Indian Railway Waiting And RAC Ticket Rule Changed: ಸಾಮಾನ್ಯವಾಗಿ ನೀವು ಬುಕ್ ಮಾಡಿದ ನಿಮ್ಮ ವೇಟಿಂಗ್ ಟಿಕೆಟ್ ಕನ್ಫರ್ಮ್ ಆಗದೇ ಇದ್ದ ಹಲವಾರು ಸಂದರ್ಭಗಳು ನಿಮಗೆ ಎದುರಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಆ ಟಿಕೆಟ್ ಅನ್ನು ರೈಲ್ವೇ ರದ್ದು ಮಾಡುತ್ತದೆ. ಟಿಕೆಟ್ ರದ್ದತಿಯ ಹೆಸರಿನಲ್ಲಿ ಪ್ರಯಾಣಿಕರಿಂದ ಸೌಕರ್ಯ ಶುಲ್ಕದ ಹೆಸರಿನಲ್ಲಿ ಭಾರಿ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ವೇಟಿಂಗ್ ಮತ್ತು RAC ಟಿಕೆಟ್‌ಗಳ ಈ ನಿಯಮಕ್ಕೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ಇದೀಗ ಪ್ರಯಾಣಿಕರು ವೇಟಿಂಗ್ ಅಥವಾ RAC ಟಿಕೆಟ್‌ಗಳ ರದ್ದತಿಗಾಗಿ ಭಾರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Indian Railways: ಇನ್ಮುಂದೆ ಈ ರೈಲಿನಲ್ಲಿ ಕೇವಲ 500ml ಉಚಿತ ನೀರು ಮಾತ್ರ ಸಿಗಲಿದೆ!


ನಿಯಮವನ್ನು ಬದಲಾಯಿಸಿದ ರೇಲ್ವೆ
ರೈಲ್ವೇ ತನ್ನ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದ್ದು, RAC ಟಿಕೆಟ್‌ಗಳ ಕಾಯುವಿಕೆ ಮತ್ತು ರದ್ದತಿಗೆ ಹೆಚ್ಚುವರಿ ಶುಲ್ಕಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಅಂದರೆ, ನೀವು ವೇಟಿಂಗ್ ಟಿಕೆಟ್ ಅನ್ನು ರದ್ದುಗೊಳಿಸಿದರೆ ಅಥವಾ ಅದನ್ನು ಕ್ಯಾನ್ಸೆಲ್ ಮಾಡಿದರೆ , ಸೌಕರ್ಯ ಶುಲ್ಕದ ಹೆಸರಿನಲ್ಲಿ ನಿಮಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ರೈಲ್ವೆಯ ಹೊಸ ನಿಯಮಗಳ ಪ್ರಕಾರ, ಈಗ ಟಿಕೆಟ್ ರದ್ದುಗೊಳಿಸಲು ಪ್ರಯಾಣಿಕರಿಂದ ಕೇವಲ 60 ರೂ. ಪಡೆಯಲಾಗುವುದು ಎನ್ನಲಾಗಿದೆ.


ಇದನ್ನೂ ಓದಿ-EPFO ಖಾತೆಗೆ ಯಾವಾಗ ಬರುತ್ತೆ PF ಬಡ್ಡಿ, ಇಪಿಎಫ್ಓ ನೀಡಿದ ಮಾಹಿತಿ ಇಲ್ಲಿದೆ!


ಏಕೆ ಈ ಬದಲಾವಣೆ
ವಾಸ್ತವದಲಿ, ಜಾರ್ಖಂಡ್ ಸಾಮಾಜಿಕ ಕಾರ್ಯಕರ್ತ ಸುನೀಲ್ ಕುಮಾರ್ ಖಂಡೇಲ್ವಾಲ್ ಅವರು ವೇಟಿಂಗ್ ಟಿಕೆಟ್‌ಗಳನ್ನು ರದ್ದುಗೊಳಿಸಲು ರೈಲ್ವೆಯಿಂದ ಭಾರಿ ಮೊತ್ತವನ್ನು ವಿಧಿಸುವ ಬಗ್ಗೆ ದೂರು ನೀಡಿದ್ದರು. ಟಿಕೆಟ್ ರದ್ದತಿ ಶುಲ್ಕದ ಹೆಸರಲ್ಲಿ ರೈಲ್ವೇ ಭಾರೀ ಮೊತ್ತ ಗಳಿಸುತ್ತಿದೆ ಎಂದು ಅವರು ದೂರಿದ್ದರು. ಪ್ರಯಾಣಿಕನೊಬ್ಬ 190 ರೂ.ಗೆ ಟಿಕೆಟ್ ಖರೀದಿಸಿದ್ದನ್ನು ಉದಾಹರಣೆ ಸಹಿತ ಅವರು ವಿವರಿಸಿದ್ದರು. ಅದು ವೇಟಿಂಗ್ ಟಿಕೆಟ್ ಆಗಿದ್ದು, ಕನ್ಫರ್ಮ್ ಆಗದಿದ್ದಲ್ಲಿ ರೈಲ್ವೇಯಿಂದಲೇ ಕ್ಯಾನ್ಸಲ್ ಮಾಡಲಾಗಿತ್ತು. ರೈಲ್ವೇ ಟಿಕೆಟ್ ರದ್ದುಗೊಳಿಸಿದ ನಂತರ, ಅವರಿಗೆ ಕೇವಲ 95 ರೂಗಳನ್ನು ವಾಪಸ್ ಬಂದಿವೆ, ಉಳಿದ ಹಣವನ್ನು ಸೌಕರ್ಯ ಶುಲ್ಕದ ಹೆಸರಿನಲ್ಲಿ ವಸೂಲಿ ಮಾಡಲಾಗಿದೆ. ಈ ದೂರಿನ ನಂತರ, IRCTC ಮತ್ತು ರೈಲ್ವೆಗಳು ತಮ್ಮ ನಿರ್ಧಾರವನ್ನು ಬದಲಾಯಿಸಿವೆ. ಇಂತಹ ಟಿಕೆಟ್‌ಗಳಿಗೆ ರೈಲ್ವೆ ನಿಗದಿಪಡಿಸಿದ ಪ್ರತಿ ಟಿಕೆಟ್ 60 ರೂಪಾಯಿಗಳ ರದ್ದತಿ ಶುಲ್ಕವನ್ನು ಮಾತ್ರ ವಿಧಿಸಲಾಗುವುದು ಎಂದು ರೈಲ್ವೆ ತಿಳಿಸಿದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.