ನವದೆಹಲಿ: ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ದೊರೆತಿದೆ. ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣದ ಅನುಭವವನ್ನು ಉತ್ತಮಗೊಳಿಸಲು ಸಾಮಾನ್ಯ ಕೋಚ್ ಪ್ರಯಾಣಿಕರಿಗೆ ವಿಶೇಷವಾಗಿ ಕೈಗೆಟುಕುವ ದರದಲ್ಲಿ ಊಟ ಮತ್ತು ಪ್ಯಾಕೇಜ್ಡ್ ನೀರನ್ನು ನೀಡಲು ನಿರ್ಧರಿಸಿದೆ. ರೈಲ್ವೆ ಮಂಡಳಿಯು ಹೊರಡಿಸಿರುವ ಆದೇಶದ ಪ್ರಕಾರ, ಈ ಊಟಗಳನ್ನು ಪೂರೈಸುವ ಕೌಂಟರ್‌ಗಳನ್ನು ಸಾಮಾನ್ಯ ಕೋಚ್‌ಗಳಿಗೆ ಹೊಂದಿಕೆಯಾಗುವ ಪ್ಲಾಟ್‌ಫಾರ್ಮ್‌ಗಳಲ್ಲಿ ಇರಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಹೌದು, ಇನ್ಮುಂದೆ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಜನರು ಆಹಾರ ಮತ್ತು ಪಾನೀಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಲ್ದಾಣದ ಪ್ಲಾಟ್ ಫಾರ್ಮ್‍ನಲ್ಲಿ ಸಾಮಾನ್ಯ ಬೋಗಿಯ ಮುಂದೆ ‘ಎಕಾನಮಿ ಮೀಲ್ಸ್’ ಸ್ಟಾಲ್ ಸ್ಥಾಪಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಜನರು ಆಹಾರ ಮತ್ತು ಪಾನೀಯಕ್ಕಾಗಿ ನಿಲ್ದಾಣದಲ್ಲಿ ಅಲೆದಾಡಬೇಕಾಗುತ್ತದೆ. ಹೀಗಾಗಿ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಎಕಾನಮಿ ದರದಲ್ಲಿ ಊಟ ಮತ್ತು ತಿಂಡಿಯನ್ನು ನೀಡಲು ನಿರ್ಧರಿಸಿದೆ.


ಇದನ್ನೂ ಓದಿ: ಸ್ವಂತ ಮನೆಯ ಕನಸು ನನಸಾಗುವುದು ! ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಮನೆಗಳನ್ನು ಮಾರಾಟ ಮಾಡುತ್ತಿದೆ PNB!


ಜೂನ್ 27ರಂದು ರೈಲ್ವೆ ಮಂಡಳಿಯು ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಹೊರಡಿಸಿದ ಪತ್ರದಲ್ಲಿ, ಸಾಮಾನ್ಯ ಬೋಗಿಗಳ ಬಳಿಯ ಪ್ಲಾಟ್‌ಫಾರ್ಮ್‍ನಲ್ಲಿ ಎಕಾನಮಿ ಊಟ ಮತ್ತು ತಿಂಡಿಯನ್ನು ಒದಗಿಸಲು ಸೂಚಿಸಲಾಗಿದೆ. ಇದಕ್ಕಾಗಿ ವಿಶೇಷ ಕೌಂಟರ್‍ಗಳನ್ನು ತೆರೆಯಲಾಗುತ್ತಿದ್ದು, ಈ ಸ್ಥಳವನ್ನು ವಲಯ ರೈಲ್ವೆ ನಿರ್ಧರಿಸಲಿದೆ ಎಂದು ಹೇಳಲಾಗಿದೆ.


20 ರೂ.ಗೆ ಪುರಿ, ತರಕಾರಿ & ಉಪ್ಪಿನಕಾಯಿ


ರೈಲ್ವೆ ಇಲಾಖೆ ನಿಗದಿಪಡಿಸಿದ ಕ್ಯಾಟರಿಂಗ್ ಬೆಲೆಯ ಪ್ರಕಾರ, ಪ್ರಯಾಣಿಕರಿಗೆ 20 ರೂ.ಗೆ 7 ಪುರಿ, 150 ಗ್ರಾಂ ತರಕಾರಿ ಮತ್ತು ಉಪ್ಪಿನಕಾಯಿ ಪ್ಯಾಕೆಟ್ ಸಿಗಲಿದೆ.  


2 ವಿಧದ ಊಟ ಸಿಗಲಿದೆ


ಊಟದ ಟೈಪ್ 1ರಲ್ಲಿ 20 ರೂ.ಗೆ 7 ಪುರಿ, ತರಕಾರಿ ಮತ್ತು ಉಪ್ಪಿನಕಾಯಿ ದೊರೆಯುತ್ತದೆ. ಟೈಪ್ 2 ಊಟಕ್ಕೆ 50 ರೂ. ಆಗಲಿದ್ದು, ಇದರಲ್ಲಿ 350 ಗ್ರಾಂ ತಿಂಡಿ, ಊಟ ಸಿಗುತ್ತದೆ. 50 ರೂ.ಗಳ ಉಪಾಹಾರದಲ್ಲಿ ನೀವು ರಾಜ್ಮಾ-ರೈಸ್, ಖಿಚ್ಡಿ, ಚೋಲೆ ಕುಲ್ಚೆ, ಚೋಲೆ ಭಾತುರೆ, ಪಾವ್ ಭಾಜಿ ಅಥವಾ ಮಸಾಲಾ ದೋಸೆ  ಸಿಗಲಿದೆ. ಇದಲ್ಲದೆ 3 ರೂ.ಗೆ 200MM ಪ್ಯಾಕೇಜ್ಡ್ ಡ್ರಿಕಿಂಗ್ ವಾಟರ್ ಲಭ್ಯವಿರುತ್ತವೆ.


GS ತರಬೇತುದಾರರು ಸಾಮಾನ್ಯ ಆಸನ ಕೋಚ್ ಅನ್ನು ಉಲ್ಲೇಖಿಸಿದ್ದಾರೆ. ಇದು 2ನೇ ದರ್ಜೆಯ ಕಾಯ್ದಿರಿಸದ ಕೋಚ್ ಆಗಿದೆ. ಸಾಮಾನ್ಯವಾಗಿ ಮೇಲ್/ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ಪ್ರತಿಯೊಂದು ರೈಲುಗಳು ಕನಿಷ್ಠ 2 ಜನರಲ್ ಕೋಚ್‌ಗಳನ್ನು ಇಂಜಿನ್ ಬಳಿ ಮತ್ತು ರೈಲಿನ ಕೊನೆಯಲ್ಲಿ ಒಂದನ್ನು ಹೊಂದಿರುತ್ತವೆ. ಕೌಂಟರ್‌ನಿಂದ ಖರೀದಿಸಿದ ಜನರಲ್/ಅನ್ ರಿಸರ್ವ್ ಟಿಕೆಟ್ ಹೊಂದಿರುವ ಯಾರಾದರೂ ಆ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಸಬಹುದು. ಐಆರ್‌ಸಿಟಿಸಿಯ ಅಡುಗೆ ಘಟಕಗಳಿಂದ (ರಿಫ್ರೆಶ್‌ಮೆಂಟ್ ರೂಮ್‌ಗಳು - ಆರ್‌ಆರ್‌ಗಳು ಮತ್ತು ಜನ ಆಹಾರಗಳು - ಜೆಎಗಳು) ಊಟವನ್ನು ಪೂರೈಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ಜುಲೈ ಅಂತ್ಯಕ್ಕೂ ಮುನ್ನವೇ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಈ ದಿನ ಹೆಚ್ಚಾಗಲಿದೆ ವೇತನ!


IRCTCಯ ಎಲ್ಲಾ ಸ್ಟಾಲ್‌ಗಳು ಮತ್ತು ಪ್ಯಾಂಟ್ರಿ ಕಾರುಗಳು 1 ಲೀಟರ್‌ನ ರೈಲ್ ನೀರಿನ ಬಾಟಲಿಯನ್ನು 15 ರೂ.ಗೆ ಮಾತ್ರ ಮಾರಾಟ ಮಾಡಬೇಕು ಎಂದು ಘೋಷಿಸಿದೆ. ಒಂದು ವೇಳೆ ಹೆಚ್ಚುವರಿ ಶುಲ್ಕ ವಿಧಿಸಿದರೆ, ಯಾವುದೇ ನಿಲ್ದಾಣದಲ್ಲಿ ಅಥವಾ ಆನ್‌ಲೈನ್‌ನಲ್ಲಿ ಪ್ರಯಾಣಿಕರು ದೂರು ದಾಖಲಿಸಬಹುದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.