MG Comet Launch: MG ಮೋಟಾರ್ಸ್ ತನ್ನ ಎರಡನೇ ಎಲೆಕ್ಟ್ರಿಕ್ ಕಾರ್ MG ಕಾಮೆಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಇರ ಬೆಲೆಯನ್ನು 7.98 ಲಕ್ಷ ರೂ. ಎಂದು ನಿಗದಿಪಡಿಸಿದೆ. ಈ ಬೆಲೆಯೊಂದಿಗೆ, ಇದು ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರು ಎನಿಸಿಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Big Update: ಇಂದಿನಿಂದ 4 ಸ್ಮಾರ್ಟ್ ಫೋನ್ ಗಳಲ್ಲಿ ಸಿಂಗಲ್ ವಾಟ್ಸ್ ಆಪ್ ಅಕೌಂಟ್ ನಿರ್ವಹಿಸಿ, ಝಕರ್ಬರ್ಗ್ ಘೋಷಣೆ


ಈ ಕಾರು ಎರಡು ವೇರಿಯೆಂಟ್’ಗಳಲ್ಲಿ ಮಾರಾಟವಾಗಲಿದೆ. ಮೇ 15 ರಿಂದ ಕಾರಿನ ಬುಕ್ಕಿಂಗ್ ಆರಂಭವಾಗಲಿದೆ. 2 ಬಾಗಿಲುಗಳ 4 ಸೀಟರ್ ಕಾರು ಇದಾಗಿದೆ. ಇದು ತುಂಬಾ ಕಾಂಪ್ಯಾಕ್ಟ್ ಗಾತ್ರದಲ್ಲಿ ಬಂದಿದೆ. ಇದರ ಉದ್ದವು 3 ಮೀಟರ್ಗಿಂತ ಕಡಿಮೆಯಿದೆ. ಇನ್ನು ಒಂದು ಬಾರಿ ಸಂಪೂರ್ಣ ಚಾರ್ಜ್‌ ಮಾಡಿದರೆ, 230 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಈ ಮೂಲಕ ಒಂದು ತಿಂಗಳವರೆಗೆ ಚಲಾಯಿಸಲು ತಗುಲುವ ವೆಚ್ಚ ಕೇವಲ 599 ರೂ.


ಈ ಕಾರು ತನ್ನ ವಿಶಿಷ್ಟ ಮತ್ತು ಕಾಂಪ್ಯಾಕ್ಟ್ ವಿನ್ಯಾಸಕ್ಕಾಗಿ ಫೇಮಸ್ ಆಗಿದೆ. ಇದು ಸ್ಪ್ಲಿಟ್ ಹೆಡ್‌ಲೈಟ್‌’ಗಳು, ಪೂರ್ಣ LED ಲೈಟ್ಸ್, ಸ್ಟೈಲಿಶ್ ವೀಲ್, ಟಾಲ್ C-ಪಿಲ್ಲರ್ ಮತ್ತು 2 ಬಾಗಿಲುಗಳೊಂದಿಗೆ ಡ್ಯುಯಲ್-ಟೋನ್ ಪೇಂಟ್ ವೈಶಿಷ್ಟ್ಯ ಹೊಂದಿದೆ. MG ಕಾಮೆಟ್ 2,974 mm ಉದ್ದ, 1,505 mm ಅಗಲ ಮತ್ತು 1,631 mm ಎತ್ತರವನ್ನು 2,010 mm ವ್ಹೀಲ್‌ಬೇಸ್‌ನೊಂದಿಗೆ ಬಂದಿದೆ.


ಈ ಕಾರಿನಲ್ಲಿ 10.25 ಇಂಚಿನ ಎರಡು ಸ್ಕ್ರೀನ್‌’ಗಳನ್ನು ನೀಡಲಾಗಿದೆ. ಇದು 2-ಸ್ಪೋಕ್ ಸ್ಟೀರಿಂಗ್ ವೀಲ್ ಹೊಂದಿದ್ದು, ಇದರ ನಿಯಂತ್ರಣ ಬಟನ್‌ಗಳು Apple iPod ಮಾದರಿಯಲ್ಲಿದೆ. ವೈಶಿಷ್ಟ್ಯಗಳ ಪಟ್ಟಿಯಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ ಪ್ಲೇ, ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್, ಡಿಜಿಟಲ್ ಕೀ, ಪವರ್ ವಿಂಡೋಸ್, ಗ್ರೇ ಇಂಟೀರಿಯರ್ ಥೀಮ್ ಮತ್ತು ಲೆದರ್ ಲೇಯರ್ಡ್ ಸ್ಟೀರಿಂಗ್ ವೀಲ್ ಸೇರಿವೆ.


ಇದನ್ನೂ ಓದಿ: Apple iPhone 14: ಕೇವಲ 3 ಸಾವಿರ ರೂ.ಗೆ iPhone 14 ಖರೀದಿಸಿ!


ಬ್ಯಾಟರಿ ಮತ್ತು ಶ್ರೇಣಿ


MG ಕಾಮೆಟ್ EV 17.3 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಸಾಮಾನ್ಯ ಹೋಮ್ ಸಾಕೆಟ್ ಮೂಲಕ 0-100% ರಿಂದ ಚಾರ್ಜ್ ಮಾಡಲು ಸುಮಾರು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. MG ಕಾರಿನಲ್ಲಿ 3.3 kW ಚಾರ್ಜರ್ ಹೊಂದಿದೆ. ಅಧಿಕೃತ ಮಾಹಿತಿಯ ಪ್ರಕಾರ, ಇದರ ವ್ಯಾಪ್ತಿಯು 230 ಕಿಲೋಮೀಟರ್. ಎಲೆಕ್ಟ್ರಿಕ್ ಮೋಟಾರ್ 42 ಪಿಎಸ್ ಗರಿಷ್ಠ ಶಕ್ತಿಯನ್ನು ಮತ್ತು 110 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.