Indian Railways: ದೂರದ ಪ್ರದೇಶಗಳಿಗೆ ಆರಾಮದಾಯಕ ಪ್ರಯಾಣಕ್ಕಾಗಿ ಭಾರತೀಯ ರೈಲ್ವೆ ಅತ್ಯುತ್ತಮ ಆಯ್ಕೆಯಾಗಿದೆ. ಮಾತ್ರವಲ್ಲ, ಇದು ಆರ್ಥಿಕವಾಗಿಯೂ ಕೂಡ ಹೆಚ್ಚು ಲಾಭದಾಯವಾಗಿದೆ. ಹಾಗಾಗಿ, ದೂರದ ಊರುಗಳಿಗೆ ಪ್ರಯಾಣಿಸಲು ಜನರು ರೈಲ್ವೇ ಪ್ರಯಾಣವನ್ನು ಆಯ್ಕೆ ಮಾಡುತ್ತಾರೆ. ಅಷ್ಟೇ ಅಲ್ಲ, ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳಿಗಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ, ಇಲ್ಲವೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯ ಪ್ರಯಾಣಿಸಲು ಕೂಡ ರೈಲಿನ ಒಂದೆರಡು ಕೋಚ್‌ಗಳನ್ನು (ಪ್ರಯಾಣಿಕರಿಗೆ ಅಗತ್ಯವಿದ್ದಷ್ಟು ಕೋಚ್‌ಗಳನ್ನು) ಬುಕ್ ಮಾಡಬಹುದು.  ನಿಮಗೆ ಬೇಕೆಂದರೆ ಇಡೀ ಟ್ರೈನ್ ಅನ್ನೇ ಬುಕ್ ಮಾಡಬಹುದು. ಇದನ್ನು ಚಾರ್ಟರ್ ರೈಲು ಎಂತಲೂ ಕರೆಯಲಾಗುತ್ತದೆ. 


COMMERCIAL BREAK
SCROLL TO CONTINUE READING

ಹೌದು, ಭಾರತೀಯ ರೈಲ್ವೆ ಸಾರ್ವಜನಿಕರಿಗೆ ಇಂತಹದೊಂದು ಅನುಕೂಲವನ್ನು ಸಹ ಕಲ್ಪಿಸಿದೆ. ಸಾಮಾನ್ಯವಾಗಿ ಜನರು ಮದುವೆಯಂತಹ ಸಮಾರಂಭಗಳಿಗೆ ದೂರದ ಊರುಗಳಿಗೆ ಪ್ರಯಾಣಿಸಲು ಫುಲ್ ಟ್ರೈನ್ ಅನ್ನೇ ಬುಕ್ ಮಾಡಿ, ಇಡೀ ರೈಲನ್ನು ಅಲಂಕರಿಸಿ ಮದುವೆಯ ದಿಬ್ಬಣ ಹೋರಾಡುತ್ತಾರೆ. ಆದರೆ, ಸಂಪೂರ್ಣ ರೈಲನ್ನು ಬುಕ್ ಮಾಡಲು ಎಷ್ಟು ವೆಚ್ಚವಾಗುತ್ತದೆ, ಎಷ್ಟು ದಿನಗಳ ಮೊದಲು ಟ್ರೈನ್ ಬುಕಿಂಗ್ ಮಾಡಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ. 


ಐ‌ಆರ್‌ಸಿ‌ಟಿ‌ಸಿ ಎಫ್‌ಟಿ‌ಆರ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಬುಕಿಂಗ್: 
ವಾಸ್ತವವಾಗಿ, ಭಾರತೀಯ ನಾಗರೀಕರು ಚಾರ್ಟರ್ ರೈಲು ಅಥವಾ ಕೋಚ್‌ನ್ನು ಐ‌ಆರ್‌ಸಿ‌ಟಿ‌ಸಿ ಎಫ್‌ಟಿ‌ಆರ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಬುಕಿಂಗ್ ಮಾಡಬಹುದು. ಈ ಚಾರ್ಟರ್ ರೈಲುಗಳಿಗೆ ಭಾರತದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗಿದೆ. ಆದರೆ ನೀವು ಇಡೀ ರೈಲ್ ಬುಕ್ ಮಾಡದೆ ಕೇವಲ ನಿಮಗೆ ಅಗತ್ಯವಿದ್ದಷ್ಟು ಕೋಚ್‌ಗಳನ್ನು ಮಾತ್ರ ಬುಕ್ ಮಾಡಿದ್ದರೆ ರೈಲಿನ ನಿಲುಗಡೆ 10 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ಇರುವ ನಿಲ್ದಾಣಗಳಲ್ಲಿ ಮಾತ್ರ ಚಾರ್ಟರ್ಡ್ ಕೋಚ್‌ಗಳನ್ನು ಲಗತ್ತಿಸಬಹುದು ಅಥವಾ ಬೇರ್ಪಡಿಸಬಹುದು. ಹಾಗಾಗಿ ಎಲ್ಲಾ ರೈಲುಗಳಲ್ಲಿ ಬೋಗಿಗಳನ್ನು ಅಳವಡಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನೂ ನೆನಪಿನಲ್ಲಿಡಿ. 


ಇದನ್ನೂ ಓದಿ- Pakistan: ಈ 10 ವಿಷಯಗಳಲ್ಲಿ ಉಳಿದೆಲ್ಲಾ ದೇಶಗಳಿಗಿಂತ ಮುಂದಿದೆ ಪಾಕಿಸ್ತಾನ


ಎಷ್ಟು ದಿನಗಳ ಮೊದಲು ಬುಕ್ ಮಾಡಬೇಕು: 
ಭಾರತೀಯ ರೈಲ್ವೆ ಪ್ರಕಾರ, ಗರಿಷ್ಠ ಆರು ತಿಂಗಳುಗಳ ಮೊದಲುಎಫ್‌ಟಿ‌ಆರ್ ನೋಂದಣಿ ಮಾಡಬೇಕು. ಆದಾಗ್ಯೂ, ನಿಮ್ಮ ಪ್ರಯಾಣದ ಕನಿಷ್ಠ ತಿಂಗಳ ಮೊದಲು ಅರ್ಥಾತ್ 30 ದಿನಗಳ ಮೊದಲು ನೀವು ಚಾರ್ಟಡ್ ರೈಲನ್ನು ಬುಕ್ ಮಾಡಬಹುದು. 


ಕೋಚ್ ಬುಕ್ಕಿಂಗ್ ನಿಯಮ: 
ನೀವು ರೈಲಿನಲ್ಲಿ ಕೋಚ್‌ಗಳನ್ನು ಮಾತ್ರ ಬುಕ್ ಮಾಡಲು ಬಯಸಿದರೆ ತಾಂತ್ರಿಕ ಕಾರ್ಯಸಾಧ್ಯತೆಗಳನ್ನು ಅವಲಂಬಿಸಿ ರೈಲಿನಲ್ಲಿ ಎಫ್‌ಟಿಆರ್‌ನಲ್ಲಿ ಗರಿಷ್ಠ 2 ಕೋಚ್‌ಗಳನ್ನು ಮಾತ್ರ ಕಾಯ್ದಿರಿಸಲು ಸಾಧ್ಯವಾಗುತ್ತದೆ. 


ಸಂಪೂರ್ಣ ಟ್ರೈನ್ ಬುಕ್ಕಿಂಗ್: 
ಒಂದೊಮ್ಮೆ ನೀವು ಇಡೀ ಟ್ರೈನ್ ಅನ್ನು ಬುಕ್ ಮಾಡಲು ಇಚ್ಛಿಸಿದರೆ ಮೂಲಭೂತವಾಗಿ 2 SLR ಕೋಚ್‌ಗಳು/ಜನರೇಟರ್ ಕಾರುಗಳನ್ನು ಒಳಗೊಂಡಂತೆ ನೀವು ಎಫ್‌ಟಿ‌ಆರ್ ನಲ್ಲಿ ಗರಿಷ್ಠ 24 ಕೋಚ್‌ಗಳನ್ನು ಬುಕ್ ಮಾಡಬಹುದು. ನಿಮಗೆ ಅಷ್ಟು ಕೋಚ್‌ಗಳ ಅಗತ್ಯವಿಲ್ಲದಿದ್ದರೆ ಕನಿಷ್ಠ 18 ಕೋಚ್‌ಗಳನ್ನು  ಬುಕ್ ಮಾಡಬೇಕಾಗುತ್ತದೆ. 


ಇದನ್ನೂ ಓದಿ- ಯುಪಿಐ ತಪ್ಪು ವಹಿವಾಟು ನಡೆದಾಗ ಏನು ಮಾಡಬೇಕು? ಚಿಟಿಕೆ ಹೊಡೆಯೋದ್ರಲ್ಲಿ ಈ ರೀತಿ ಹಣ ವಾಪಸ್ ಪಡೆಯಿರಿ!


ಇಡೀ ಟ್ರೈನ್ ಬುಕ್ ಮಾಡಲು ಎಷ್ಟು ವೆಚ್ಚವಾಗುತ್ತೆ: 
ನೀವು ಟ್ರೈನ್ ಬುಕ್ಕಿಂಗ ಮಾಡಲು ಬಯಸಿದರೆ ಮೊದಲು  ಆನ್‌ಲೈನ್ ಫಾರ್ಮ್‌ನಲ್ಲಿ ಕೋಚ್‌ಗಳ ಪ್ರಯಾಣದ ವಿವರಗಳು, ಮಾರ್ಗ ಮತ್ತು ಇತರ ವಿವರಗಳನ್ನು ನೋಂದಣಿ ಮಾಡಬೇಕಾಗುತ್ತದೆ. ನಂತರ ಪ್ರತಿ ಕೋಚ್‌ಗೆ ರೂ 50,000/- ಭದ್ರತಾ ಠೇವಣಿಯನ್ನು ಪಾವತಿಸಬೇಕಾಗುತ್ತದೆ. ಒಂದೊಮ್ಮೆ ನೀವು ಸಂಪೂರ್ಣ ಟ್ರೈನ್ ಬುಕ್ ಮಾಡುವಾಗ  18ಕ್ಕಿಂತ ಕಡಿಮೆ ಕೋಚ್‌ಗಳನ್ನು ಬುಕ್ ಮಾಡಲು  ಬಯಸಿದರೂ ಸಹ ನೋಂದಣಿ ಮೊತ್ತವನ್ನು 18 ಬೋಗಿಗಳಿಗೆ (ಅಂದರೆ 9 ಲಕ್ಷ ರೂ.) ಪಾವತಿಸಬೇಕಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.