212 ಕಿಲೋಮೀಟರ್ ಶ್ರೇಣಿಯ ವಿದ್ಯುತ್ ಸ್ಕೂಟರ್ ಪರಿಚಯಿಸಿದ Simple ONE
ಭಾರತದ ಮುಂಚೂಣಿ ವಿದ್ಯುತ್ ವಾಹನ ತಯಾರಿಕಾ ಸಂಸ್ಥೆ ಹಾಗೂ ಪರಿಶುದ್ಧ ಶಕ್ತಿಯ ಸ್ಟಾರ್ಟ್-ಅಪ್ ಸಂಸ್ಥೆಯಾದ ಸಿಂಪಲ್ ಎನರ್ಜಿ, ರೂ. 1,45,000 ರ ಆಕರ್ಷಕ ಆರಂಭಿಕ ಬೆಲೆಯಲ್ಲಿ Simple ONE ಎಂಬ ತನ್ನ ಪ್ರಪ್ರಥಮ ವಿದ್ಯುತ್ 2-ಚಕ್ರ ವಾಹನವನ್ನು ಇಂದು ಅಧಿಕೃತವಾಗಿ ಪರಿಚಯಿಸಿತು. ಸೂಪರ್ ಇವಿ ಆದ Simple ONE, ರೂ. 1,58,000 ದಲ್ಲಿ ಲಭ್ಯವಾಗಲಿದೆ.
ಬೆಂಗಳೂರು: ಭಾರತದ ಮುಂಚೂಣಿ ವಿದ್ಯುತ್ ವಾಹನ ತಯಾರಿಕಾ ಸಂಸ್ಥೆ ಹಾಗೂ ಪರಿಶುದ್ಧ ಶಕ್ತಿಯ ಸ್ಟಾರ್ಟ್-ಅಪ್ ಸಂಸ್ಥೆಯಾದ ಸಿಂಪಲ್ ಎನರ್ಜಿ, ರೂ. 1,45,000 ರ ಆಕರ್ಷಕ ಆರಂಭಿಕ ಬೆಲೆಯಲ್ಲಿ Simple ONE ಎಂಬ ತನ್ನ ಪ್ರಪ್ರಥಮ ವಿದ್ಯುತ್ 2-ಚಕ್ರ ವಾಹನವನ್ನು ಇಂದು ಅಧಿಕೃತವಾಗಿ ಪರಿಚಯಿಸಿತು. ಸೂಪರ್ ಇವಿ ಆದ Simple ONE, ರೂ. 1,58,000 ದಲ್ಲಿ ಲಭ್ಯವಾಗಲಿದೆ. ಈ ಬೆಲೆಯು 750W ಚಾರ್ಜ್‌ಅನ್ನೂ ಒಳಗೊಂಡಿದೆ. ಆಗಸ್ಟ್1 5, 2021ರಂದು ಜಾಗತಿಕವಾಗಿ ಅನಾವರಣಗೊಂಡ Simple ONE, ತಾನು ಸ್ವೀಕರಿಸಿದ ಪ್ರಾರಂಭಿಕ ಅಭಿಪ್ರಾಯ ಮಾಹಿತಿಯ ಆಧಾರದ ಮೇಲೆ ಅನೇಕ ಸುಧಾರಣಾ ಆವರ್ತನಗಳಿಗೆ ಒಳಗಾಗಿ ಅಂತಿಮವಾಗಿ ಈಗ ಭಾರತೀಯ ರಸ್ತೆಗಳ ಮೇಲೆ ಓಡುವುದಕ್ಕೆ ಸಿದ್ಧವಾಗಿದೆ.
Simple ONEಗಾಗಿ ಮಾಡಲಾದ ಬುಕಿಂಗ್ ಪ್ರಾರಂಭವು, ಕೇವಲ 18 ತಿಂಗಳುಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಪ್ರೀಬುಕಿಂಗ್‌ಗಳನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ಅಮೋಘ ಪ್ರತಿಕ್ರಿಯೆ ಪಡೆದುಕೊಂಡಿದೆ. ಈಗ, ಅಧಿಕೃತ ಲಾಂಛನದೊಂದಿಗೆ, ಸಂಸ್ಥೆಯು ಬೆಂಗಳೂರಿನೊಂದಿಗೆ ಆರಂಭಿಸಿ, ಹಂತಹಂತವಾಗಿ ಗ್ರಾಹಕ ಡೆಲಿವರಿಗಳನ್ನು ಸಾಧ್ಯಗೊಳಿಸುವ ಯೋಜನೆಗಳನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಡೆಲಿವರಿಗಳು ಆರಂಭವಾಗಲಿದೆ. ಇದರ ಜೊತೆಗೆ ಅದು, 40-50 ನಗರಗಳಲ್ಲಿ 160-180 ರೀಟೇಲ್ ಕಾರ್ಯಾಜಾಲದ ಮೂಲಕ ತನ್ನ ಅಸ್ತಿತ್ವದೊಂದಿಗೆ ಮುಂದಿನ 12 ತಿಂಗಳುಗಳಲ್ಲಿ ಈ ನಗರಗಳಲ್ಲಿ ತನ್ನ ರೀಟೇಲ್ ಕಾರ್ಯಾಚರಣೆಗಳನ್ನು ವಿಸ್ತರಿಸಲಿದೆ.
ಇದನ್ನೂ ಓದಿ: ಮಳೆಗೆ ಕಬ್ಬನ್ ಪಾರ್ಕ್‌ನಲ್ಲಿ ಅವಾಂತರ ಬುಡ ಸಮೇತ ಕಿತ್ತು ಬಿದ್ದ ಅಪರೂಪದ ಮರಗಳು
Simple ONE ಈಗ, ನಿಶ್ಚಲ ಮತ್ತು ತೆಗೆಯಬಹುದಾದ (ಕೈಯೆಲ್ಲೆತ್ತಿಕೊಂಡು ಹೋಗಬಹುದಾದ) ಬ್ಯಾಟರಿಗಳೊಂದಿಗೆ ಸಜ್ಜಾಗಿರಲಿದ್ದು, ಐಡಿಸಿಯಲ್ಲಿ 212 ಕಿಲೋಮೀಟ್‌ಗಳ ಅಮೋಘ ಶ್ರೇಣಿಯನ್ನು ಒದಗಿಸುವ ಮೂಲಕ ಭಾರತದಲ್ಲೇ ಅತಿ ದೀರ್ಘ ಶ್ರೇಣಿಯ E2W ಆಗಿರಲಿದೆ. ವಿದ್ಯುತ್ E2W ಕ್ಷೇತ್ರದ ಈ ಹೊಸ ಮತ್ತು ತಾಜಾ ಕೊಡುಗೆಯು ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿದ್ದು(ಭಾರತ ಸರ್ಕಾರದ ಆತ್ಮನಿರ್ಭರದ ಕನಸಿಗೆ ಅನುಗುಣವಾಗಿ), 214 ಐಪಿ ಪೋರ್ಟ್‌ಫೋಲಿಯೋ ಹೊಂದಿದೆ. ಮೇಲಾಗಿ, Simple ONE ಈ ವರ್ಗದಲ್ಲೇ ಅತಿವೇಗದ E2W ಆಗಿದ್ದು, ಕೇವಲ 2.77 ಸೆಕೆಂಡುಗಳಲ್ಲಿ 0-40 kmph ವೇಗ ಪಡೆದುಕೊಳ್ಳುತ್ತದೆ. Simple ONEಅನ್ನು ಇನ್ನಷ್ಟು ವಿಶಿಷ್ಟವನ್ನಾಗಿ ಮಾಡಿರುವ ಮತ್ತೊಂದು ಅಂಶವೆಂದರೆ, ಇದು, ಐಐಟಿ-ಇಂದೋರ್ ನೊಂದಿಗೆ ಸಹಯೋಗಾತ್ಮಕವಾಗಿ ಅಭಿವೃದ್ಧಿಪಡಿಸಲಾದ ಥರ್ಮಲ್ ಮ್ಯಾನೇಜ್ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತಿರುವುದರಿಂದ, ಯಾವುದೇ ಥರ್ಮಲ್ ರನ್ನವೇ(ಶಾಖಸ್ಥಿತಿ)ಗಳನ್ನು ನಿವಾರಿಸಲು ನೆರವಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡುತ್ತಾ, ಸಿಂಪಲ್ ಎನರ್ಜಿಯ ಸ್ಥಾಪಕ ಮತ್ತು ಸಿಇಒ ಶ್ರೀ ಸುಹಾಸ್ ರಾಜ್‌ಕುಮಾರ್, “ನಮ್ಮ ಸಂಸ್ಥೆಯ ಇತಿಹಾಸದಲ್ಲೇ ಇಂದು ಅತ್ಯಂತ ಅವಿಸ್ಮರಣೀಯ ದಿನವಾಗಿದೆ. ಈ ಶುಭದಿನವು ಬಹಳ ವರ್ಷಗಳವರೆಗೆ ನಮ್ಮ ನೆನಪಿನಲ್ಲಿರುತ್ತದೆ. ಇದು ನಾವೆಲ್ಲರೂ ಹೆಮ್ಮೆ ಪಡುವಂತಹ ಮೈಲಿಗಲ್ಲನ್ನು ಪ್ರತಿನಿಧಿಸಿ,ನಮ್ಮ ಗುರಿಗಳ ಯಶಸ್ವೀ ಸಾಧನೆಗೆ ಕಾರಣವಾದ ನಮ್ಮ ಸಂಘಟಿತ ಶ್ರಮಗಳನ್ನು ನೆನಪಿಸುತ್ತದೆ. ನಮ್ಮ ಕನಸನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಮ್ಮ ಹೂಡಿಕೆದಾರರೂ ಒಳಗೊಂಡಂತೆ ಎಲ್ಲಾ ಭಾಗೀದಾರರ ಅಚಲ ಬೆಂಬಲ ಇಲ್ಲದೆ ಇದ್ದಿದ್ದರೆ ಇದು ನಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಸ್ಪರ್ಧಾತ್ಮಕವಾಗಿರುವ ಭಾರತೀಯ ಆಟೋ ಕ್ಷೇತ್ರದಲ್ಲಿ ನಮ್ಮ ಪಯಣವನ್ನು ಆರಂಭಿಸುವುದಕ್ಕೆ ನಮಗೆ ಅತ್ಯಂತ ಉತ್ಸಾಹವೆನಿಸುತ್ತಿದೆ ಮತ್ತು ಉದ್ಯಮದಿಂದ ನಾವು ಪಡೆದುಕೊಳ್ಳುವ ಅಂತರ್ದೃಷ್ಟಿಗಳು ಮತ್ತು ಕಲಿಕೆಯ ಮೂಲಕ ನಾವು ನಮ್ಮನ್ನು ಇನ್ನಷ್ಟು ವಿಕಸನಗೊಳ್ಳುವುದರ ಮೇಲೆ ಗಮನ ಕೇಂದ್ರೀಕರಿಸುತ್ತೇವೆ. ಮುಂದುವರಿದು, ತಮ್ಮ Simple ONEಅನ್ನು ಮನೆಗೆ ತೆಗೆದುಕೊಂಡು ಹೋಗಲು ಸಮಾಧಾನದಿಂದ ಕಾಯುತ್ತಿರುವ ನಮ್ಮ ಗ್ರಾಹಕರಿಗೆ ಕ್ಷಿಪ್ರವಾಗಿ ಡೆಲಿವರಿ ಮಾಡುವುದೇ ನಮ್ಮ ಅತಿದೊಡ್ಡ ಆದ್ಯತೆಯಾಗಿರುತ್ತದೆ.”ಎಂದು ಹೇಳಿದರು.
ಇದನ್ನೂ ಓದಿ: Gadag: ಶೆಟ್ಟಿಕೆರೆಯಲ್ಲಿ ಅಪರೂಪದ ಪ್ರಾಣಿ ಪ್ರತ್ಯಕ್ಷ..!
ಇದಕ್ಕೆ ತಮ್ಮ ಮಾತುಗಳನ್ನು ಸೇರಿಸುತ್ತಾ, ಸಿಂಪಲ್ ಎನರ್ಜಿಯ ಸಹಸ್ಥಾಪಕ ಶೀ ಶ್ರೇಷ್ಠ್ ಮಿಶ್ರ “Simple ONE, ಭಾರತೀಯರಿಗೆ ನಮ್ಮ ಪ್ರಾರಂಭಿಕ ಕೊಡುಗೆಯಾಗಿದ್ದು ಖಂಡಿತವಾಗಿಯೂ ನಮಗೆ ಅತ್ಯಂತ ಭಾವನಾತ್ಮಕವಾದ ಕ್ಷಣವಾಗಿದೆ. Simple ONE, ಕೌತುಕಮಯವಾದ ಅಂಶಗಳು, ಸರಿಸಾಟಿಯಿಲ್ಲದ ಕಾರ್ಯಕ್ಷಮತೆ, ವಿಸ್ತರಿತ ಶ್ರೇಣಿ, ಹಾಗೂ ಅತ್ಯುತ್ಕೃಷ್ಟ ಆರಾಮ ಮಟ್ಟಗಳ ಸಂಯೋಜನೆಯಿಂದ ಸಜ್ಜುಗೊಂಡಿದೆ. ಮಾರುಕಟ್ಟೆಯನ್ನು ವಿಚಲಿತಗೊಳಿಸಲು ಅಗತ್ಯವಾದ ಎಲ್ಲಾ ಸಾಮರ್ಥ್ಯಗಳನ್ನೂ Simple ONE ಹೊಂದಿದ್ದು, ತನ್ನ ಅತ್ಯುತ್ಕೃಷ್ಟವಾದ ಚಾಲನಾ ಡೈನಮಿಕ್ಸ್ ಮೂಲಕ ಗ್ರಾಹಕ ಮನೋಭಾವಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ನಮಗಿದೆ. ಆರಂಭಗೊಂಡಾಗಿನಿಂದಲೂ ನಾವು, ಗ್ರಾಹಕರು ಹೊಂದಿರುವುದಕ್ಕೆ ಹೆಮ್ಮೆ ಪಡುವಂತಹ ಮತ್ತು ಭಾರತೀಯ ಸ್ಟಾರ್ಟ್-ಅಪ್‌ಗಳು ಆವಿಷ್ಕಾರ-ನಿರ್ದೇಶಿತ ಉತ್ಪನ್ನ ಅಭಿವೃದ್ಧಿಯನ್ನು ಕೈಗೊಳ್ಳುವುದಕ್ಕೆ ಅಗತ್ಯವಾದ ಚೈತನ್ಯವನ್ನು ಪ್ರತಿನಿಧಿಸುವ ಉತ್ಪನ್ನವನ್ನು ಅಭಿವೃದ್ಧಿಪಡಿಸಲು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸರಿಯಾದ ಸಂಪನ್ಮೂಲಗಳ ಹೂಡಿಕೆ ಮಾಡಿರುವ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ.”ಎಂದು ಹೇಳಿದರು.
ಈ ವರ್ಷದ ಆರಂಭದಲ್ಲಿ ಬೆಂಗಳೂರಿನ ಈ ಸ್ಟಾರ್ಟ್-ಅಪ್, ತಮಿಳುನಾಡಿನ ಶೂಲಗಿರಿಯಲ್ಲಿ Simple Vision 1.0,ಎಂಬ ತನ್ನ ಹೊಸ ಉತ್ಪಾದನಾ ಕಾರ್ಖಾನೆಯನ್ನು ಉದ್ಘಾಟಿಸಿ ವಾರ್ಷಿಕ ಸರಿಸುಮಾರು 5 ಲಕ್ಷ ಯೂನಿಟ್‌ಗಳ ಸಾಮರ್ಥ್ಯವನ್ನು ಅನುಷ್ಠಾನಗೊಳಿಸಿದೆ. ಸರತಿಯಲ್ಲಿ ಇನ್ನೂ ಅನೇಕ ಉತ್ಪನ್ನಗಳಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ತನ್ನ ಹೃದ್ಭಾಗದಲ್ಲಿ ಇರಿಸಿಕೊಳ್ಳುತ್ತಾ, ಸಿಂಪಲ್ ಎನರ್ಜಿ, ಹಸಿರು ಸಂಚಾರಕ್ಕೆ ಜಾಗತಿಕ ಪರಿವರ್ತನೆಯಲ್ಲಿ ಮುನ್ನೆಲೆಯಲ್ಲಿರುವ ಗುರಿ ಹೊಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ