Akshay Tritiya 2023: ಚಿನ್ನಾಭರಣ ಅಲ್ಲ, ಈ ನಾಲ್ಕು ರೂಪದಲ್ಲಿ ಚಿನ್ನ ಖರೀದಿಸಿ, ಸಿಗುತ್ತೆ ಬಂಪರ್ ಲಾಭ!
Akshaya Tritiya 2023 Gold Shopping: ಇತ್ತೀಚಿನ ದಿನಗಳಲ್ಲಿ ಯುವ ಹೂಡಿಕೆದಾರರ ಹೂಡಿಕೆಯ ಪ್ರವೃತ್ತಿ ಭಾರಿ ಬದಲಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ವಿವಿಧ ಆಯ್ಕೆಗಳು ಲಭ್ಯವಾಗಿವೆ. ಹೀಗಾಗಿ ಚಿನ್ನದಲ್ಲಿ ವಿಶ್ವಾಶಾರ್ಹ ಹೂಡಿಕೆಯನ್ನು ಮಾಡುವ ಮೂಲಕ ನೀವೂ ಕೂಡ ನಿಮ್ಮ ಪೋರ್ಟ್ಫೋಲಿಯೋ ಅನ್ನು ವೈವಿಧ್ಯಮಯವಾಗಿಸಬಹುದು.
Akshaya Tritiya 2023 Gold Shopping: ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನದ ಬೇಡಿಕೆಯಲ್ಲಿ ಭಾರಿ ಏರಿಕೆಯನ್ನು ಗಮನಿಸಲಾಗುತ್ತಿದೆ. ಆಭರಣ ಮಳಿಗೆಗಳಲ್ಲಿ ಗ್ರಾಹಕರ ನೂಕುನುಗ್ಗಲು ಇತರ ದಿನಗಳಿಗಿಂತ ಹೆಚ್ಚಾಗಿದೆ. ಎಲ್ಲಾ ದೊಡ್ಡ ಮತ್ತು ಸಣ್ಣ ಆಭರಣ ವ್ಯಾಪಾರಿಗಳು ಈ ದಿನದಂದು ಕೊಡುಗೆಗಳು ಮತ್ತು ವಿಶೇಷ ರಿಯಾಯಿತಿಗಳನ್ನು ನೀಡುತ್ತಾರೆ. ಆದರೆ, ಚಿನ್ನದಲ್ಲಿನ ಹೂಡಿಕೆ ಒಂದು ಸಾಂಪ್ರದಾಯಿಕ ಹೂಡಿಕೆಯಾಗಿದೆ. ಯುವ ಹೂಡಿಕೆದಾರರಿಂದ ಹೂಡಿಕೆ ಪ್ರವೃತ್ತಿ ಕೂಡ ಬದಲಾಗಿದೆ. ಚಿನ್ನದ ಮೇಲೆ ಹೂಡಿಕೆ ಮಾಡಲು ವಿವಿಧ ಆಯ್ಕೆಗಳು ಸಹ ಲಭ್ಯವಿದೆ. ಹೀಗಾಗಿ ಚಿನ್ನದಲ್ಲಿ ವಿಶ್ವಾಸಾರ್ಹ ಹೂಡಿಕೆ ಮಾಡುವ ಮೂಲಕ ನಿಮ್ಮ ಪೋರ್ಟ್ಫೋಲಿಯೊವನ್ನು ವೈವಿಧ್ಯಗೊಳಿಸಬಹುದು.
ಚಿನ್ನದಲ್ಲಿ ಹೂಡಿಕೆಗೆ ಹಲವು ಆಯ್ಕೆಗಳಿವೆ
ಈ ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ. ಹೀಗಾಗಿ ಅಕ್ಷಯ ತೃತೀಯಾ ದಿನ ನೀವೂ ಕೂಡ ಚಿನ್ನ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಆಭರಣಗಳ ಖರೀದಿಯ ಹೊರತಾಗಿ, ನಿಮಗೆ ಚಿನ್ನದಲ್ಲಿ ಹೂಡಿಕೆ ಮಾಡಲು ಹಲವಾರು ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನೀವು ಡಿಜಿಟಲ್ ಗೋಲ್ಡ್, ಗೋಲ್ಡ್ ಇಟಿಎಫ್ (ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್), ಗೋಲ್ಡ್ ಮ್ಯೂಚುವಲ್ ಫಂಡ್ ಮತ್ತು ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆ ಮಾಡಬಹುದು. ಆಭರಣಗಳಲ್ಲಿ, ನೀವು ಮೇಕಿಂಗ್ ಶುಲ್ಕಗಳು ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ, ಇದರ ಹೊರತಾಗಿ ಕೂಡ ನಿಮಗೆ ಪರಿಶುದ್ಧ ಚಿನ್ನ ಸಿಗುವುದಿಲ್ಲ. ಏಕೆಂದರೆ ಆಭರಣಗಳನ್ನು ಪರಿಶುದ್ಧ ಚಿಣ್ಣಗಳಿಂದ ತಯಾರಿಸಲಾಗುವುದಿಲ್ಲ. ಆದರೆ ಡಿಜಿಟಲ್ ಚಿನ್ನದ ಆಯ್ಕೆಯನ್ನು ಆಯ್ದುಕೊಳ್ಳುವ ಮೂಲಕ, ನೀವು ಶುದ್ಧ ಚಿನ್ನದಲ್ಲಿ ಹೂಡಿಕೆ ಮಾಡಬಹುದು, ಅದನ್ನು ಎಲ್ಲಿ ಸುರಕ್ಷಿತವಾಗಿಡಬೇಕು ಎಂಬುದರ ಚಿಂತೆಯನ್ನು ನೀವು ಮಾಡಬೇಕಾಗಿಲ್ಲ. ವಿವಿಧ ಆಯ್ಕೆಗಳ ಮೂಲಕ ನೀವು ಚಿನ್ನದಲ್ಲಿ ಹೇಗೆ ಹೂಡಿಕೆ ಮಾಡಬಹುದು ತಿಳಿದುಕೊಳ್ಳೋಣ ಬನ್ನಿ.
1. ಡಿಜಿಟಲ್ ಚಿನ್ನ ಖರೀದಿ
ಕಳೆದ ಕೆಲವು ವರ್ಷಗಳಲ್ಲಿ ಡಿಜಿಟಲ್ ಚಿನ್ನವು ಸಾಕಷ್ಟು ಜನಪ್ರೇಯತೆಯನ್ನು ಪಡೆದುಕೊಂಡಿದೆ. ನೀವು ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿಸಬಹುದು. ಅನೇಕ ಮೊಬೈಲ್ ಇ-ವ್ಯಾಲೆಟ್‌ಗಳು, ಬ್ರೋಕರೇಜ್ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳ ಜೊತೆಗೆ, ದೊಡ್ಡ ಆಭರಣ ಕಂಪನಿಗಳು ಡಿಜಿಟಲ್ ಚಿನ್ನವನ್ನು ಖರೀದಿಸುವ ಆಯ್ಕೆಯನ್ನು ಸಹ ನೀಡುತ್ತಿವೆ. ಡಿಜಿಟಲ್ ಚಿನ್ನದ ಬೆಲೆಯನ್ನು ಭೌತಿಕ ಚಿನ್ನದ ಮಾರುಕಟ್ಟೆ ಬೆಲೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇಲ್ಲಿ ನೀವು ಪರಿಶುದ್ಧ 24 ಕ್ಯಾರೆಟ್ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ನೀವು ಅದರ ಮೇಲೆ ಯಾವುದೇ ಮೇಕಿಂಗ್ ಚಾರ್ಜ್ ಅನ್ನು ಪಾವತಿಸಬೇಕಾಗಿಲ್ಲ ಅಥವಾ ನೀವು ಯಾವುದೇ ರೀತಿಯ ಶೇಖರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
2. ಗೋಲ್ಡ್ ಇಟಿಎಫ್
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್ ಆಯ್ಕೆಯೂ ಕೂಡ ನಿಮಗೆ ಲಭ್ಯವಿದೆ. ನೀವು ಇಂತಹ ಚಿನ್ನದ ಇಟಿಎಫ್‌ಗಳಲ್ಲಿ (ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು) ಹಣವನ್ನು ಕೂಡಿಕೆ ಮಾಡಬಹುದು, ಈ ಫಂಡ್ ಮ್ಯಾನೇಜ್‌ಮೆಂಟ್ ವ್ಯವಹಾರಗಳು ಚಿನ್ನದ ಗಟ್ಟಿಯನ್ನು ಖರೀದಿಸುತ್ತವೆ. ಈ ಇಟಿಎಫ್‌ಗಳನ್ನು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗುತ್ತವೆ. ಇವು ಅತ್ಯಂತ ಸುರಕ್ಷಿತ ಹೂಡಿಕೆ ವಿಧಾನಗಳಾಗಿವೆ. ಇಲ್ಲಿ ನೀವು ಉತ್ತಮ ಆದಾಯವನ್ನು ಸಹ ಪಡೆಯುವಿರಿ. ಗೋಲ್ಡ್ ಇಟಿಎಫ್‌ನ ಒಂದು ಘಟಕವು 1 ಗ್ರಾಂಗೆ ಸಮಾನವಾಗಿರುತ್ತದೆ. ಅಂದರೆ ನೀವು 1 ಯೂನಿಟ್‌ನಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು.
3. ಗೋಲ್ಡ್ ಮ್ಯೂಚುವಲ್ ಫಂಡ್
ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಗೋಲ್ಡ್ ಇಟಿಎಫ್‌ಗಳಿಗಿಂತ ಸ್ವಲ್ಪ ಭಿನ್ನವಾಗಿವೆ. ಇಟಿಎಫ್‌ಗಳು ಚಿನ್ನದ ಮ್ಯೂಚುಯಲ್ ಫಂಡ್‌ಗಳಿಗೆ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ, ಅವು ನೇರವಾಗಿ ಭೌತಿಕ ಚಿನ್ನದಲ್ಲಿ ಹೂಡಿಕೆ ಮಾಡುವುದಿಲ್ಲ. ಆದರೆ ಚಿನ್ನದ ಆಸ್ತಿಗೆ ಸಂಬಂಧಿಸಿದ ಕಂಪನಿಗಳು ಅಥವಾ ಫಂಡ್ ಗಳಲ್ಲಿಯೂ ಕೂಡ ನೀವೂ ಹೂಡಿಕೆ ಮಾಡಬಹುದು.
4. ಸಾವರೇನ್ ಗೋಲ್ಡ್ ಬಾಂಡ್
ಸಾವರಿನ್ ಗೋಲ್ಡ್ ಬಾಂಡ್ ಕೂಡ ಚಿನ್ನದ ಹೂಡಿಕೆಯ ಒಂದು ಜನಪ್ರಿಯ ಮಾಧ್ಯಮವಾಗಿದೆ. ಇವುಗಳ ವಿಶೇಷತೆ ಎಂದರೆ ಇವುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿ ನಿರ್ವಹಿಸುತ್ತದೆ, ಹೀಗಾಗಿ ಇದು ಚಿನ್ನದಲ್ಲಿ ಹೂಡಿಕೆಗೆ ಅತ್ಯಂತ ಸುರಕ್ಷಿತ ಚಿನ್ನದ ಹೂಡಿಕೆಯಾಗಿದೆ. ಇದೊಂದು ರೀತಿಯಲ್ಲಿ ಭದ್ರತಾ ಹೂಡಿಕೆ ಕೂಡ ಹೌದು. ಆರ್‌ಬಿಐ ಈ ಚಿನ್ನದ ಬಾಂಡ್‌ಗಳನ್ನು ಸರ್ಕಾರದ ಹೆಸರಿನಲ್ಲಿ ಬಿಡುಗಡೆ ಮಾಡುತ್ತದೆ. ಇದರ ಮೇಲೆ ನೀವು ವಾರ್ಷಿಕ ಬಡ್ಡಿಯನ್ನು ಪಡೆಯಬಹುದು. ಚಿನ್ನದ ತೂಕದ ಆಧಾರದ ಮೇಲೆ ಅದನ್ನು ಖರೀದಿಸಲಾಗುತ್ತದೆ. ಇದು ಎಂಟು ವರ್ಷಗಳ ಅವಧಿಯನ್ನು ಹೊಂದಿದೆ, ಆದರೆ ನೀವು ಐದು ವರ್ಷಗಳ ನಂತರ ನೀವು ಸಾವೇರಿನ್ ಗೋಲ್ ಬಾಂಡ್ ಯೋಜನೆಯಿಂದ ನಿರ್ಗಮಿಸಬಹುದಾಗಿದೆ. ನೀವು ಅದರ ಮೇಲೆ ಸಾಲವನ್ನು ಕೂಡ ತೆಗೆದುಕೊಳ್ಳಬಹುದು ಮತ್ತು ಅದರ ಮೇಲೆ TDS ಪಾವತಿಸುವ ಅವಶ್ಯಕತೆ ಇಲ್ಲ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.