ನವದೆಹಲಿ : ಭಾರತೀಯ ರೈಲ್ವೇ (Indian Railway) ರೈಲಿನಲ್ಲಿ ಪ್ರಯಾಣಿಸುವಾಗ ಹಿರಿಯ ನಾಗರಿಕರಿಗೆ ಲೋವರ್ ಬರ್ತ್‌ (lower berth for senior citizen) ನೀಡುವಲ್ಲಿ ಆದ್ಯತೆ ನೀಡಲಾಗುತ್ತದೆ. ಆದರೆ, ಕೆಲವೊಮ್ಮೆ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ,  ಮನವಿ ಮಾಡಿದ ನಂತರವೂ ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ಸಿಗದ ಸಂದರ್ಭಗಳು ಕೂಡಾ ಎದುರಾಗುತ್ತವೆ. ಹೀಗಾದಾಗ ಹಿರಿಯ ನಾಗರೀಕರಿಗೆ  ಪ್ರಯಾಣಿಸುವುದು ಕಷ್ಟವಾಗುತ್ತದೆ. ಆದರೆ, ಈಗ ಲೋವರ್ ಬರ್ತ್ ಅನ್ನು  ಕನ್ಫರ್ಮ್ ಮಾಡಿಕೊಳ್ಳಬಹುದು.  


COMMERCIAL BREAK
SCROLL TO CONTINUE READING

ಹಿರಿಯ ನಾಗರಿಕರಿಗೆ  ಸಿಗಲಿದೆ ಲೋವರ್ ಬರ್ತ್ :
ಟ್ವಿಟರ್‌ನಲ್ಲಿ (Twitter), ಪ್ರಯಾಣಿಕರೊಬ್ಬರು ಭಾರತೀಯ ರೈಲ್ವೇಗೆ (Indian Railway) ಪ್ರಶ್ನೆಯೊಂದನ್ನು ಕೇಳಿದ್ದರು. ನಾನು ಮೂವರು ಹಿರಿಯ ನಾಗರಿಕರಿಗೆ ಟಿಕೆಟ್ ಕಾಯ್ದಿರಿಸಿದ್ದೇನೆ. ಆ ಸಂದರ್ಭದಲ್ಲಿ 102 ಬರ್ತ್‌ಗಳು ಲಭ್ಯವಿತ್ತು. ಆದರೂ ಅವರಿಗೆ ಮಿಡಲ್ ಬರ್ತ್, ಅಪ್ಪರ್ ಬರ್ತ್  ಮತ್ತು ಸೈಡ್ ಲೋವರ್ ಬರ್ತ್  ನೀಡಲಾಗಿದೆ.  ಸೀಟು ಹಂಚಿಕೆಯನ್ನು ಯಾವ ಆಧಾರದ ಮೇಲೆ ಮಾಡಲಾಗುತ್ತದೆ ಎಂದು ಪ್ರಶ್ನಿಸಿದ್ದರು. ಹೀಗಾಗುವುದನ್ನು ತಪ್ಪಿಸಬೇಕು ಎಂದು ಹೇಳಿದ್ದರು. . ಟಿಕೆಟ್ ಅನ್ನು ಈ ರೀತಿ ಹಂಚುವ ಕ್ರಮ ಬದಲಾಗಬೇಕು ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ, ಈ ಟ್ವೀಟ್ ಅನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwin Vaishnaw) ಅವರನ್ನು ಟ್ಯಾಗ್ ಮಾಡಿದ್ದರು.  


Ola E Scooter: ಓಲಾ ಇ ಸ್ಕೂಟರ್‌ನ ಮುಂದಿನ ಬುಕಿಂಗ್ ಯಾವಾಗ ಪ್ರಾರಂಭವಾಗುತ್ತೆ! ಇಲ್ಲಿದೆ ಮಾಹಿತಿ


IRCTC ಯ ಉತ್ತರವೇನು?
ಈ ಪ್ರಶ್ನೆಗೆ ಆರ್‌ಸಿಟಿಸಿ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದೆ. IRCTC ಉತ್ತರಿಸಿದೆ. 60 ವರ್ಷ ಮೇಲ್ಫಟ್ಟ ಪುರುಷ ಪ್ರಯಾಣಿಕರು ಮತ್ತು 45 ವರ್ಷ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಲೋವರ್ ಬರ್ತ್ ಮೀಸಲಿಡಲಾಗುತ್ತದೆ.  ಅವರು ಒಂಟಿಯಾಗಿ ಅಥವಾ ಇಬ್ಬರು ಪ್ರಯಾಣಿಸುವಾಗ ಇದನ್ನು ಪರಿಗಣಿಸಲಾಗುತ್ತದೆ. ಆದರೆ ಇಬ್ಬರಿಗಿಂತ ಹೆಚ್ಚಿನವರಿಗೆ ಟಿಕೆಟ್ ಬುಕ್ ಮಾಡುವಾಗ ಅದರಲ್ಲಿ ಇಬ್ಬರು ಹಿರಿಯ ನಾಗರೀಕರಾಗಿದ್ದು, ಒಬ್ಬರು ಹಿರಿಯ ನಾಗರೀಕರಲ್ಲದಿದ್ದರೆ ಸಿಸ್ಟಮ್ ಇದನ್ನು ಪರಿಗಣಿಸುವುದಿಲ್ಲ ಎಂದು  IRCTC ಹೇಳಿದೆ. 


Bank Holidays : ನಾಳೆಯಿಂದ 5 ದಿನಗಳವರೆಗೆ ಬ್ಯಾಂಕ್ ರಜೆ, ಇಂದೇ ಪೂರೈಸಿಕೊಳ್ಳಿ ನಿಮ್ಮೆಲ್ಲಾ ಕೆಲಸ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.