾರದಿಂದ ಬೋನಸ್ ಕೂಡ ಘೋಷಿಸಿದೆ.


COMMERCIAL BREAK
SCROLL TO CONTINUE READING

ಅನುಮೋದನೆ ನೀಡಿದ ಸರ್ಕಾರ 


ಭಾರತೀಯ ರೈಲ್ವೆಯ ಉದ್ಯೋಗಿಗಳು 2022 ರ ಬೋನಸ್ ಅನ್ನು ದಸರಾ ರಜಾದಿನಗಳ ಪ್ರಾರಂಭದ ಮೊದಲು ಪಡೆಯಲಿದ್ದಾರೆ. ಅಕ್ಟೋಬರ್ 1 ರ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಬೋನಸ್ ಅನ್ನು ಅನುಮೋದಿಸಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಈ ಬಗ್ಗೆ ರೈಲ್ವೇ ಸಚಿವಾಲಯವೂ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.


ಇದನ್ನೂ ಓದಿ : Free Ration : ಪಡಿತರ ಚೀಟಿದಾರರಿಗೆ ಗಮನಕೆ : ನಿಮಗಾಗಿ ಇಲ್ಲಿದೆ ಮಹತ್ವದ ಮಾಹಿತಿ


ನೌಕರರಿಗೆ 78 ದಿನಗಳ ಬೋನಸ್


ರೈಲ್ವೆ ನೌಕರರಿಗೆ ಈ ಬೋನಸ್ ಸಿಗಲಿದೆ. 2021-22ರ ಹಣಕಾಸು ವರ್ಷಕ್ಕೆ, ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ ಗೆಜೆಟೆಡ್ ಅಲ್ಲದ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆ ಲಿಂಕ್ಡ್ ಬೋನಸ್ (ಪಿಎಲ್‌ಬಿ) ಪಾವತಿಸಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.


ಇದರಿಂದ ಅನೇಕರಿಗೆ ಪ್ರಯೋಜನ


ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಸುಮಾರು 11.27 ಲಕ್ಷ ಗೆಜೆಟೆಡ್ ಅಲ್ಲದ ರೈಲ್ವೆ ಉದ್ಯೋಗಿಗಳು ಈ ನಿರ್ಧಾರದಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ಪ್ರತಿ ಅರ್ಹ ಗೆಜೆಟೆಡ್ ಅಲ್ಲದ ರೈಲ್ವೆ ಉದ್ಯೋಗಿಗೆ 78 ದಿನಗಳವರೆಗೆ ಪಾವತಿಸಬೇಕಾದ ಬೋನಸ್‌ನ ಗರಿಷ್ಠ ಮೊತ್ತ 17951 ರೂ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.


ಇದನ್ನೂ ಓದಿ : Free Ration : ಉಚಿತ ಪಡಿತರ ತೆಗೆದುಕೊಳ್ಳುವವರಿಗೆ ಸಿಹಿ ಸುದ್ದಿ : ಕೇಂದ್ರದಿಂದ ಕೋಟ್ಯಂತರ ಜನರಿಗೆ ನೇರ ಲಾಭ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.