ನಿಮ್ಮ ಮಗಳ ಭವಿಷ್ಯಕ್ಕಾಗಿ ಎಲ್ಐಸಿಯ ಈ ಯೋಜನೆಯಲ್ಲಿ ₹ 3,447 ಪ್ರೀಮಿಯಂ ಪಾವತಿಸಿ, ₹ 22.5 ಲಕ್ಷ ಗಳಿಸಿ: ತೆರಿಗೆಯನ್ನೂ ಉಳಿಸಬಹುದು!
LIC Scheme for Daughter: ನಿಮ್ಮ ಮಗಳ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನೀವು ಬಯಸಿದರೆ ಇದಕ್ಕಾಗಿ ಎಲ್‌ಐಸಿಯ ಕನ್ಯಾದಾನ ಪಾಲಿಸಿಯಲ್ಲಿ ಹೊಡೊಯಿಕೆ ಮಾಡುವುದು ನಿಮಗೆ ಲಾಭದಾಯಕ ಎಂದು ಸಾಬೀತುಪಡಿಸಬಹುದು. ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ...
LIC Scheme for Daughter: ಪ್ರತಿ ತಂದೆ-ತಾಯಿ ತಮ್ಮ ಮಕ್ಕಳ ಭವಿಷಯ್ದ ಬಗ್ಗೆ ಚಿಂತಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಿದ್ದರೆ ಅವರ ವಿದ್ಯಾಭ್ಯಾಸದ ಜೊತೆಗೆ ಮದುವೆ ಬಗ್ಗೆಯೂ ಹೆಚ್ಚಿನ ಚಿಂತೆ ಇದ್ದೇ ಇರುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಬದಲಿಗೆ ಮಗಳು ಹುಟ್ಟಿದ ತಕ್ಷಣ ಆಕೆಯ ಭವಿಷ್ಯವನ್ನು ಭದ್ರಪಡಿಸುವ ಹಣಕಾಸಿನ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ಆಯ್ಕೆಯಾಗಿರುತ್ತದೆ. ಇದಕ್ಕಾಗಿ ಎಲ್‌ಐಸಿಯ ಕನ್ಯಾದಾನ ಪಾಲಿಸಿ (LIC Kanyadana Policy) ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಎಲ್‌ಐಸಿಯ ಕನ್ಯಾದಾನ ಪಾಲಿಸಿಯು ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿಯೇ ಇರುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಮಗಳ ಭವಿಷ್ಯಕ್ಕಾಗಿ (Investment for daughter futur) ಲಕ್ಷಾಂತರ ರೂ.ಗಳನ್ನು ಕೂಡಿಡಬಹುದು. ಅಷ್ಟೇ ಅಲ್ಲ, ಈ ಯೋಜನೆಯಲ್ಲಿ ತೆರಿಗೆ ಉಳಿಸುವುದರ ಜೊತೆಗೆ ಸಾಲ ಸೌಲಭ್ಯ ಮತ್ತು ಇನ್ನೂ ಹಲವು ಪ್ರಯೋಜನಗಳನ್ನು ಪಡೆಯಬಹುದು.
ಎಲ್ಐಸಿಯ ಕನ್ಯಾದಾನ ಪಾಲಿಸಿಯಲ್ಲಿ ಎಷ್ಟು ವರ್ಷದಿಂದ ಹೂಡಿಕೆ ಮಾಡಬೇಕು? ಮೆಚ್ಯೂರಿಟಿ ಅವಧಿ:
ನೀವು ನಿಮ್ಮ ಮಗಳಿಗಾಗಿ ಎಲ್ಐಸಿಯ ಕನ್ಯಾದಾನ ಪಾಲಿಸಿಯಲ್ಲಿ (LIC Kanyadana Policy For Daughter) ಹೂಡಿಕೆ ಮಾಡಲು ಬಯಸಿದರೆ ನಿಮ್ಮ ಮಗಳ ವಯಸ್ಸು 1 ವರ್ಷದಿಂದ 10 ವರ್ಷಗಳ ನಡುವೆ ಇರಬೇಕು. ಈ ಯೋಜನೆಯಲ್ಲಿ 13 ರಿಂದ 25 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಎಲ್ಐಸಿಯ ಕನ್ಯಾದಾನ ಪಾಲಿಸಿಯಲ್ಲಿ ನೀವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕವಾಗಿ ಪ್ರೀಮಿಯಂ ಅನ್ನು ಪಾವತಿಸಬಹುದು.
ಇದನ್ನೂ ಓದಿ- ಎಸ್‌ಬಿಐ ಗ್ರಾಹಕರಿಗೆ ಗುಡ್ ನ್ಯೂಸ್: ನೆಟ್‌ಬ್ಯಾಂಕಿಂಗ್, ಆ್ಯಪ್ ಬಳಸದವರಿಗೂ ಸಿಗುತ್ತೆ ಈ ಸೌಲಭ್ಯ
ನೀವು 25 ವರ್ಷಗಳ ಅವಧಿಯ ಯೋಜನೆಯನ್ನು ಆರಿಸಿದರೆ, ನೀವು 22 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಯೋಜನೆಯು 25 ವರ್ಷಗಳ ನಂತರ ಪಕ್ವವಾಗುತ್ತದೆ. ಮುಕ್ತಾಯದ ಸಮಯದಲ್ಲಿ, ಸಂಪೂರ್ಣ ಮೊತ್ತವನ್ನು ವಿಮಾ ಮೊತ್ತ + ಬೋನಸ್ + ಅಂತಿಮ ಬೋನಸ್ ಜೊತೆಗೆ ಪಾವತಿಸಲಾಗುತ್ತದೆ. ಈ ಪಾಲಿಸಿಯನ್ನು ತೆಗೆದುಕೊಳ್ಳಲು, ಹುಡುಗಿಯ ತಂದೆಯ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 50 ವರ್ಷಗಳು.
ಸಾಲ ಸೌಲಭ್ಯ:
ಕನ್ಯಾದಾನ ಎಲ್‌ಐಸಿ ಪಾಲಿಸಿಯನ್ನು ಖರೀದಿಸಿದ ಮೂರನೇ ವರ್ಷದಿಂದ ಈ ಯೋಜನೆಯಲ್ಲಿ ಸಾಲ ಸೌಲಭ್ಯವೂ ಲಭ್ಯವಿರಲಿದೆ. ಆದಾಗ್ಯೂ, ಎರಡು ವರ್ಷ ಪೂರ್ಣಗೊಂಡ ಪಾಲಿಸಿಯನ್ನು ನೀವು ಸರೆಂಡರ್ ಮಾಡಿದರೆ ಮಾತ್ರ ಆ ಸೌಲಭ್ಯವೂ ಲಭ್ಯವಿದೆ.
ಪ್ರೀಮಿಯಂ ಪಾವತಿಗಿದೆ ಗ್ರೇಸ್ ಅವಧಿ:
ಕನ್ಯಾದಾನ ಎಲ್‌ಐಸಿ ಪಾಲಿಸಿ ಪ್ರೀಮಿಯಂ ಪಾವತಿಸಲು ಗ್ರೇಸ್ ಅವಧಿಯೂ ಕೂಡ ಸಿಗಲಿದೆ. ಒಂದು ತಿಂಗಳಲ್ಲಿ ಪಾಲಿಸಿ ಪ್ರೀಮಿಯಂ ಅನ್ನು ಪಾವತಿಸಲು ನೀವು ಮರೆತರೆ, ನೀವು 30 ದಿನಗಳ ಗ್ರೇಸ್ ಅವಧಿಯೊಳಗೆ ಪ್ರೀಮಿಯಂ ಅನ್ನು ಪಾವತಿಸಬಹುದು. ಈ ಅವಧಿಯಲ್ಲಿ ನಿಮಗೆ ಯಾವುದೇ ವಿಳಂಬ ಶುಲ್ಕವನ್ನು ವಿಧಿಸಲಾಗುವುದಿಲ್ಲ.
ತೆರಿಗೆ ವಿನಾಯಿತಿ:
ಎಲ್‌ಐಸಿ ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ ಮಾಡುವುದರಿಂದ ಒಂದಲ್ಲ, ಎರಡು ರೀತಿಯ ತೆರಿಗೆ ಲಾಭವನ್ನು ಪಡೆಯಬಹುದು. ಮೊದಲನೆಯದಾಗಿ ಪಾಲಿಸಿಗಾಗಿ ಪಾವಟಿಸುವ ಪ್ರೀಮಿಯಂ ಮೊತ್ತಕ್ಕೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನ ಲಭ್ಯವಿದೆ. ಮೆಚ್ಯೂರಿಟಿ ಮೊತ್ತವು ಸೆಕ್ಷನ್ 10ಡಿ ಅಡಿಯಲ್ಲಿ ತೆರಿಗೆ ಮುಕ್ತವಾಗಿರುತ್ತದೆ. ಪಾಲಿಸಿಯ ವಿಮಾ ಮೊತ್ತದ ಮಿತಿಯು ಕನಿಷ್ಠ ರೂ. 1 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಯಾವುದೇ ಗರಿಷ್ಠ ಮಿತಿಯನ್ನು ಹೊಂದಿರುವುದಿಲ್ಲ.
ಇದನ್ನೂ ಓದಿ- Gruha Lakshmi Yojana: ಈ ಜಿಲ್ಲೆಗಳ ಯಜಮಾನಿಯರ ಖಾತೆಗೆ ಒಟ್ಟಿಗೆ 2 ತಿಂಗಳ ₹4,000 ಜಮಾ!
ವಿಮಾ ಪ್ರಯೋಜನ ಹೇಗೆ ಲಭ್ಯವಾಗಲಿದೆ?
ನೀವು 25 ವರ್ಷಗಳ ಅವಧಿಯ ಯೋಜನೆಯನ್ನು ತೆಗೆದುಕೊಂಡು ವಾರ್ಷಿಕ ಪ್ರೀಮಿಯಂ ರೂ 41,367 ಪಾವತಿಸುತ್ತೀರಿ ಎಂದು ಭಾವಿಸೋಣ. ಈ ಸಂದರ್ಭದಲ್ಲಿ, ನಿಮ್ಮ ಮಾಸಿಕ ಸುಮಾರು 3,447 ರೂ. ಪ್ರೀಮಿಯಂ ಅನ್ನು 22 ವರ್ಷಗಳವರೆಗೆ ಠೇವಣಿ ಮಾಡುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ಇದು 25 ವರ್ಷಗಳ ಅವಧಿಯಲ್ಲಿ 22.5 ಲಕ್ಷ ರೂಪಾಯಿಗಳ ಜೀವ ವಿಮಾ ರಕ್ಷಣೆ ಲಭ್ಯವಾಗಲಿದೆ.
ಪಾಲಿಸಿಯ ಅವಧಿಯಲ್ಲಿ ತಂದೆ ಮರಣಹೊಂದಿದರೆ, ನಂತರದ ಅವಧಿಗೆ ಮಗು ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಅಂತಹ ಸಂದರ್ಭಗಳಲ್ಲಿ ಪ್ರೀಮಿಯಂ ಅನ್ನು ಮನ್ನಾ ಮಾಡಲಾಗುತ್ತದೆ. ಇದಲ್ಲದೆ, ಅವರು 25 ವರ್ಷಗಳ ಅವಧಿ ಪೂರ್ಣಗೊಳ್ಳುವವರೆಗೆ ವಾರ್ಷಿಕವಾಗಿ 1 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ ಮತ್ತು 25 ನೇ ವರ್ಷದಲ್ಲಿ ಒಟ್ಟಿಗೆ ಮೆಚ್ಯೂರಿಟಿ ಮೊತ್ತವನ್ನು ನೀಡಲಾಗುತ್ತದೆ.
ರಸ್ತೆ ಅಪಘಾತದಿಂದ ತಂದೆ ಸಾವನ್ನಪ್ಪಿದರೆ, ನಾಮಿನಿಗೆ ಎಲ್ಲಾ ಮರಣದ ಪ್ರಯೋಜನಗಳ ಜೊತೆಗೆ 10 ಲಕ್ಷ ರೂಪಾಯಿಗಳ ಅಪಘಾತ ಮರಣದ ಲಾಭವನ್ನು ನೀಡಲಾಗುತ್ತದೆ. ಪಾಲಿಸಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಈ ಲಿಂಕ್ https://lifeinsuranceofindia.in/lic-kanyadan-policy/ ಅನ್ನು ಕ್ಲಿಕ್ ಮಾಡಿ ಪರಿಶೀಲಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.