ಭಾರತೀಯ ರೈಲ್ವೆಯಿಂದ ಡಿವೈನ್ ಕರ್ನಾಟಕ ಟೂರ್ ! 6 ದಿನಗಳಲ್ಲಿ ಬಹುತೇಕ ದೇವಾಲಯಗಳ ದರ್ಶನ
ಐದು ರಾತ್ರಿ ಮತ್ತು ಆರು ಹಗಲುಗಳ ಈ ಪ್ರವಾಸ ಪ್ಯಾಕೇಜ್ ಅನ್ನು ಡಿವೈನ್ ಕರ್ನಾಟಕ ರೂಪಿಸಿದೆ. ಪ್ರವಾಸದ ವಿವರಗಳು ಇಂತಿವೆ.
ಬೆಂಗಳೂರು : ಕರ್ನಾಟಕ ಅನೇಕ ದೇವಾಲಯಗಳ ತಾಣ. ರಾಜ್ಯದ ವಿವಿಧ ದೇವಾಲಯಗಳಿಗೆ ಭೇಟಿ ನೀಡಲು ದೇಶ ವಿದೇಶಗಳಿಂದ ಜನ ಆಗಮಿಸುತ್ತಾರೆ. ಕರ್ನಾಟಕದ ದಾರ್ಶನಿಕ ಕೇಂದ್ರಗಳಿಗೆ ಭೇಟಿ ನೀಡಲು IRCTC ಪ್ರವಾಸೋದ್ಯಮವು ವಿಶೇಷ ಪ್ಯಾಕೇಜ್‌ನೊಂದಿಗೆ ಬಂದಿದೆ. ಐದು ರಾತ್ರಿ ಮತ್ತು ಆರು ಹಗಲುಗಳ ಈ ಪ್ರವಾಸ ಪ್ಯಾಕೇಜ್ ಅನ್ನು ಡಿವೈನ್ ಕರ್ನಾಟಕ ರೂಪಿಸಿದೆ. ಈ ಪ್ಯಾಕೇಜ್ ಮೂಲಕ ಧರ್ಮಸ್ಥಳ, ಗೋಕರ್ಣ, ಹೊರನಾಡು, ಕೊಲ್ಲೂರು, ಮಂಗಳೂರು, ಮುರುಡೇಶ್ವರ, ಶೃಂಗೇರಿ ಮತ್ತು ಉಡುಪಿಗೆ ಭೇಟಿ ನೀಡಬಹುದು. ಈ ಟೂರ್ ಅಕ್ಟೋಬರ್ 8 ರಂದು ಪ್ರಾರಂಭವಾಗುತ್ತದೆ.
ಪ್ರವಾಸದ ವಿವರಗಳು ಇಂತಿವೆ :
ಪ್ರವಾಸದ ಪ್ಯಾಕೇಜ್ ಹೆಸರು: ಡಿವೈನ್ ಕರ್ನಾಟಕ (SHA08)
ದಿನಗಳ ಸಂಖ್ಯೆ: ಐದು ರಾತ್ರಿಗಳು, ಆರು ದಿನಗಳ
ಪ್ರಯಾಣ ವಿಧಾನಗಳು: ವಿಮಾನ
ಪ್ರಯಾಣ ದಿನಾಂಕ: 2023 ಅಕ್ಟೋಬರ್ 08
ಎಲ್ಲಿಗೆ ಭೇಟಿ : ಧರ್ಮಸ್ಥಳ, ಕೊಕರ್ಣ, ಹೊರನಾಡು, ಕೊಲ್ಲೂರು, ಮಂಗಳೂರು, ಮುರುಡೇಶ್ವರ, ಶೃಂಗೇರಿ, ಉಡುಪಿ
ಇದನ್ನೂ ಓದಿ : Gas Cylinder: ಶ್ರಾವಣ ಮಾಸದಲ್ಲಿ ಈ ರಾಜ್ಯದ ಜನರಿಗೆ ₹450ಕ್ಕೆ ಸಿಗಲಿದೆ ಗ್ಯಾಸ್ ಸಿಲಿಂಡರ್!
ಮೊದಲ ದಿನ 1 (ಹೈದರಾಬಾದ್-ಮಂಗಳೂರು): ಹೈದರಾಬಾದ್‌ನಿಂದ ಬೆಳಿಗ್ಗೆ ನಿರ್ಗಮನ. ಮಂಗಳೂರು ವಿಮಾನ ನಿಲ್ದಾಣ ತಲುಪಿದ ಕೂಡಲೇ IRCTC ಸಿಬ್ಬಂದಿ ನಿಮ್ಮನ್ನು ಕರೆದುಕೊಂಡು ಹೋಟೆಲ್‌ಗೆ ಕರೆದೊಯ್ಯುತ್ತಾರೆ. ಅಲ್ಲಿ ಉಪಹಾರದ ನಂತರ, ಮಂಗಳಾ ದೇವಿ ದೇವಸ್ಥಾನ, ಕದ್ರಿ ಮಂಜುನಾಥ್ ದೇವಸ್ಥಾನಕ್ಕೆ ಭೇಟಿ. ಸಂಜೆ ತಣ್ಣೀರುಬಾವಿ ಬೀಚ್, ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ. ರಾತ್ರಿ ಊಟದ ನಂತರ ಮಂಗಳೂರಿನಲ್ಲಿ ವಾಸ.
ಎರಡನೇ ದಿನ : (ಮಂಗಳೂರು-ಉಡುಪಿ): ಹೋಟೆಲ್ ನಲ್ಲಿ ತಿಂಡಿ ಮುಗಿಸಿ ಹೋಟೆಲ್ ನಲ್ಲಿ ಚೆಕ್ ಔಟ್ . ಮಂಗಳೂರಿನಿಂದ 60 ಕಿ.ಮೀ. ದೂರವಿರುವ ಉಡುಪಿ ಪ್ರಯಾಣ. ಅಲ್ಲಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ದೇವರ ದರ್ಶನ. ಮಧ್ಯಾಹ್ನ ನಿಮ್ಮನ್ನು ಸೇಂಟ್ ಮೇರಿಸ್ ದ್ವೀಪ, ಮಲ್ಬೆ ಬೀಚ್‌ಗೆ ಕರೆದುಕೊಂಡು ಹೋಗಲಾಗುತ್ತದೆ. ಉಡುಪಿಯಲ್ಲಿ ಊಟ ಮಾಡಿ ರಾತ್ರಿ ಅಲ್ಲಿಯೇ ತಂಗಬೇಕು.
ಮೂರನೇ ದಿನ : (ಉಡುಪಿ - ಹೊರನಾಡು - ಶೃಂಗೇರಿ - ಉಡುಪಿ): ಹೋಟೆಲ್‌ನಲ್ಲಿ ಬೆಳಗಿನ ಉಪಾಹಾರದ ನಂತರ, ಉಡುಪಿಯಿಂದ 120 ಕಿಮೀ ದೂರವಿರುವ ಹೊರನಾಡುಗೆ ಪ್ರಯಾಣ. ಅಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ನಂತರ ಅಲ್ಲಿಂದ ಶೃಂಗೇರಿಗೆ ಪಯಣ. ರಾತ್ರಿ ಅಲ್ಲಿಯೇ ವಾಸ.
ಇದನ್ನೂ ಓದಿ :Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ..!
4 ನೇ ದಿನ (ಉಡುಪಿ - ಕೊಲ್ಲೂರು - ಗೋಕರ್ಣ - ಮುರುಡೇಶ್ವರ): ಹೋಟೆಲ್‌ನಲ್ಲಿ ಉಪಹಾರದ ನಂತರ, ಕೊಲ್ಲೂರಿಗೆ ಪಯಣ. ಕೊಲ್ಲೂರು ಮೂಕಾಂಬಿಕೆ ದರ್ಶನದ ನಂತರ ಮಧ್ಯಾಹ್ನ ಗೋಕರ್ಣ ದೇವಾಲಯದತ್ತ ಹೆಜ್ಜೆ. ಮುರುಡೇಶ್ವರದಲ್ಲಿ ರಾತ್ರಿ ವಾಸ್ತವ್ಯ.
5ನೇ ದಿನ : (ಮುರುಡೇಶ್ವರ - ಧರ್ಮಸ್ಥಳ - ಕುಕ್ಕೆ): ಹೋಟೆಲ್‌ನಲ್ಲಿ ಉಪಹಾರದ ನಂತರ ಮುರುಡೇಶ್ವರ ದೇವಸ್ಥಾನದತ್ತ ಪಯಣ. ನಂತರ ಅಲ್ಲಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಮಂಜುನಾಥನ ದರ್ಶನವಾದ ನಂತರ ಸಂಜೆ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ರಾತ್ರಿ ಅಲ್ಲೇ ವಾಸ್ತವ್ಯ.
6 ನೇ ದಿನ : (ಕುಕ್ಕೆ - ಮಂಗಳೂರು - ಹೈದರಾಬಾದ್): ಹೋಟೆಲ್‌ನಲ್ಲಿ ಬೆಳಗಿನ ಉಪಾಹಾರ. ನಂತರ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ. ಮಧ್ಯಾಹ್ನ ಮಂಗಳೂರು ತಲುಪಿ ಸಂಜೆ 7 ಗಂಟೆಗೆ ಮಂಗಳೂರಿನಿಂದ ಹೈದರಾಬಾದ್‌ಗೆ ವಿಮಾನ. ಇಲ್ಲಿಗೆ ಪ್ರವಾಸ ಮುಕ್ತಾಯವಾಗಲಿದೆ.
ಇದನ್ನೂ ಓದಿ :ನಾಳೆಯಿಂದ ದೇಶಾದ್ಯಂತ ಬದಲಾಗಲಿವೆ ಈ ಐದು ನಿಯಮಗಳು, ನಿಮಗೂ ಗೊತ್ತಿರಲಿ!
ಪ್ಯಾಕೇಜ್ ಬೆಲೆಗಳು ಈ ಕೆಳಗಿನಂತಿವೆ :
ಒಬ್ಬರೆ ಹೊಟೇಲ್ ನಲ್ಲಿ ಉಳಿಯಲು ಬಯಸಿದರೆ ರೂ. 41,000 ಶುಲ್ಕ ವಿಧಿಸಲಾಗುತ್ತದೆ. ಅದೇ ಇಬ್ಬರು ವ್ಯಕ್ತಿಗಳಿಗೆ ರೂ. 31,900, ಮೂರು ಜನ ಇದ್ದರೆ ರೂ. 30,550 ಶುಲ್ಕ ವಿಧಿಸಲಾಗುತ್ತದೆ. 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ಹಾಸಿಗೆ ಅಗತ್ಯವಿದ್ದರೆ ರೂ. 26,550, ಹಾಸಿಗೆ ಅಗತ್ಯವಿಲ್ಲದಿದ್ದರೆ ರೂ. 23,900 ಶುಲ್ಕ ವಿಧಿಸಲಾಗುತ್ತದೆ. ಪ್ರತ್ಯೇಕ ಹಾಸಿಗೆ ಇಲ್ಲದ ಎರಡರಿಂದ ನಾಲ್ಕು ವರ್ಷದ ಮಕ್ಕಳಿಗೆ ರೂ. 19,250 ಶುಲ್ಕ ವಿಧಿಸಲಾಗುತ್ತದೆ.
ಹೈದರಾಬಾದ್-ಮಂಗಳೂರು-ಹೈದರಾಬಾದ್ ವಿಮಾನ ಟಿಕೆಟ್‌ಗಳನ್ನು ಡಿವೈನ್ ಕರ್ನಾಟಕ ಟೂರ್ ಪ್ಯಾಕೇಜ್‌ನಲ್ಲಿ ಸೇರಿಸಲಾಗಿದೆ. ಬೆಳಗಿನ ಉಪಾಹಾರ ಮತ್ತು ರಾತ್ರಿಯ ಊಟವನ್ನು ನೀಡಲಾಗುವುದು. ಮಧ್ಯಾಹ್ನದ ಊಟವನ್ನು ಪ್ರವಾಸಿಗರೇ ನೋಡಿಕೊಳ್ಳಬೇಕು. ಸ್ಥಳೀಯ ಪ್ರಯಾಣಕ್ಕೆ ಎಸಿ ವಾಹನಗಳನ್ನು ಒದಗಿಸಲಾಗುವುದು. ಪ್ರಯಾಣ ವಿಮೆ ನೀಡಲಾಗುವುದು. IRCTC ಟೂರ್ ಎಸ್ಕಾರ್ಟ್ ಸೇವೆಗಳನ್ನು ಒದಗಿಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ, IRCTC ಪ್ರವಾಸೋದ್ಯಮದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಟೂರ್ ಪ್ಯಾಕೇಜ್‌ಗಳ ವಿಭಾಗದ ಅಡಿಯಲ್ಲಿ ಡಿವೈನ್ ಕರ್ನಾಟಕ ಕ್ಲಿಕ್ ಮಾಡಿದರೆ ಸಂಪೂರ್ಣ ವಿವರ ಲಭ್ಯವಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.