ನವದೆಹಲಿ: ದೇಶದ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಶೇ.5.10ಕ್ಕೆ ಇಳಿದಿದೆ. ಇದು ೩ ತಿಂಗಳ ಕನಿಷ್ಠವಾಗಿದೆ. ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (NSO) ಸೋಮವಾರ ಬಿಡುಗಡೆ ಮಾಡಿದ ಇತ್ತೀಚಿನ ಡಾಟಾ ಪ್ರಕಾರ, ಆಹಾರ ಮತ್ತು ಪಾನೀಯಗಳ ಹಣದುಬ್ಬರವು ಜನವರಿಯಲ್ಲಿ ಶೇ.8.3ರಷ್ಟು ದಾಖಲಾಗಿದೆ.


COMMERCIAL BREAK
SCROLL TO CONTINUE READING

ಕಳೆದವಾರ ಇತ್ತೀಚಿನ RBI MPCಯಲ್ಲಿ, ಕೇಂದ್ರ ಬ್ಯಾಂಕ್ 2023-24ರ ಚಿಲ್ಲರೆ ಹಣದುಬ್ಬರವನ್ನು ಶೇ.5.4ಕ್ಕೆ ಅಂದಾಜಿಸಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ (Q4) ಅಂದಾಜನ್ನು ಹಿಂದಿನ ಶೇ.5.2ರಿಂದ ಶೇ.5ಕ್ಕೆ ಇಳಿಸಲಾಗಿದೆ. 2025ರ ಹಣಕಾಸು ವರ್ಷದಲ್ಲಿ ಹಣದುಬ್ಬರದ ಅಂದಾಜನ್ನು ಶೇ.4.5ಕ್ಕೆ ಇಳಿಸಲಾಗಿದ್ದು, ಮೊದಲ ತ್ರೈಮಾಸಿಕದಲ್ಲಿ ಶೇ.5, 2ನೇ ತ್ರೈಮಾಸಿಕದಲ್ಲಿ ಶೇ.4, 3ನೇ ತ್ರೈಮಾಸಿಕದಲ್ಲಿ ಶೇ.4.6 ಮತ್ತು 4ನೇ ತ್ರೈಮಾಸಿಕದಲ್ಲಿ ಶೇ.4.7 ಇರಲಿದೆ.


ಇದನ್ನೂ ಓದಿ: Cheapest Gold: ಇಂದಿನಿಂದ ಆರಂಭಗೊಂಡಿದೆ ಅಗ್ಗದ ದರದಲ್ಲಿ ಚಿನ್ನ ಮಾರಾಟದ ಯೋಜನೆ, ತ್ವರೆ ಮಾಡಿ ನಿಮ್ಮ ಬಳಿ ಕೇವಲ ಇಷ್ಟೇ ದಿನ ಬಾಕಿ ಇದೆ!


ಎಲ್ಲಾ ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಆಯ್ದ 1,114 ನಗರ ಮಾರುಕಟ್ಟೆಗಳು ಮತ್ತು 1,181 ಗ್ರಾಮಗಳಿಂದ NSO, MOSIN ಕ್ಷೇತ್ರ ಕಾರ್ಯಾಚರಣೆ ವಿಭಾಗದ ಕ್ಷೇತ್ರ ಸಿಬ್ಬಂದಿ ವೈಯಕ್ತಿಕ ಭೇಟಿಗಳ ಮೂಲಕ ವಾರದ ರೋಸ್ಟರ್‌ನಲ್ಲಿ ಬೆಲೆಯ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಜನವರಿ ತಿಂಗಳಲ್ಲಿ NSO ಶೇ.99.8ರಷ್ಟು ಹಳ್ಳಿಗಳು ಮತ್ತು ಶೇ.98.5ರಷ್ಟು ನಗರ ಮಾರುಕಟ್ಟೆಗಳಿಂದ ಬೆಲೆಗಳನ್ನು ಸಂಗ್ರಹಿಸಲಾಗಿದೆ.


ಈ ಪೈಕಿ ವರದಿಯಾದ ಮಾರುಕಟ್ಟೆವಾರು ಬೆಲೆಗಳು ಗ್ರಾಮೀಣ ಮಾರುಕಟ್ಟೆಗಳಿಗೆ ಶೇ.89.9 ಮತ್ತು ನಗರ ಪ್ರದೇಶಗಳಿಗೆ ಶೇ.93.6ರಷ್ಟಿದೆ. ಮತ್ತೊಂದೆಡೆ ಭಾರತದ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP) ಡಿಸೆಂಬರ್‌ನಲ್ಲಿ ಶೇ.3.8ರಷ್ಟು ಏರಿಕೆಯಾಗಿದೆ ಎಂದು NSO ಅಂಕಿಅಂಶಗಳು ತಿಳಿಸಿವೆ.


ಇದನ್ನೂ ಓದಿ: Good News: ಜನ ಸಾಮಾನ್ಯರಿಗೊಂದು ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.