ನವದೆಹಲಿ: Indian Railways Update - ಭಾರತೀಯ ರೈಲ್ವೇ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಕಾಲಕಾಲಕ್ಕೆ ಹಲವು ಸೇವೆಗಳನ್ನು ನೀಡುತ್ತಲೇ ಇರುತ್ತದೆ. ರೈಲಿನಲ್ಲಿ ಪ್ರಯಾಣಿಸುವಾಗ ಹಿರಿಯ ನಾಗರಿಕರಿಗೆ ಕೆಳ ಬರ್ತ್‌ಗೆ ಆದ್ಯತೆ ನೀಡಲಾಗುತ್ತದೆ. ಆದರೆ ಪದೇ ಪದೇ ವಿನಂತಿಸಿದರೂ (Online Ticket booking), ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ಸಿಗುವುದಿಲ್ಲ. ಇದರಿಂದ ಅವರು ಪ್ರಯಾಣಿಸಲು ಕಷ್ಟವಾಗುತ್ತಿದೆ. ಆದರೆ ಇದೀಗ ಭಾರತೀಯ ರೈಲ್ವೇಯು ನೀವು ಕನ್ಫರ್ಮ್ ಲೋವರ್ ಬರ್ತ್(Confirm Railway Ticket) ಅನ್ನು ಹೇಗೆ ಪಡೆಯಬಹುದು ಎಂಬುದರ ಕುರಿತು ಮಾಹಿತಿ ನೀಡಿದೆ. 


COMMERCIAL BREAK
SCROLL TO CONTINUE READING

ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ಸಿಗಲಿದೆ
IRCTC Ticket Booking - ಇತ್ತೀಚೆಗೆ, ಭಾರತೀಯ ರೈಲ್ವೆಯ ಪ್ರಯಾಣಿಕರೊಬ್ಬರು ಟ್ವಿಟರ್‌ನಲ್ಲಿ ಈ ಕುರಿತು ಪ್ರಶ್ನೆಯೊಂದನ್ನು ಕೇಳಿ, ಈ ರೀತಿ ಯಾಕಿದೆ ಮತ್ತು ಅದನ್ನು ಸರಿಪಡಿಸಬೇಕು ಎಂದು ಹೇಳಿದ್ದಾರೆ.   ರೆಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಟ್ಯಾಗ್ ಮಾಡಿ ಪ್ರಶ್ನೆಯನ್ನು ಕೇಳಿದ ಯಾತ್ರಿ , ಸೀಟು ಹಂಚಿಕೆ ಮಾಡುವ ಹಿಂದೆ ಯಾವ ತರ್ಕವಿದೆ? ನಾನು ಮೂವರು ಹಿರಿಯ ನಾಗರಿಕರಿಗೆ ಲೋವರ್ ಬರ್ತ್ (Lower Berth Book) ಆದ್ಯತೆಯ ಟಿಕೆಟ್‌ಗಳನ್ನು ಬುಕ್ ಮಾಡಿದ್ದೆ. ಆಗ  102 ಬರ್ತ್‌ಗಳು ಲಭ್ಯವಿದ್ದವು. ಇದರ ಹೊರತಾಗಿಯೂ ಅವರಿಗೆ  ಮಿಡಲ್ ಬರ್ತ್, ಮೇಲಿನ ಬರ್ತ್ ಮತ್ತು . ಸೈಡ್ ಲೋವರ್ ಬರ್ತ್ ನೀಡಲಾಗಿದೆ. ನೀವು  ಇದನ್ನು ಸರಿಪಡಿಸಬೇಕು ಎಂದು ಹೇಳಿದ್ದಾರೆ. 


ಇದನ್ನೂ ಓದಿ-Indian Railways Big Descision: ಇನ್ಮುಂದೆ ಯಾರು ಬೇಕಾದರೂ ಕೂಡ ಬಾಡಿಗೆಯ ರೂಪದಲ್ಲಿ ರೈಲನ್ನು ಚಲಾಯಿಸಬಹುದು


@IRCTCofficial what logic do you run for seat allocation, I had booked tickets for 3 senior citizens with preference of lower berth , there are 102 berths available, yet allocated berths are middle, upper and side lower. U need to correct same.@AshwiniVaishnaw


— jitendra S (@jitendrasarda) September 11, 2021


IRCTC ನೀಡಿದ ಉತ್ತರ ಇಲ್ಲಿದೆ
ಪ್ರಯಾಣಿಕರ ಈ ಪ್ರಶ್ನೆಗೆ IRCTC ಟ್ವಿಟ್ಟರ್ ಉತ್ತರ ನೀಡಿದೆ. IRCTC ಹೇಳಿದೆ- ಸರ್, ಲೋವರ್ ಬರ್ತ್‌ಗಳು/ಹಿರಿಯ ನಾಗರಿಕರ ಕೋಟಾದ ಬರ್ತ್‌ಗಳು 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ, 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳಾ ವಯಸ್ಸಿನವರಿಗೆ ಆದ್ಯತೆಯ ಬರ್ತ್‌ಗಳಾಗಿವೆ ಮಾತು ಅವರು ಒಬ್ಬರೇ ಅಥವಾ ಇಬ್ಬರು ಪ್ರಯಾಣಿಕರಾಗಿ (ಒಂದೇ ಟಿಕೆಟ್‌ನಲ್ಲಿ ಪ್ರಯಾಣಿಸುವ ನಿಯಮಗಳು) ಅಡಿಯಲ್ಲಿ) ಯಾತ್ರೆ ನಡೆಸುತ್ತಿರಬೇಕು. ಇಬ್ಬರಿಗಿಂತ ಹೆಚ್ಚು ಹಿರಿಯ ನಾಗರಿಕರಿದ್ದರೆ ಅಥವಾ ಒಬ್ಬರು ಹಿರಿಯ ನಾಗರಿಕರಾಗಿದ್ದರೆ ಮತ್ತು ಇನ್ನೊಬ್ಬರು ಹಿರಿಯ ನಾಗರಿಕರಲ್ಲದಿದ್ದರೆ, ವ್ಯವಸ್ಥೆಯು ಅದನ್ನು ಪರಿಗಣಿಸುವುದಿಲ್ಲ ಎಂದು IRCTC ಹೇಳಿದೆ.


ಇದನ್ನೂ ಓದಿ-ಕೊರೊನಾದಿಂದ ರೈಲುಗಳಲ್ಲಿ ಸ್ಥಗಿತಗೊಂಡಿದ್ದ ಆಹಾರ ಸೇವೆ ಆರಂಭಿಸಲು ರೈಲ್ವೆ ಇಲಾಖೆ ಸೂಚನೆ


Sir, Lower berth/Sr. Citizen quota berths are lower berths earmarked only for male age of 60 years and above/female age of 45 years and above, when traveling alone or two passengers ( under mentioned criteria traveling on one ticket. 1/2


-IRCTC Official


— Indian Railways Seva (@RailwaySeva) September 11, 2021


ಹಿರಿಯ ನಾಗರಿಕರಿಗೆ ರಿಯಾಯಿತಿಗಳು ಯಾವಾಗ?
ಕರೋನವೈರಸ್ ಸಾಂಕ್ರಾಮಿಕದ ದೃಷ್ಟಿಯಿಂದ ಅನಿವಾರ್ಯವಲ್ಲದ ಪ್ರಯಾಣವನ್ನು ನಿರುತ್ಸಾಹಗೊಳಿಸಲು ಭಾರತೀಯ ರೈಲ್ವೆ ಕಳೆದ ವರ್ಷ ಹಿರಿಯ ನಾಗರಿಕರು ಸೇರಿದಂತೆ ಹಲವಾರು ವರ್ಗದ ಜನರಿಗೆ ರಿಯಾಯಿತಿ ಟಿಕೆಟ್‌ಗಳನ್ನು ಸ್ಥಗಿತಗೊಳಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಈ ವರ್ಗದಲ್ಲಿ ಕೋವಿಡ್-19 ವೈರಸ್‌ ಹರಡುವ ಮತ್ತು ಸಾವಿನ ಅಪಾಯವು ಜಾಸ್ತಿ ಇರುವುವರಿಂದ ಹಿರಿಯ ನಾಗರಿಕರಿಗೆ ರಿಯಾಯಿತಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಹೇಳಿದೆ.
ಇದನ್ನೂ ಓದಿ-Indian Railways : ಟಿಕೆಟ್ ಇಲ್ಲದೆಯೂ ರೈಲು ಪ್ರಯಾಣ ಸಾಧ್ಯ , ತಿಳಿಯಿರಿ ಏನು ಹೇಳುತ್ತದೆ ರೈಲ್ವೆಯ ಹೊಸ ನಿಯಮ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ