ಬಂಪರ್ ಮಾಸಿಕ ಆದಾಯಕ್ಕಾಗಿ ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ
Post Office MIS: ನೀವು ಪ್ರತಿ ತಿಂಗಳು ನಿಶ್ಚಿತ ಆದಾಯವನ್ನು ಪಡೆಯಲು ಬಯಸಿದರೆ ಅಂಚೆ ಕಚೇರಿಯ ಕೆಲವು ಮಾಸಿಕ ಆದಾಯ ಯೋಜನೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. ಯಾವುದೀ ಯೋಜನೆ, ಈ ಯೋಜನೆಗಳಲ್ಲಿ ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಆದಾಯ ಲಭ್ಯವಾಗಲಿದೆ ಎಂದು ತಿಳಿಯಿರಿ.
Post Office Monthly Income Scheme: ದೇಶದಲ್ಲಿ ಬ್ಯಾಂಕ್ ಗಳಂತೆಯೇ ಪೋಸ್ಟ್ ಆಫೀಸ್ ಸಹ ತನ್ನ ಗ್ರಾಹಕರಿಗಾಗಿ ಹಲವು ಯೋಜನೆಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯೂ ಒಂದು. ಈ ಯೋಜನೆಯಲ್ಲಿ ಹೂಡಿಕೆಯ ಮೇಲೆ ನಿಯಮಿತ ಆದಾಯವನ್ನು ಗಳಿಸಬಹುದಾಗಿದೆ. ಇದಕ್ಕಾಗಿ ನೀವು ನಿರ್ದಿಷ್ಟ ಮೊತ್ತವನ್ನು ಠೇವಣಿ ಮಾಡಬೇಕು. ಈ ಮೊತ್ತಕ್ಕೆ ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ನೀವು ಆದಾಯವನ್ನು ಗಳಿಸುತ್ತೀರಿ.
ವಾಸ್ತವವಾಗಿ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ನಿಮ್ಮ ಹೂಡಿಕೆಯು 5 ವರ್ಷಗಳಲ್ಲಿ ಪಕ್ವವಾಗುತ್ತದೆ. ಐದು ವರ್ಷಗಳು ಪೂರ್ಣಗೊಂಡ ಬಳಿಕ ನೀವು ನಿಮ್ಮ ಹಣವನ್ನು ಸಂಪೂರ್ಣವಾಗಿ ಹಿಂಪಡೆಯಬಹುದು. ಇದರೊಂದಿಗೆ ನೀವು ಎಷ್ಟು ಹೂಡಿಕೆ ಮಾಡಿರುತ್ತೀರೋ ಅದಕ್ಕೆ ತಕ್ಕಂತೆ ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ನಿಗದಿತ ಮೊತ್ತವನ್ನು ಪಡೆಯುತ್ತೀರಿ.
ಕೇಂದ್ರ ಸರ್ಕಾರವು 01 ಏಪ್ರಿಲ್ 2023ರಿಂದ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಠೇವಣಿ ಮಿತಿಯನ್ನು ಹೆಚ್ಚಿಸಿದೆ. ಮಾಸಿಕ ಆದಾಯ ಖಾತೆ ಯೋಜನೆಗೆ ಗರಿಷ್ಠ ಠೇವಣಿ ಮಿತಿಯನ್ನು ಏಕ ಖಾತೆಗೆ ₹ 4.5 ಲಕ್ಷದಿಂದ ₹ 9 ಲಕ್ಷಕ್ಕೆ ಮತ್ತು ಜಂಟಿ ಖಾತೆಗೆ ₹ 9 ಲಕ್ಷದಿಂದ ₹ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಗರಿಷ್ಠ ಠೇವಣಿ ಮಿತಿಯನ್ನು ₹ 4.5 ಲಕ್ಷದಿಂದ ₹ 9 ಲಕ್ಷಕ್ಕೆ ಹೆಚ್ಚಿಸಿದ ನಂತರ , ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಅಥವಾ POMIS ಖಾತೆಯನ್ನು ತೆರೆಯಲು ಅಗತ್ಯವಿರುವ ಕನಿಷ್ಠ ಮೊತ್ತವು ₹ 1000 ಆಗಿರುತ್ತದೆ. ಅದೇ ರೀತಿ, ಜಂಟಿ ಖಾತೆಯಲ್ಲಿ, ಒಟ್ಟು ಠೇವಣಿ ಮೊತ್ತದಲ್ಲಿ ಎಲ್ಲಾ ಜಂಟಿ ಖಾತೆದಾರರು ಸಮಾನ ಪಾಲನ್ನು ಹೊಂದಿರುತ್ತಾರೆ. ಪ್ರಸ್ತುತ ಈ ಯೋಜನೆಯಲ್ಲಿ ಶೇ.7.4ರಷ್ಟು ಬಡ್ಡಿ ಪಡೆಯಲಾಗುತ್ತಿದೆ.
ಇದನ್ನೂ ಓದಿ- Umang ಅಪ್ಲಿಕೇಶನ್‌ನಲ್ಲಿ ಇಪಿಎಫ್ಒ ಪಾಸ್‌ಬುಕ್ ವೀಕ್ಷಿಸುವ ಸುಲಭ ವಿಧಾನ
ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಖಾತೆಯನ್ನು ತೆರೆಯುವ ದಿನಾಂಕದಿಂದ ಒಂದು ತಿಂಗಳು ಪೂರ್ಣಗೊಂಡ ನಂತರ ಮತ್ತು ಮುಕ್ತಾಯದವರೆಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಆದಾಗ್ಯೂ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಅಥವಾ POMIS ನಲ್ಲಿ ಪ್ರತಿ ತಿಂಗಳು ಖಾತೆದಾರರು ಬಡ್ಡಿಯನ್ನು ಪಡೆಯದಿದ್ದಲ್ಲಿ ಆ ಬಡ್ಡಿ ಹಣಕ್ಕೆ ಯಾವುದೇ ರೀತಿಯ ಹೆಚ್ಚುವರಿ ಬಡ್ಡಿಯನ್ನು ನೀಡಲಾಗುವುದಿಲ್ಲ.
ಠೇವಣಿಯನ್ನು ಹಿಂಪಡೆಯುವ ನಿಯಮಗಳು:
* ಖಾತೆ ತೆರೆದ ದಿನಾಂಕದಿಂದ 1 ವರ್ಷದ ನಂತರ ಮತ್ತು 3 ವರ್ಷದ ಮೊದಲು ಖಾತೆಯನ್ನು ಮುಚ್ಚಿದರೆ, ಅಸಲು 2% ಗೆ ಸಮಾನವಾದ ಕಡಿತವನ್ನು ಕಡಿತಗೊಳಿಸಲಾಗುತ್ತದೆ ಮತ್ತು ಉಳಿದ ಮೊತ್ತವನ್ನು ಪಾವತಿಸಲಾಗುತ್ತದೆ.
* ಈ ಯೋಜನೆಯಲ್ಲಿ ಮೂರು ವರ್ಷಗಳ ಬಳಿಕ 5 ವರ್ಷಗಳ ಮೊದಲು ಖಾತೆಯನ್ನು ಮುಚ್ಚಿದರೆ ಅಸಲಿನ ಹಣಕ್ಕೆ 1% ಗೆ ಸಮಾನವಾದ ಹಣವನ್ನು ಕಡಿತಗೊಳಿಸಿ ಉಳಿದ ಹಣವನ್ನು ಪಾವತಿಸಲಾಗುತ್ತದೆ.
* ನೀವು ನಿಮ್ಮ ಠೇವಣಿ ಮೇಚ್ಯೂರಿಟಿ ಬಳಿಕ ಹಣವನ್ನು ಹಿಂಪಡೆದರೆ ಯಾವುದೇ ರೀತಿಯ ಶುಲ್ಕವನ್ನು ಕಡಿತಗೊಳಿಸುವುದಿಲ್ಲ.
ಇದನ್ನೂ ಓದಿ- ಇನ್ನು ಎರಡೇ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಿಗುವುದು ಸಿಹಿ ಸುದ್ದಿ ! ವೇತನದಲ್ಲಿ ಆಗುವುದು ಏರಿಕೆ
ಅಂಚೆ ಕಚೇರಿಯ ಎಮ್‌ಐಎಸ್ ಲೆಕ್ಕಾಚಾರದ ಪ್ರಕಾರ, ನೀವು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ 2 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದರೆ, ಇದಕ್ಕಾಗಿ 5 ವರ್ಷಗಳಲ್ಲಿ ನೀವು ಒಟ್ಟು 73,980 ಬಡ್ಡಿಯನ್ನು ಪಡೆಯುತ್ತೀರಿ. ಇವುಗಳನ್ನು 60 ತಿಂಗಳಿಗೆ ವಿಂಗಡಿಸಿದರೆ, ಪ್ರತಿ ತಿಂಗಳು 1,233 ರೂ. ಬಡ್ಡಿಯನ್ನು ಆದಾಯವಾಗಿ ಪಡೆಯುತ್ತೀರಿ.
3 ಲಕ್ಷ ರೂ.ಗಳಿಗೆ ತಿಂಗಳ ಆದಾಯ?
ಅದೇ ರೀತಿ ಈ ಯೋಜನೆಯಲ್ಲಿ ನೀವು 3 ಲಕ್ಷ ರೂ.ಗಳನ್ನು ಠೇವಣಿ ಮಾಡಿದರೆ 5 ವರ್ಷಗಳವರೆಗೆ ಒಟ್ಟು 111,000 ರೂಪಾಯಿಗಳ ಆದಾಯವನ್ನು ಗಳಿಸುತ್ತೀರಿ. ಅರ್ಥಾತ್ ಪ್ರತಿ ತಿಂಗಳು 1,850 ರೂ.ಗಳ ನಿಗದಿತ ಆದಾಯವನ್ನು ಗಳಿಸಬಹುದಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.