Indigo Airline offer : ಮುಂದಿನ ದಿನಗಳಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಬಗ್ಗೆ ಯೋಚನೆ ಇದ್ದರೆ, ದೇಶೀಯ ವಿಮಾನಯಾನ ಇಂಡಿಗೋ ವಿಶೇಷ ಆಫರ್ ತಂದಿದೆ. ಇದರ ಮೂಲಕ ಕಡಿಮೆ ದರದಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಕಂಪನಿಯು ವಿಮಾನ ಪ್ರಯಾಣಿಕರಿಗೆ ವಿಮಾನ ಟಿಕೆಟ್‌ಗಳಲ್ಲಿ 2000 ರೂ.ವರೆಗೆ ರಿಯಾಯಿತಿ ನೀಡಲು ನಿರ್ಧರಿಸಿದೆ. ಕಂಪನಿಯ ಈ ಕೊಡುಗೆಯು ಆಗಸ್ಟ್ 2, 2023 ರಿಂದ ಆಗಸ್ಟ್ 4, 2023 ರವರೆಗೆ ಮಾನ್ಯವಾಗಿರುತ್ತದೆ. ಈ ಬಗ್ಗೆ ಇಂಡಿಗೋ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. 


COMMERCIAL BREAK
SCROLL TO CONTINUE READING

17 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಕಂಪನಿ : 
ಇಂಡಿಗೋ 17 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ, ಕಂಪನಿಯು ಪ್ರಯಾಣಿಕರಿಗೆ ರಿಯಾಯಿತಿಯ ಲಾಭವನ್ನು ನೀಡುತ್ತಿದೆ. ಕಂಪನಿಯಿಂದ 'ಆನಿವರ್ಸರಿ ಸೇಲ್' ಆರಂಭಿಸಲಾಗಿದೆ. ಕಂಪನಿಯು ಟಿಕೆಟ್ ಬುಕಿಂಗ್ ಮೇಲೆ ಗ್ರಾಹಕರಿಗೆ ಶೇಕಡಾ 17 ರಷ್ಟು ರಿಯಾಯಿತಿ ನೀಡುತ್ತಿದೆ.


ಇದನ್ನೂ ಓದಿ : ಕಡಿಮೆಯಾಗುವುದು ಹಾಲಿನ ದರ ! ಜನತೆಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್


ಎಲ್ಲಾ ಗ್ರಾಹಕರು ಪ್ರಯೋಜನವನ್ನು ಪಡೆದುಕೊಳ್ಳಬಹುದು : 
ಇದರೊಂದಿಗೆ ಕಂಪನಿಯು ಎಲ್ಲಾ ರೀತಿಯ ಗ್ರಾಹಕರಿಗೆ ಈ ಕೊಡುಗೆ ಲಭ್ಯವಿದೆ ಎಂದು ತಿಳಿಸಿದೆ. ಕಂಪನಿಯು ಈ ಕೊಡುಗೆಯನ್ನು 'HappyIndiGoDay' ಎಂದು ಹೆಸರಿಸಿದೆ. ಇದೆಲ್ಲದರ ಹೊರತಾಗಿ ಈ ಬಾರಿ ಗ್ರಾಹಕರಿಗೆ ತಮ್ಮ ನೆಚ್ಚಿನ ಸೀಟ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಸಂಸ್ಥೆ ನೀಡಿದೆ. ಇದಕ್ಕಾಗಿ ನೀವು 17 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ. 


 ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ ಮೂಲಕ  ಬುಕಿಂಗ್ :
ಯಾವುದೇ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ ಮೂಲಕ  ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಇಂಡಿಗೋ ಏರ್‌ಲೈನ್ ಹೇಳಿದೆ. ಎಲ್ಲಾ ರೀತಿಯ ಟಿಕೆಟ್‌ಗಳ ಮೇಲೆ ರಿಯಾಯಿತಿಯ ಲಾಭವನ್ನು ಪಡೆಯಬಹುದು. 2,000 ವರೆಗೆ ರಿಯಾಯಿತಿ ಪಡೆಯುವ ಅವಕಾಶ ಇರುತ್ತದೆ. ಇರುತ್ತದೆ.


ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾರೀ ಕುಸಿತ!


ಕ್ರೆಡಿಟ್ ಕಾರ್ಡ್‌ನಲ್ಲಿ ಕ್ಯಾಶ್‌ಬ್ಯಾಕ್  ಆಫರ್ :
ಗ್ರಾಹಕರು ಕ್ರೆಡಿಟ್ ಕಾರ್ಡ್ ಕೊಡುಗೆಗಳ ಪ್ರಯೋಜನವನ್ನು ಸಹ ಪಡೆಯುತ್ತಿದ್ದಾರೆ. ಅಮೇರಿಕನ್ ಎಕ್ಸ್‌ಪ್ರೆಸ್ ಮತ್ತು ಎಚ್‌ಎಸ್‌ಬಿಸಿಯ ಕ್ರೆಡಿಟ್ ಕಾರ್ಡ್‌ಗಳಲ್ಲಿ ಟಿಕೆಟ್ ಬುಕಿಂಗ್ ಮಾಡಿದರೆ ಹೆಚ್ಚುವರಿ ರಿಯಾಯಿತಿ ಸಿಗಲಿದೆ.  ಈ ಕಾರ್ಡ್‌ಗಳ ಮೂಲಕ ಪಾವತಿ ಮಾಡಿದರೆ ಕ್ಯಾಶ್‌ಬ್ಯಾಕ್‌ ಪ್ರಯೋಜನ ಪಡೆಯಬಹುದು. ಅಮೇರಿಕನ್ ಎಕ್ಸ್‌ಪ್ರೆಸ್ ಗ್ರಾಹಕರಿಗೆ, ಕನಿಷ್ಠ ಆರ್ಡರ್ ಮೌಲ್ಯ 5,000 ರೂ.ಗಳ ಮೇಲೆ 2,000 ರೂ.ವರೆಗೆ ಕ್ಯಾಶ್‌ಬ್ಯಾಕ್
ಸಿಗುತ್ತದೆ. HSBCಯ ಕ್ರೆಡಿಟ್ ಕಾರ್ಡ್‌ನೊಂದಿಗೆ ಪೇಮೆಂಟ್ ಮಾಡಿದರೆ  3500 ಆರ್ಡರ್ ಮೌಲ್ಯದ ಮೇಲೆ 5 ಪ್ರತಿಶತದಷ್ಟು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಪಡೆಯುವುದು ಸಾಧ್ಯವಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.