ನವದೆಹಲಿ: Investment Planning - ಇಂದಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ  ಪೈಸೆ-ಪೈಸೆ ಕೂಡಿ ಹಾಕಿ ತಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಲು ಫಂಡ್ ನಿರ್ಮಿಸುವಲ್ಲಿ ತೊಡಗಿದ್ದಾರೆ. ಭವಿಷ್ಯದಲ್ಲಿ ತಮಗೆ ಆರ್ಥಿಕ ಮುಗ್ಗಟ್ಟು ಎದುರಾಗಬಾರದು ಎಂಬುದೇ ಅವರ ಮುಖ್ಯ ಉದ್ದೇಶ. ಒಂದು ವೇಳೆ ನೀವೂ ಕೂಡ ಹಣ ಉಳಿತಾಯಕ್ಕಾಗಿ  ಯೋಜನೆ (Investment Planning) ರೂಪಿಸುತ್ತಿದ್ದರೆ, ಕಡಿಮೆ ಉಳಿತಾಯದಲ್ಲಿಯೂ ಕೂಡ ದೊಡ್ಡ ಮೊತ್ತವನ್ನು ಸಂಪಾದಿಸಬಹುದು. ಇದಕ್ಕಾಗಿ ನಿಮಗೆ ಸರಿಯಾದ ಜಾಗದಲ್ಲಿ ಸರಿಯಾದ ಪ್ರಮಾದದಲ್ಲೂ ಹೂಡಿಕೆ ಮಾಡುವ ಅವಶ್ಯಕತೆ ಇದೆ. ಇದಕ್ಕಾಗಿ ಮ್ಯೂಚವಲ್ ಫಂಡ್ ಒಂದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ನೀವು ಅತಿ ಕಡಿಮೆ ಹೂಡಿಕೆ ಮಾಡಿ ಕೂಡ ಉತ್ತಮ ರೀತಿಯಲ್ಲಿ ಲಾಭ ಪಡೆಯಬಹುದು. ಬನ್ನಿ ಹೇಗೆ ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ತಜ್ಞರ ಅಭಿಮತ ಏನು ?
ಉತ್ತಮ ರಿಟರ್ನ್ ಬರುವ ಜಾಗದಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇದಕ್ಕಾಗಿ ಮ್ಯೂಚವಲ್ ಫಂಡ್ (Mutual Fund) ಉತ್ತಮ ಆಯ್ಕೆಯಾಗಿದೆ. FD ಅಥವಾ ಪೋಸ್ಟ್ ಆಫೀಸ್ ನಲ್ಲಿನ ಯಾವುದೇ ಒಂದು ಜೋಜನೆಯಲ್ಲಿ ಒಂದು ವೇಳೆ ನೀವು ಹೂಡಿಕೆ ಮಾಡಿದರೆ, ನಿಮಗೆ ಕೇವಲ ಶೇ. 7 ರಿಂದ ಶೇ.8 ರಷ್ಟು ಆದಾಯ ಬರುತ್ತದೆ. ಆದರೆ ಮ್ಯೂಚವಲ್ ಫಂಡ್ ನಲ್ಲಿ ನೀವು ವಾರ್ಷಿಕವಾಗಿ ಶೇ.12 ರಿಂದ ಶೇ.15 ರಷ್ಟು ಆದಾಯ ಪಡೆಯಬಹುದು (Investment And Return). ಹೀಗಾಗಿ ಇದೆ ಒಂದು ಆಯ್ಕೆ ಉತ್ತಮ ನಿಧಿ ನಿರ್ಮಾಣಕ್ಕೆ ನಿಮಗೆ ಸಹಕರಿಸಲಿದೆ. 


SIP ಮೂಲಕ ಹೂಡಿಕೆ
50 ಲಕ್ಷ ರೂ. ನಿಧಿ ಸಂಗ್ರಹ ಮಾಡಲು ನೀವು SIP ಮೂಲಕ ಅಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್ (Systematic Investment Plan) ಮೂಲಕ ಹೂಡಿಕೆ ಮಾಡಬಹುದು. ಇದರಲ್ಲಿ ನೀವು ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ಹೂಡಿಕೆ ಮಾಡಬಹುದಾಗಿದೆ. ಫ್ರಾಂಕ್ಲಿನ್ ಟೆಂಪಲ್ಟನ್ ಆಫ್ ಇಂಡಿಯಾ ವೆಬ್ಸೈಟ್ ಮೇಲೆ ಒಂದು ಕ್ಯಾಲ್ಚುಳತೊರ್ ನೀಡಲಾಗಿದೆ. ಅದರ ಪ್ರಕಾರ ಯಾರಾದರೊಬ್ಬರು ಮ್ಯೂಚವಲ್ ಫಂಡ್ ನಲ್ಲಿ ತಿಂಗಳಿಗೆ 1000 ರೂ. ಹೂಡಿಕೆ ಮಾಡಿದರೆ, 20 ವರ್ಷಗಳಲ್ಲಿ ಅವರು 20 ಲಕ್ಷ ರೂ. ಫಂಡ್ ನಿರ್ಮಿಸಬಹುದು. ಇದು ಶೇ.12 ರಷ್ಟು ಅಂದಾಜು ರಿಟರ್ನ್ ಆಗಿದೆ. ಒಂದು ವೇಳೆ ಯಾರಾದರು ತಿಂಗಳಿಗೆ ಕೇವಲ 500 ರೂ. ಹೂಡಿಕೆ ಮಾಡಿದರೆ, 20 ವರ್ಷಗಳಲ್ಲಿ ಅವರ ಹೂಡಿಕೆ ರೂ.5 ಲಕ್ಷಕ್ಕೆ ಏರಿಕೆಯಾಗಲಿದೆ. ಒಂದು ವೇಳೆ ಮೂವತ್ತು ವರ್ಷಗಳ ವರೆಗೆ ತಿಂಗಳಿಗೆ 500 ರೂ.ಹೂಡಿಕೆ ಮಾಡಿದರೆ, 17.5 ಲಕ್ಷ ರೂ ನಿಧಿ ಸಂಗ್ರಹವಾಗಲಿದೆ. ನೀವು ಎಷ್ಟು ದೀರ್ಘ ಕಾಲ ಹೂಡಿಕೆ ಮಾಡುವಿರೋ, ಅಷ್ಟೇ ದೀರ್ಘ ಕಾಲ ನಿಮಗೆ ಕಂಪೌಂಡಿಂಗ್ ಲಾಭ ಕೂಡ ಸಿಗಲಿದೆ.


ಇದನ್ನೂ ಓದಿ-


50 ಲಕ್ಷ ರೂ. ಸಂಪಾದಿಸುವುದು ಹೇಗೆ?
50 ಲಕ್ಷ ರೂ.ಗಳ ಫಂಡ್ ತಯಾರಿಸಲು ನೀವು ತಿಂಗಳಿಗೆ 1500 ರೂ. ಹೂಡಿಕೆ ಮಾಡಬೇಕು. ಅಂದರೆ ತಿಂಗಳಿಗೆ 1500 ಹೂಡಿಕೆ ಮಾಡಲು ನೀವು ನಿತ್ಯ 50 ರೂ.ಉಳಿತಾಯ ಮಾಡಬೇಕು. SIP ಕ್ಯಾಲ್ಕುಲೇಟರ್ ಪ್ರಕಾರ ತಿಂಗಳಿಗೆ ನೀವು 1500 ರೂ.ಗಳನ್ನು 30 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ, ನಿಮಗೆ 50 ಲಕ್ಷ ರೂ. ಸಿಗಲಿದೆ.


ಇದನ್ನೂ ಓದಿ-


ಈ ಸಂಗತಿಗಳನ್ನು ಗಮನದಲ್ಲಿಡಿ 
ಹೂಡಿಕೆ ತಜ್ಞರು ಹೇಳುವ ಪ್ರಕಾರ ಒಂದು ವೇಳೆ ನೀವೂ ಕೂಡ ಹೂಡಿಕೆಯನ್ನು ಆರಂಭಿಸಲು ಬಯಸುತ್ತಿದ್ದರೆ, ಟೈಮಿಂಗ್ ಗಾಗಿ ಕಾಯಬೇಡಿ ಒಂದು ವೇಳೆ ನಿಮ್ಮ ಬಳಿ ಹಣ ಉಳಿದರೆ ಅದೇ ಸಮಯದಿಂದ ನೀವು ಉಳಿತಾಯ ಆರಂಭಿಸಿ. ಆದರೆ, ಇದರಲ್ಲಿ ಹೂಡಿಕೆ ಮಾಡುವಾಗ ಸಿಸ್ಟಮ್ಯಾಟಿಕ್ ರೀತಿಯಲ್ಲಿ ಹೂಡಿಕೆ ಮಾಡಿ. ಅಂದರೆ ಸಮಯಕ್ಕೆ ತಕ್ಕಂತೆ ಹೂಡಿಕೆ ಮಾಡಿ ಅಥವಾ ಹೂಡಿಕೆಯನ್ನು ಹೆಚ್ಚಿಸುತ್ತಾ ಹೋಗಿ.


ಇದನ್ನೂ ಓದಿ-


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.