New Insurance Rule: ನೀವು ಸಹ ಯಾವುದಾದರೊಂದು ವಿಮೆಯನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದಾರೆ, ಈ ಮಹತ್ವದ ಸುದ್ದಿಯನ್ನು ತಪ್ಪದೆ ಓದಿ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ನವೆಂಬರ್ 1 ರಿಂದ ವಿಮಾದಾರರಿಗೆ KYC ವಿವರಗಳನ್ನು ಕಡ್ಡಾಯಗೊಳಿಸಲು ಯೋಜಿಸುತ್ತಿದೆ. ಇದರ ಅಡಿಯಲ್ಲಿ, ವಿಮೆಗಾಗಿ ಕ್ಲೈಮ್ ಮಾಡುವಾಗ ನೀವು ಕಡ್ಡಾಯವಾಗಿ KYC ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. IRDAI ಯ ಈ ಪ್ರಸ್ತಾಪವು ಕ್ಲೈಮ್ ಪ್ರಕ್ರಿಯೆಯಲ್ಲಿನ ಸಮಸ್ಯೆಗಳನ್ನು ಕಡಿಮೆ ಮಾಡಲಿದೆ ಎಂಬುದು ಇಲ್ಲಿ ಗಮನಾರ್ಹ. 


COMMERCIAL BREAK
SCROLL TO CONTINUE READING

ವಿಮಾ ನಿಯಮಗಳು ಬದಲಾಗಿವೆ
ಪ್ರಸ್ತುತವಾಗಿ ಜೀವೇತರ ವಿಮಾ ಪಾಲಿಸಿಯನ್ನು ಖರೀದಿಸುವಾಗ KYC ವಿವರಗಳನ್ನು ಒದಗಿಸುವುದು ಸ್ವಯಂಪ್ರೇರಿತವಾಗಿದೆ. ಆದಾಗ್ಯೂ, ರೂ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವಿಮಾ ಕ್ಲೈಮ್‌ಗಳಿಗೆ ವಿಳಾಸ ಮತ್ತು ಗುರುತಿನ ಪುರಾವೆಗಳಂತಹ KYC ದಾಖಲೆಗಳು ಕಡ್ಡಾಯವಾಗಿವೆ. ಆದರೆ ಇದೀಗ, ಹೊಸ ನಿಯಮದ ಪ್ರಕಾರ, ನಿಯಂತ್ರಕವು ಪಾಲಿಸಿಯನ್ನು ಖರೀದಿಸುವಾಗ KYC ವಿವರಗಳನ್ನು ಕಡ್ಡಾಯವಾಗಿ ಮಾಡಲು ಯೋಜಿಸುತ್ತಿದೆ. KYC ಗೆ ಸಂಬಂಧಿಸಿದ ಈ ನಿಯಮಗಳು ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಕಡ್ಡಾಯವಾಗಿರಲಿದೆ ಎಂಬುದು ಇಲ್ಲಿ ಉಲ್ಲೇಖನೀಯ.


KYC ಮಾಡಿಸುವುದರ ಪ್ರಯೋಜನಗಳನ್ನು ತಿಳಿಯಿರಿ
ಹೌದು, IRDAI ಯ ಈ ಹೊಸ ನಿರ್ಧಾರದಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯುವಿರಿ. ಸೆಂಟ್ರಲೈಸ್ದ್ ಪಾಲಿಸಿ ಡೇಟಾಬೇಸ್ ಅನ್ನು KYC ಪ್ರಕ್ರಿಯೆಯ ಮೂಲಕ ನಿಯಂತ್ರಿಸಲಾಗುತ್ತದೆ ಮತ್ತು Bima Sugam ಪೋರ್ಟಲ್‌ನಲ್ಲಿ ಪಾಲಿಸಿ ದಾಖಲೆಗಳನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ. ವಾಸ್ತವದಲ್ಲಿ, ಈ ಪೋರ್ಟಲ್‌ನಲ್ಲಿ, ಪಾಲಿಸಿದಾರರು ಇ-ವಿಮಾ ಖಾತೆಯನ್ನು ರಚಿಸಲು ಸಾಧ್ಯವಾಗುತ್ತದೆ, ಅಲ್ಲಿ ಅವರು ತಮ್ಮ ಪಾಲಿಸಿಗೆ ಸಂಬಂಧಿಸಿದ ವಿವರಗಳನ್ನು ನೋಡಲು ಸಾಧ್ಯವಾಗುತ್ತದೆ ಮತ್ತು ವಿಮಾ ಕ್ಲೈಮ್‌ಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಇದರೊಂದಿಗೆ, ನಿಮ್ಮ ವಿವರವಾದ ಮಾಹಿತಿಯನ್ನು ಇಲಾಖೆಯೊಂದಿಗೆ ಉಳಿಸಲಾಗುತ್ತದೆ.


ಈ ಕುರಿತು ಮಾತನಾಡಿರುವ SecureNow ನ ನಿರ್ದೇಶಕ ಅಭಿಷೇಕ್ ಬೋಂಡಿಯಾ, “ಅಸ್ತಿತ್ವದಲ್ಲಿರುವ ಪಾಲಿಸಿದಾರರು KYC ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕಾಗುತ್ತದೆ. ಈ ಅವಧಿಯು ಕಡಿಮೆ ಅಪಾಯದ ಗ್ರಾಹಕರಿಗೆ ಎರಡು ವರ್ಷಗಳು ಮತ್ತು ಹೆಚ್ಚಿನ ಅಪಾಯದ ಗ್ರಾಹಕರಿಗೆ ಒಂದು ವರ್ಷವಾದ್ದಾಗಿರಲಿದೆ' ಎಂದಿದ್ದಾರೆ.


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೊಂದು ಬಂಬಾಟ್ ಸುದ್ದಿ! ವೇತನದಲ್ಲಿ 49,420 ಹೆಚ್ಚಳ


KYC ಹೊಂದಿರುವುದರಿಂದ ವಿಮಾ ಮೊತ್ತವನ್ನು ಯಾವುದೇ ಮೂರನೇ ವ್ಯಕ್ತಿಗೆ ಪಾವತಿಸಲಾಗುವುದಿಲ್ಲ ಎಂಬುದನ್ನು ಖಚಿತಪಡಿಸಲಾಗುತ್ತದೆ. ಪಾಲಿಸಿದಾರರ ನಾಮಿನಿ ಮತ್ತು ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಎಲ್ಲಾ ಪಾವತಿಗಳನ್ನು ಮಾಡಬೇಕಾಗುತ್ತದೆ. ಅಂದರೆ, ಇಲಾಖೆ ಮತ್ತು ಗ್ರಾಹಕ ಇಬ್ಬರಿಗೂ ಇದರಿಂದ ಲಾಭವಾಗಲಿದೆ.


ಇದನ್ನೂ ಓದಿ-Hero Bikes: ಮಾರುಕಟ್ಟೆಯಲ್ಲಿ ಭಾರಿ ಧೂಳೆಬ್ಬಿಸಿವೆ ಹಿರೋ ಕಂಪನಿಯ ಈ ಬೈಕ್ ಗಳು


KYC ಅಗತ್ಯ
ವಿಷಯದ ತಜ್ಞರ ಪ್ರಕಾರ, ನವೆಂಬರ್ 1 ರ ನಂತರ ನಿಮ್ಮ ಪಾಲಿಸಿಯನ್ನು ನವೀಕರಿಸಲು ಹೋದರೆ, ನೀವು KYC ಕಂಪ್ಲೈಂಟ್ ಆಗಲು ನಿಮ್ಮ ಫೋಟೋ ಗುರುತು ಮತ್ತು ವಿಳಾಸ ಪುರಾವೆಯನ್ನು ಒದಗಿಸಬೇಕಾಗುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ